ದಿನ ಭವಿಷ್ಯ

05-11-2025

Nov 5, 2025 - 16:50
ದಿನ ಭವಿಷ್ಯ


               ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 5

೧.ಮೇಷ:
 ಎಲ್ಲ ದೃಷ್ಟಿಯಿಂದಲೂ ಅನುಕೂಲದ ದಿನ. ಉದ್ಯೋಗ, ವ್ಯವಹಾರದಲ್ಲಿ  ಅಭಿವೃದ್ಧಿ. ಉದ್ಯಮಿಗಳಿಗೆ ಲಕ್ಷ್ಮೀಕಟಾಕ್ಷದ  ದಿನ. ಕೃಷಿಕರಿಗೆ, ಹೈನು ವ್ಯವಸಾಯಗಾರರಿಗೆ ಶುಭವಾರ್ತೆ. ಅವಿವಾಹಿತರಿಗೆ ವಿವಾಹ ನಿಶ್ಚಯ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

೨. ವೃಷಭ:

 ಪಟ್ಟು ಬಿಡದ ಛಲ ಮತ್ತು ಆತ್ಮವಿಶ್ವಾಸದಿಂದ  ಸರ್ವತ್ರ ಯಶಸ್ಸು. ಉದ್ಯೋಗ, ಉದ್ಯಮದಲ್ಲಿ ಹೊಸ ಅವಕಾಶಗಳ  ಶೋಧನೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಪಾಲುದಾರಿಕೆ ವ್ಯವಹಾರದಲ್ಲಿ  ಪ್ರಗತಿ. ದಂಪತಿಗಳ ನಡುವೆ ಸಮರ್ಪಕವಾದ ಹೊಂದಾಣಿಕೆ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮಾವಳಿ, ನವಗ್ರಹ ಸ್ತೋತ್ರ ಓದಿ.

೩.ಮಿಥುನ:

 ಯಾವ ಅವಕಾಶವನ್ನೂ ಬಿಡದಿರುವುದು ಒಳ್ಳೆಯದು. ಮೇಲಧಿಕಾರಿಗಳ ಉತ್ತೇಜನ, ಸಹೋದ್ಯೋಗಿ ಮಿತ್ರರ ಸಹಕಾರ. ಶೋಕಿ ಸಾಮಗ್ರಿಗಳ  ವ್ಯಾಪಾರಿಗಳಿಗೆ ಉತ್ತಮ ಲಾಭ. ಕುಟುಂಬದ ಹಿತಕ್ಕೆ ಸಮಯ ವಿನಿಯೋಗ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

೪.ಕರ್ಕಾಟಕ:

  ಹಿಂಜರಿಕೆ ಇಲ್ಲದ  ಉದ್ಯೋಗ,ವ್ಯವಹಾರಗಳು. ಅನಿರೀಕ್ಷಿತ ಧನಲಾಭ. ಪಾಲುದಾರಿಕೆ ವ್ಯವಹಾರದಲ್ಲಿ  ಗಣನಾರ್ಹ  ಲಾಭ. ಮಕ್ಕಳಿಗೆ ವ್ಯಾಸಂಗದಲ್ಲಿ ಪ್ರಗತಿ. ಸಂಸಾರದಲ್ಲಿ ಎಲ್ಲರಿಗೂ ಆರೋಗ್ಯ ,ಉಲ್ಲಾಸ. ಗಣೇಶ ಪಂಚರತ್ನ, ವೆಂಕಟೇಶ್ವರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೫. ಸಿಂಹ:

  ಆರ್ಥಿಕ ಕ್ಷೇತ್ರದಲ್ಲಿ ವಿಶೇಷ ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ ವ್ಯವಹಾರಕ್ಕಾಗಿ ಸಣ್ಣ ಪ್ರಯಾಣ. ಸ್ವೋದ್ಯೋಗಿ ಗೃಹಿಣಿಯರಿಗೆ ಶುಭ ವಾರ್ತೆ. ವಾಹನ ಚಾಲನೆಯಲ್ಲಿ ಅವಸರ ಬೇಡ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.

೬. ಕನ್ಯಾ

  ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ.  ಖಾದಿ, ರೇಶ್ಮೆ ವಸ್ತ್ರೋದ್ಯಮದಲ್ಲಿ ಹೊಸ ಆವಿಷ್ಕಾರಗಳಿಗೆ ಆದ್ಯತೆ.ದೇವತಾರಾಧನೆಯಿಂದ ಸೌಭಾಗ್ಯ ಪ್ರಾಪ್ತಿ.  .ಶೇರು ವ್ಯವಹಾರದಲ್ಲಿ ಪ್ರಗತಿ. ಆಧ್ಯಾತ್ಮಿಕ ಸಾಧಕರಿಗೆ ಹಿತಾನುಭವ.ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೭.ತುಲಾ:
  ಸ್ಥಿರಚಿತ್ತದ ಅಧ್ಯಯನ ಹಾಗೂ ಏಕಾಗ್ರತೆಯಿಂದ ಪ್ರಯೋಜನ. ಉದ್ಯೋಗದಲ್ಲಿ ಪ್ರಗತಿ.ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಚಾಡಿ ಮಾತಾಡುವವರನ್ನು ಉಪೇಕ್ಷಿಸಿ. ಮಧ್ಯ ವಯಸ್ಕ ಗೃಹಿಣಿಯರಿಗೆ ನೆಮ್ಮದಿ. ಗಣೇಶ ಕವಚ, ವೇದಸಾರ ಶಿವಸ್ತೋತ್ರ, ದೇವೀಸ್ತೋತ್ರ ಓದಿ.

೮.ವೃಶ್ಚಿಕ: 

  ಹಿತಶತ್ರುಗಳನ್ನು ಮತ್ತು ನಯವಂಚಕರನ್ನು ನಂಬಬೇಡಿ. ಉದ್ಯೋಗಸ್ಥರಿಗೆ ಹಿತಾನುಭವ. ಉದ್ಯಮಿಗಳಿಗೆ ಸರಕಾರದ ಕಡೆಯಿಂದ ಪ್ರೋತ್ಸಾಹ. ದೇವತಾರಾಧನೆಯಲ್ಲಿ ಆಸಕ್ತಿ. ಮನೆಯಲ್ಲಿ ಸಮಾಧಾನದ ವಾತಾವರಣ. ಗಣಪತಿ ಅಥರ್ವರ್ಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ‌ ಮಂಗಲಾಷ್ಟಕ ಓದಿ.

೯. ಧನು:

  ನಿರೀಕ್ಷಿತ ಲಾಭ ಸಮಯಕ್ಕೆ ಸರಿಯಾಗಿ‌ ಕೈಸೇರಿ ಸಂತೃಪ್ತಿ.ಉದ್ಯೋಗದಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಸ್ವಂತ ಉದ್ಯಮದ ನೌಕರರಿಗೆ ಪ್ರೋತ್ಸಾಹಕ ಧನದಿಂದ ಹರ್ಷ. ಹಿರಿಯರ, ಸಂಗಾತಿಯ ಅಪೇಕ್ಷೆ ಅರಿತು ಈಡೇರಿಸಿ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯದ ಅನುಭವ. ಗಣೇಶ ಸ್ತೋತ್ರ, ಕಾರ್ತಿಕೇಯ ಸ್ತೋತ್ರ, ಋಣಮೋಚನ ಮಂಗಳ ಸ್ತೋತ್ರ ಓದಿ.

೧೦.ಮಕರ: 
 ಪ್ರತಿಭೆ, ಕಾರ್ಯಸಾಮರ್ಥ್ಯ ಪರೀಕ್ಷೆಯಲ್ಲಿ ಜಯ. ಉದ್ಯಮಕ್ಕೆ ಕ್ಷಿಪ್ರ ಯಶಸ್ಸು ಲಭಿಸುವ ಭರವಸೆ. ವಾಹನ ಬಿಡಿಭಾಗ ವ್ಯಾಪಾರ ವೃದ್ಧಿ. ದೂರದ ಬಂಧುಗಳ ಅನಿರೀಕ್ಷಿತ ಭೇಟಿ. ಹಿರಿಯರ ಆರೋಗ್ಯದ ಕಡೆಗೆ ಗಮನವಿರಲಿ. ಗಸೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧. ಕುಂಭ:

ಹಿತಶತ್ರುಗಳ ಮೇಲೆ ಕಣ್ಣಿಡಿರಿ.ಉದ್ಯೋಗದಲ್ಲಿ. ಮೇಲಧಿಕಾರಿಗಳಿಗೆ ಸಮಾಧಾನ. ಸಾಮಾಜಿಕ ರಂಗದಲ್ಲಿ‌ ಅಯಾಚಿತವಾಗಿ ಸೇವೆಗೆ ಸದವಕಾಶಗಳು ಲಭ್ಯ. ಮನೆಯಲ್ಲಿ ಆನಂದದ ವಾತಾವರಣ. ಮುದ್ರಣ ಸಾಮಗ್ರಿ ವ್ಯಾಪಾರಿಗಳಿಗೆ ಅನುಕೂಲ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.

೧೨. ಮೀನ:

ವಿತ್ತಾಪಹಾರಕರ ಬಗ್ಗೆ ಎಚ್ಚರವಿರಲಿ. ತಾಯಿಯ ಆರೋಗ್ಯ ಗಮನಿಸಿ. ಉದ್ಯೋಗ  ಕ್ಷೇತ್ರದಲ್ಲಿ ವೃತ್ತಿಬಾಂಧವರ ಸಹಕಾರ.  ಕೃಷಿಕರಿಗೆ ಸಂತೋಷದ ವಾರ್ತೆ.ವಿದ್ಯಾರ್ಥಿಗಳ ಅಧ್ಯಯನಾಸಕ್ತಿ , ಏಕಾಗ್ರತೆ ವೃದ್ಧಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.