ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ
ಜ್ಯೋತಿರ್ಮಯ.
ಅದೃಷ್ಟ ಸಂಖ್ಯೆ 6
1. ಮೇಷ:
ಆಹ್ಲಾದದ ಅನುಭವದೊಂದಿಗೆ ದಿನಾರಂಭ. ಉದ್ಯೋಗ ಸ್ಥಾನದಲ್ಲಿ ಹೊಸ ಬಗೆಯ ಕೆಲಸಗಳು. ಉದ್ಯಮಗಳು ಸಮಸ್ಯೆಗಳಿಂದ ಮುಕ್ತ. ಲಕ್ಷ್ಮೀ ಕಟಾಕ್ಷಕ್ಕೆ ಗುರಿಯಾಗುವಿರಿ. ಉತ್ತರ ದಿಕ್ಕಿನಿಂದ ಸಂತೋಷ ವಾರ್ತೆ. ಗಣೇಶ ಕವಚ, ಮಹಾಲಕ್ಷ್ಮಿ ಅಷ್ಟಕ, ಗುರುಸ್ತೋತ್ರ ಓದಿ.
2.ವೃಷಭ:
ಪೂರ್ವಯೋಜನೆಯಂತೆ ಕೈಗೊಂಡ ಕಾರ್ಯಗಳು ಸುಗಮ. ಸರಕಾರಿ ನೌಕರರಿಗೆ ವರ್ಗಾವಣೆಗೆ ಕ್ಷಣಗಣನೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಲಾಭ. ಗೃಹೋದ್ಯಮದ ಉತ್ಪನ್ನಗಳಿಂದ ಆದಾಯ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
3.ಮಿಥುನ:
ಮೂರ್ಖರೊಂದಿಗೆ ವ್ಯರ್ಥ ವಾಗ್ವಾದ. ಉದ್ಯಮಿಗಳಿಗೆ ಸಂತೋಷ ನೀಡುವ ಯೋಜನೆಗಳು. ಸರಕಾರಿ ನೌಕರರಿಗೆ ಹೆಚ್ಚಿದ ಜವಾಬ್ದಾರಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಅಜ್ಞಾನಿಗಳಿಗೆ ಅರಿವು ಮೂಡಿಸುವ ಪ್ರಯತ್ನ ವಿಫಲ. ಗಣೇಶ ಪಂಚರತ್ನ, ಶಿವ ಪಂಚಾಕ್ಷರ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
4.ಕರ್ಕಾಟಕ:
ಅಸಹಾಯಕರಿಗೆ ಆವಶ್ಯಕತೆಗೆ ತಕ್ಕಂತೆ ಧನಸಹಾಯ. ಉದ್ಯೋಗದಲ್ಲಿ ವೇತನ ಏರಿಕೆ. ನೌಕರ ವರ್ಗಕ್ಕೆ ಒಡೆಯರ ಔದಾರ್ಯದಿಂದ ಹರ್ಷ. ಹೊಸ ನೌಕರರರಿಗೆ ಮಾರ್ಗದರ್ಶನದ ಜವಾಬ್ದಾರಿ. ಮನೆಯಲ್ಲಿ ದೇವತಾ ಕಾರ್ಯದ ಸಂಭ್ರಮ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
5. ಸಿಂಹ:
ಉದ್ಯೋಗ ಸ್ಥಾನದಲ್ಲಿ ಕಾಮಗಾರಿಗಳು ಮುಕ್ತಾಯ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಯಂತ್ರೋಪಕರಣ ಮಾರಾಟಗಾರರಿಗೆ ನಿರೀಕ್ಷೆ ಮೀರಿದ ಲಾಭ. ಸಿವಿಲ್ ಎಂಜಿನಿಯರರಿಗೆ ಹೊಸ ಯೋಜನೆಗಳು ಲಭ್ಯ . ವ್ಯವಹಾರದ ಸಂಬಂಧ ಪ್ರಯಾಣ ನಿಶ್ಚಯ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಕವಚ ಓದಿ.
6.ಕನ್ಯಾ:
ವಿಶಾಲ ಕಾರ್ಯವ್ಯಾಪ್ತಿಯಲ್ಲಿ ಉದ್ಯೋಗ ಮುಂದುವರಿಕೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸದ ಸಾಧ್ಯತೆ. ಹಿರಿಯರ ಯೋಗಕ್ಷೇಮ ನಿರ್ವಹಣೆಗೆ ಯೋಗ್ಯ ವ್ಯವಸ್ಥೆ. ವಧೂ- ವರ ಅನ್ವೇಷಣೆಯಲ್ಲಿ ಮಗ್ನತೆ. ಗೃಹೋದ್ಯಮ ತ್ವರಿತ ಅಭಿವೃದ್ಧಿ . ಗಣೇಶ ಅಷ್ಟಕ, ವೇದಸಾರ ಶಿವಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
7.ತುಲಾ:
ಮನೋಬಲ ವೃದ್ಧಿಯೊಂದಿಗೆ ಕಾರ್ಯದ ವೇಗ ಹೆಚ್ಚಳ. ಕಾರ್ಯಕ್ಷೇತ್ರದಲ್ಲಿ ಪರಿಸ್ಥಿತಿ ಸುಧಾರಣೆ. ಸಂಗಾತಿಯ ಮನೋಧರ್ಮದೊಡನೆ ಉತ್ತಮ ಹೊಂದಾಣಿಕೆ. ಉದ್ಯೋಗ ಅರಸುತ್ತಿರುವವರಿಗೆ ಒಳ್ಳೆಯ ಅವಕಾಶಗಳು. ಶಿವೋಪಾಸನೆಯಿಂದ ಇಷ್ಟಾರ್ಥ ಸಿದ್ಧಿ. ಗಣೇಶ ಕವಚ, ಶಿವಕವಚ, ಶನಿಸ್ತೋತ್ರ ಓದಿ.
8. ವೃಶ್ಚಿಕ:
ಗುರ್ವನುಗ್ರಹದಿಂದ ಸಂತೋಷ ತರುವ ಬೆಳವಣಿಗೆಗಳು. ಸಂಸ್ಥೆಯ ಮುಖ್ಯಸ್ಥರಿಂದ ಯೋಗಕ್ಷೇಮ ವಿಚಾರಣೆ. ಮಕ್ಕಳಿಂದ ಹೊಸ ಉದ್ಯಮ ಆರಂಭ. ಕೃಷಿಕಾರ್ಯದಲ್ಲಿ ಯುವಜನರ ಮುನ್ನಡೆ. ಸಾಮಾಜಿಕ ಕಾರ್ಯಗಳಲ್ಲಿ ಪಾಲುಗೊಳ್ಳುವ ಆಸಕ್ತಿ. ಗಣೇಶ ಕವಚ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ದೇವೀಸ್ತೋತ್ರ ಓದಿ.
9.ಧನು:
ಉದ್ಯೋಗ ಸ್ಥಾನದಲ್ಲಿ ಮುನ್ನಡೆ. ಸಮಾಜ ಅಭಿವೃದ್ಧಿ ಮತ್ತು ಸುಧಾರಣೆಯ ಕಾರ್ಯಕ್ರಮಗಳಲ್ಲಿ ಭಾಗಿ. ಪರಿಸರ ಸ್ವಚ್ಛತೆಯ ಕಾರ್ಯಕ್ರಮಗಳ ನೇತೃತ್ವ. ಉಪೇಕ್ಷಿತ ವರ್ಗದ ಮಕ್ಕಳಿಗೆಅಕ್ಷರ ಬೋಧನೆ. ಸಂಗಾತಿಯ ಆರೋಗ್ಯ ಸುಧಾರಣೆಗೆ ಪ್ರಯತ್ನ. ಗಣಪತಿ ಅಥರ್ವಶೀರ್ಷ, ನರಸಿಂಹ ಕವಚ, ಸೂರ್ಯಮಂಡಲ ಸ್ತೋತ್ರ ಓದಿ.
10.ಮಕರ:
ಹೆಚ್ಚುವರಿ ಆದಾಯ ಹೊಂದಲು ಮುಂದುವರಿದ ಪ್ರಯತ್ನ. ವಸ್ತ್ರ, ಸಿದ್ಧ ಉಡುಪು, ಆಭರಣ. ಉದ್ಯಮಗಳಿಗೆ ಶುಭಕಾಲ. ಕೃಷಿ ಸಂಬಂಧಿ ಉದ್ಯಮಗಳ ಅಭಿವೃದ್ಧಿ. ಕರಕುಶಲ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಳ. ಹಿರಿಯ ವ್ಯಕ್ತಿಯ ಹಿತವಚನ ಪಾಲನೆಯಿಂದ ಶುಭ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
11.ಕುಂಭ:
ಉದ್ಯೋಗದಲ್ಲಿ ಹೊಸ ಬಗೆಯ ಅನುಭವಗಳು. ಉದ್ಯಮದ ಉತ್ಪನ್ನಗಳಿಗೆ ಸಮರ್ಥ ಮಾರಾಟಗಾರರ ಅನ್ವೇಷಣೆ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸುವ ಪ್ರಯತ್ನ. ಗೃಹಿಣಿಯರ ಸ್ವೋದ್ಯೋಗ ಯೋಜನೆ ಯಶಸ್ವಿ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಮಾಧಾನದ ವಾತಾವರಣ. ಗಣೇಶ ದ್ವಾದಶನಾಮ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
12. ಮೀನ:
ಗುರುಸ್ಮರಣೆಯಿಂದ ಕಾರ್ಯಕ್ಕೆ ಯಶಸ್ಸು. ವೃತ್ತಿಬಾಂಧವರಿಂದ ಉತ್ಸಾಹಪೂರ್ಣ ಸಹಕಾರ. ಸರಕಾರಿ ಇಲಾಖೆಗಳಿಂದ ಸಕಾರಾತ್ಮಕ ಸ್ಪಂದನ. ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಗೌರವ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ,ಶನಿಸ್ತೋತ್ರ ಓದಿ.