ಶೆಟ್ಟಿಹಳ್ಳಿಯಲ್ಲಿ ಬಿಜೆಪಿ ಸದಸ್ಯತ್ವ ಮಹಾಸಂಪರ್ಕ ಅಭಿಯಾನಕ್ಕೆ ಶೋಭಾ ಕರಂದ್ಲಾಜೆ ಚಾಲನೆ
ಶೆಟ್ಟಿಹಳ್ಳಿಯಲ್ಲಿ ವಾರ್ಡ್ ಆಧ್ಯಕ್ಷ ಶೆಟ್ಟಿಹಳ್ಳಿ ಸುರೇಶ್ ನೇತೃತ್ವದಲ್ಲಿ ಬಿಜೆಪಿ ಸದಸ್ಯತ್ವ ಆಭಿಯಾನ ಮಹಾಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ
ಶೆಟ್ಟಿಹಳ್ಳಿಯಲ್ಲಿ ಬಿಜೆಪಿ ಸದಸ್ಯತ್ವ ಮಹಾಸಂಪರ್ಕ ಅಭಿಯಾನ
ದಾಸರಹಳ್ಳಿ : ರಾಷ್ಟ್ರವ್ಯಾಪ್ತಿ ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ಈಗಾಗಲೇ ಮೋದಿಯವರು ಚಾಲನೆ ನೀಡಿದ್ದಾರೆ. 2047 ರ ವೇಳೆಗೆ ಅಭಿವೃದ್ಧಿ ಹೊಂದುವ ಭಾರತದ ಗುರಿಯನ್ನು ಸಾಧಿಸಲು ಯುವಜನರನ್ನು ಸಂಪರ್ಕಿಸಬೇಕು'ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ತಿಳಿಸಿದರು.
ನೀಡಿ ಮಾತನಾಡಿದರು.
18 ರಿಂದ 25 ವರ್ಷದೊಳಗಿನ ಯುವಕರು 2047 ರಲ್ಲಿ ನನ್ನ ಭಾರತದ ಕನಸಿಗೆ ಶಕ್ತಿಯ ದೊಡ್ಡ ಮೂಲವಾಗಿದ್ದಾರೆ. ಆದ್ದರಿಂದ, ಅಭಿವೃದ್ಧಿ ಹೊಂದುವಭಾರತದ ಗುರಿಯನ್ನು ಪೂರೈಸಲು ಅವರನ್ನು ಸಂಪರ್ಕಿಸಬೇಕು. ಅವರು ನೇಷನ್ ಫಸ್ಟ್ ಎಂಬ ಕಲ್ಪನೆಯೊಂದಿಗೆ ಸಂಪರ್ಕ ಹೊಂದಿರಬೇಕು " ಪಕ್ಷಕ್ಕೆ 10 ಕೋಟಿ ಹೊಸ ಸದಸ್ಯರನ್ನು ಸೇರಿಸುವ ಗುರಿಯನ್ನು ಹೊಂದಲಾಗಿದೆ. ದಾಸರಹಳ್ಳಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಸದಸ್ಯತ್ವವನ್ನು ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೆ ಬಂದಾಗ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಗರಿಷ್ಠ ಸಂಖ್ಯೆಯ ಮಹಿಳಾ ಅಭ್ಯರ್ಥಿಗಳು ಚುನಾಯಿತರಾಗುವ ರೀತಿಯಲ್ಲಿ ಪಕ್ಷವನ್ನು ವಿಸ್ತರಿಸುವಂತೆ ಅವರು ಬಿಜೆಪಿ ಸದಸ್ಯರನ್ನು ಕೇಳಿದರು.
'ಇಡೀ ದೇಶದಲ್ಲಿ ನಮ್ಮ ಕ್ಷೇತ್ರ ಹೆಚ್ಚು ಬಿಜೆಪಿ ಸದಸ್ಯತ್ವ ಮಾಡುವ ಹೆಗ್ಗಳಿಕೆಗೆ ಪಾತ್ರವಾಗಬೇಕು ಎಂಬ ಉದ್ದೇಶದಿಂದ ನಮ್ಮ ಕಾರ್ಯಕರ್ತರು ಸದಸ್ಯತ್ವ ಮಾಡುತ್ತಿದ್ದಾರೆ. ಈಗಾಗಲೇ 55,000ಕ್ಕೂ ಹೆಚ್ಚು ಸದಸ್ಯತ್ವ ಮಾಡಿದ್ದಾರೆ' ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಈ ಸಂಧರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಶೆಟ್ಟಿಹಳ್ಳಿ ವಾರ್ಡ್ ಅಧ್ಯಕ್ಷ ಬಿ.ಸುರೇಶ್, ಬಿಜೆಪಿ ಹಿರಿಯ ಮುಖಂಡ ಮಂಜುನಾಥ್,ಪ್ರಧಾನ ಕಾರ್ಯದರ್ಶಿ ವಿನೋದ್ ಗೌಡ, ಅಬ್ಬಿಗೆರೆ ಮಂಜುನಾಥ್ ಗೌಡ , ಕಿರಣ್ ಕುಮಾರ್, ಮಹಿಳಾ ಮುಖಂಡರಾದ ಶಿಲ್ಪ ಸುರೇಶ್, ಸುರೇಖ , ಭಾಗ್ಯಮ್ಮ, ಗೌರಮ್ಮಇನ್ನೂ ಮುಂತಾದವರು ಇದ್ದರು.