ರಾಮಾಯಣ ಮತ್ತು ಮಹಾಭಾರತದ ಕಥೆ ಹೇಳುವ ದಸರಾ ಗೊಂಬೆಗಳ ಅಲಂಕಾರಿಕ ಚಿತ್ರಣ

Oct 8, 2024 - 15:11
 6
ರಾಮಾಯಣ ಮತ್ತು ಮಹಾಭಾರತದ ಕಥೆ ಹೇಳುವ ದಸರಾ ಗೊಂಬೆಗಳ ಅಲಂಕಾರಿಕ ಚಿತ್ರಣ

ವರದಿ: ನಂದೀಶ್ ಗೌಡ ನೆಲಮಲೆ

ದಾಸರಹಳ್ಳಿ: ತಿರುಪತಿಯ ಏಳು ಬೆಟ್ಟದ ಪರ್ವತಗಳು, ಹಂಪಿ ಉತ್ಸವದ ಚಿತ್ರಣ, ಸುಂದರ ಸೊಬಗಿನ ಹಳ್ಳಿಯ ಚಿತ್ರಣ, ರಾಮಾಯಣ ಮತ್ತು ಮಹಾಭಾರತ ಕಥೆ ಹೇಳುವ ಗೊಂಬೆಗಳ ಅಲಂಕಾರಿಕ ಚಿತ್ರಣ, ದಸರಾ ಉತ್ಸವ ಇವೆಲ್ಲವೂ ಕೂಡ ದಸರಾ ಹಬ್ಬದ ಪ್ರಯುಕ್ತ ಅಂದ್ರಹಳ್ಳಿಯ ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದ ಶಾಲೆಯ ಮಕ್ಕಳಿಂದ ಅಚ್ಚರಿಯ ರೀತಿಯಲ್ಲಿ ಅದ್ಭುತವಾಗಿ ದಸರಾ ಗೊಂಬೆಗಳಿಂದ ಅನಾವರಣಗೊಂಡಿವೆ.

ಮಹಾಭಾರತದಲ್ಲಿ ಶ್ರೀ ಕೃಷ್ಣನ ಜನನದಿಂದ ಪ್ರಾರಂಭವಾಗಿ ಶಿವಲಿಂಗ ಮರ್ದನ, ಬಕಾಸುರನ ವಧೆ, ಕಂಸ ವಧೆ, ಶ್ರೀ ಕೃಷ್ಣನ ಲೀಲೆ, ಬೃಂದಾವನ, ಶ್ರೀ ಕೃಷ್ಣ ಸುಧಾಮ, ದ್ರೌಪದಿಯ ಸ್ವಯಂವರ, ಗೀತಾ ಉಪದೇಶ, ದುರ್ಯೋಧನನ ಸಂಹಾರ ಇನ್ನೂ ಮುಂತಾದ ಕಥೆ ಹೇಳುವ ಗೊಂಬೆಗಳಿಂದ ಕ್ರಮಬದ್ಧವಾಗಿ ಅಲಂಕೃತವಾಗಿ ಗಮನಸೆಳೆದಿವೆ.

ರಾಮಾಯಣದ 7 ಕಾಂಡಗಳ ಚಿತ್ರಣದಲ್ಲಿ ಶ್ರೀ ರಾಮನ ಜನನದಿಂದ ಪ್ರಾರಂಭವಾಗಿ ಬಾಲ್ಯ, ತಾಟಕಿಯ ಸಂಹಾರ, ಸೀತಾ ಸ್ವಯಂವರ, ಶಿವ ಧನಸ್ಸು, ವನವಾಸ, ಸಂಜೀವಿನಿ ಪರ್ವತ,ಭರತ ಶ್ರೀರಾಮನ ಪಾದಕ್ಕೆ ಸ್ವೀಕಾರ, ಲಕ್ಷ್ಮಣ ರೇಖೆ, ಸೀತಾಪಹರಣ, ಶ್ರೀರಾಮ ಸೇತು ನಿರ್ಮಾಣ, ಹನುಮಂತ ಲಂಕೆ ದಹನ, ರಾವಣ ಸಂಹಾರ, ಶ್ರೀ ರಾಮನ ಪಟ್ಟಾಭಿಷೇಕದಿಂದ ಅಶ್ವಮೇಧ ಯಾಗದವರೆಗೂ ಗೊಂಬೆಗಳಿಂದ ಸಂಪೂರ್ಣ ರಾಮಾಯಣದ ಕಥೆಯನ್ನು ಇಲ್ಲಿ ಮನೋಜ್ಞವಾಗಿ ಅಭಿವ್ಯಕ್ತಗೊಳಿಸಲಾಗಿದೆ.

'ನಮ್ಮ ಸಂಪ್ರದಾಯ, ಸಂಸ್ಕೃತಿ ಮರೆಯಾಗಬಾರದು. ರಾಮಾಯಣ, ಮಹಾಭಾರತದಲ್ಲಿ ಬರುವಂತಹ ಸಂದೇಶ, ನೀತಿ, ಧರ್ಮ ರಕ್ಷಣೆ, ಉಪದೇಶವನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ

ಗಳಿಂದ ವಿಶೇಷವಾಗಿ ಅಲಂಕರಿಸಿ ಗುರುಗಳ ಮಾರ್ಗದರ್ಶನದಲ್ಲಿ ಮೂಡಿಬಂದಿದೆ. ಮಕ್ಕಳ ಈ ಪ್ರತಿಭೆ ನಿಜಕ್ಕೂ ಅಚ್ಚರಿಯಾಗಿದೆ. ಈ ಪ್ರದರ್ಶನವನ್ನು ನವರಾತ್ರಿ ಮುಗಿಯುವವರೆಗೂ ಪೋಷಕರು ಮತ್ತು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ' ಎಂದು ಶಾಲೆಯ ಕಾರ್ಯದರ್ಶಿ ಭರತ್ ಸೌಂದರ್ಯ ತಿಳಿಸಿದರು.

ಈ ವರ್ಷ ವಿಶೇಷವಾಗಿ ನಮ್ಮ ಶಾಲೆಯ ಮಕ್ಕಳು ಗೊಂಬೆಗಳ ಪ್ರದರ್ಶನ ಏರ್ಪಡಿಸಿ ಬೆಟ್ಟ ಗುಡ್ಡದಲ್ಲಿ ಹಳ್ಳಿಯ ರೈತರ ಜೀವನ, ತಿರುಪತಿಯ ಏಳು ಬೆಟ್ಟಗಳ ಅನಾವರಣ, ಹಂಪಿ ಉತ್ಸವ, ರಾಮಾಯಣ ಮಹಾಭಾರತದಂತಹ ಕಥೆಗಳ ಬಗ್ಗೆ ಮಕ್ಕಳು ತಿಳಿದು ಅದನ್ನು ಪೋಷಕರಿಗೆ ತಿಳಿಸುತ್ತಿದ್ದಾರೆ. ಇದಕ್ಕೆ ನಮ್ಮ ಮ್ಯಾನೇಜ್ಮೆಂಟ್ ಮತ್ತು ಪೋಷಕರ ಸಹಕಾರ ಮಹತ್ವದ್ದಾಗಿದೆ'ಎಂದು ಪ್ರಾಂಶುಪಾಲರಾದ ಶಾರದಾ ಅವರು ತಿಳಿಸಿದರು.