260KG ತೂಕ ಹೆಚ್ಚಿಸಿಕೊಂಡ ಅಭಿಮನ್ಯು

ಮಾಜಿ ಕ್ಯಾಪ್ಟನ್ ಅರ್ಜುನನ ಸ್ಥಾನಕ್ಕೇರಿದ ಧನಂಜಯ.

Oct 7, 2024 - 08:04
 5
260KG ತೂಕ ಹೆಚ್ಚಿಸಿಕೊಂಡ ಅಭಿಮನ್ಯು

ಮೈಸೂರು: ಅಂದದ ದಸರಾ ವೈಭವ ಜೋರಾಗಿದ್ದು, ಚೆಂದದ ಮೈಸೂರು ದಸರಾಗೆ ಮೆರುಗು ಬಂದಿದೆ. ವಿಶ್ವವಿಖ್ಯಾತ ದಸರಾ ಸಂಭ್ರಮದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ನಳನಳಿಸುತ್ತಿದೆ.


ಇದರ ನಡುವೆಯೇ ಇಂದು ಗಜಪಡೆಗಳಿಗೆ ಇಂದು ಅಂತಿಮ ಹಂತದ ತೂಕ ಪರೀಕ್ಷೆ ನಡೆಸಲಾಗಿದ್ದು, ತೂಕ ಪರೀಕ್ಷೆಯ ವೇಳೆ ಕ್ಯಾಪ್ಟನ್ ಅಭಿಮನ್ಯುಗೆ ಅಗ್ರಸ್ಥಾನ ಪಡೆದುಕೊಂಡಿದ್ದಾನೆ.ಕಳೆದ ಬಾರಿ 5560 ಕೆಜಿ ತೂಕ ಹೊಂದಿದ್ದ ಅಭಿಮನ್ಯು, ಈ ಬಾರಿ 5820 ತೂಕ ಹೊಂದಿದ್ದು, ಒಂದು ತಿಂಗಳ ಅಂತರದಲ್ಲಿ ಕ್ಯಾಪ್ಟನ್ ಅಭಿಮನ್ಯು 260 ಕೆಜಿ ಹೆಚ್ಚಿಸಿಕೊಂಡಿದ್ದಾನೆ.ಉಳಿದಂತೆ ಲಕ್ಷ್ಮಿ 2625 ಕೆಜಿ, ಭೀಮ 5380 ಕೆಜಿ, ಏಕಲವ್ಯ 5095 ಕೆಜಿ, ರೋಹಿತ 3930 ಕೆಜಿ, ದೊಡ್ಡ ಹರವೆ ಲಕ್ಷ್ಮಿ 3570 ಕೆಜಿ, ಕಂಜನ್ 4725 ಕೆಜಿ, ಪ್ರಶಾಂತ 5240 ಕೆಜಿ, ಸುಗ್ರೀವ 5540 ಕೆಜಿ, ಗೋಪಿ 5280 ಕೆಜಿ, ವರಲಕ್ಷ್ಮಿ 3555 ಕೆಜಿ, ಮಹೇಂದ್ರ 5150 ಕೆಜಿ, ಹಿರಣ್ಯ 3160 ಕೆಜಿ, ಧನಂಜಯ 5255 ಕೆಜಿ ತೂಕ ಹೊಂದಿದ್ದಾರೆ.ಜಂಬೂ ಸವಾರಿಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದು, ನಿಶಾನೆ ಆನೆಯಾಗಿ ಧನಂಜಯ ಆಯ್ಕೆಯಾಗಿದ್ದಾನೆ. ಇದರೊಂದಿಗೆ ಧನಂಜಯ, ಮಾಜಿ ಕ್ಯಾಪ್ಟನ್ ಅರ್ಜುನನ ಸ್ಥಾನಕ್ಕೇರಿದ್ದಾನೆ. ಕಳೆದಬಾರಿ ನಿಶಾನೆ ಆನೆಯಾಗಿ ಸಾಗಿದ್ದ ಅರ್ಜುನ‌‌ ಕಾಡಾನೆ ದಾಳಿಯಲ್ಲಿ ವೀರಮರಣ ಹಿನ್ನಲೆ ಅರ್ಜುನನ ಸ್ಥಾನದಲ್ಲಿ ಧನಂಜಯ ಆಯ್ಕೆಯಾಗಿದ್ದಾನೆ.ಉಳಿದಂತೆ ಅಭಿಮನ್ಯುಗೆ ಹಿರಣ್ಯ ಲಕ್ಷ್ಮಿ ಆನೆಗಳು ಕುಮ್ಕಿ ಆನೆಗಳಾಗಲಿವೆ, ನೌಫತ್ ಆನೆಯಾಗಿ ಗೋಪಿ ಆಯ್ಕೆಯಾಗಿದ್ದಾನೆ. ಒಟ್ಟಾರೆ ಜಂಬೂಸವಾರಿಯಲ್ಲಿ 9 ಆನೆಗಳು ಭಾಗಿಯಾಗಲಿವೆ.