ಶ್ರೀ ಸಾಯಿ ಪುಡ್ ಪ್ರೊಡಕ್ಸ್ ರೂವಾರಿ ಬೆಂಗಳೂರಿನ ಮಹಿಳಾ ಉದ್ಯಮಿ ಪ್ರತಿಭಾ

ಬೆಂಗ್ಳೂರಿನ ಪ್ರತಿಭಾ ಅವರು ಆನ್‌ಲೈನ್ ವ್ಯವಹಾರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಾಧಕಿ. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಕೆಲವು ನಷ್ಟಗಳನ್ನು ಎದುರಿಸಿದರೂ ಧೈರ್ಯ ಕಳೆದುಕೊಳ್ಳಲಿಲ್ಲ. ಸವಾಲುಗಳ ನಡುವೆಯೇ ಹೊಸ ದಾರಿಯನ್ನು ಹುಡುಕಿ ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ಹಾಗೆ ಹುಟ್ಟಿದ ಕೂಸು ಸಾಯಿ ಫುಡ್ ಪ್ರಾಡಕ್ಟ್ಸ್.

Mar 25, 2026 - 10:05
Mar 25, 2026 - 17:30
ಶ್ರೀ ಸಾಯಿ ಪುಡ್ ಪ್ರೊಡಕ್ಸ್ ರೂವಾರಿ ಬೆಂಗಳೂರಿನ ಮಹಿಳಾ ಉದ್ಯಮಿ ಪ್ರತಿಭಾ
prathibha

ಬೆಂಗಳೂರಿನ ಪ್ರತಿಭಾ ಅವರು ಆನ್‌ಲೈನ್ ವ್ಯವಹಾರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಾಧಕಿ. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಕೆಲವು ನಷ್ಟಗಳನ್ನು ಎದುರಿಸಿದರೂ  ಧೈರ್ಯ ಕಳೆದುಕೊಳ್ಳಲಿಲ್ಲ. ಸವಾಲುಗಳ ನಡುವೆಯೇ ಹೊಸ ದಾರಿಯನ್ನು ಹುಡುಕಿ ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ಹಾಗೆ ಹುಟ್ಟಿದ ಕೂಸು ಸಾಯಿ ಫುಡ್ ಪ್ರಾಡಕ್ಟ್ಸ್.

ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ತುಪ್ಪ, ಜೇನು ತುಪ್ಪ ಸೇರಿದಂತೆ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ಆನ್‌ಲೈನ್ ಮೂಲಕ ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಆರಂಭಿಸಿದರು.  ಇಂದು ಅವರ ಉತ್ಪನ್ನಗಳು ಬೆಂಗ್ಳೂರಿನ ಅನೇಕ ಮನೆಗಳಲ್ಲಿ ಹೆಸರು ಪಡೆದಿವೆ.


ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಅವರ ಸಾಧನೆಯ ಹಿಂದೆ ಮೂಲತ: ತೀರ್ಥಹಳ್ಳಿಯವರಾದ ಅವರ ಪತಿಯ ಸಹಕಾರವೂ ಮಹತ್ತರವಾಗಿದೆ. ಇಂದು ಐನೂರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಪ್ರತಿಭಾ ಅವರು ಹತ್ತಕ್ಕೂ ಹೆಚ್ಚು ರೀಸೆಲ್ಲರ್‌ಗಳನ್ನು ಹೊಂದಿದ್ದು, ನಾಲ್ಕಾರು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ಸವಾಲುಗಳನ್ನು ಅವಕಾಶವನ್ನಾಗಿ ಮಾಡಿಕೊಂಡು ಪರಿಶ್ರಮದಿಂದ ಮುನ್ನಡೆಯುವ ಅವರ ಪಯಣ ನಿಜಕ್ಕೂ ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದೆ.