ದಿನ ಭವಿಷ್ಯ

16-06-2025

Jun 16, 2025 - 04:00
ದಿನ ಭವಿಷ್ಯ

                   ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 7

೧.ಮೇಷ:


 ನಿರಂತರ ಪ್ರಯತ್ನದ ಮೂಲಕ ಸಮಸ್ಯೆಗಳಿಂದ  ವಿಮೋಚನೆ.ಬಹುಮುಖ  ಉದ್ಯಮದಿಂದ ಲಾಭ. ಒಂದೇ ಲಕ್ಷ್ಯವನ್ನು ಸಾಧಿಸುವ ಪ್ರಯತ್ನದಲ್ಲಿ ಜಯ.  ಲೇವಾದೇವಿ, ಸಟ್ಟಾ ವ್ಯವಹಾರ ಬೇಡ  ಎಲ್ಲರಿಗೂ ಆರೋಗ್ಯ ಮತ್ತು ಆನಂದ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ

೨.ವೃಷಭ:

  ಹಿತಶತ್ರುಗಳನ್ನು ದೂರವಿಡುವುದನ್ನು ಕಲಿಯಿರಿ. ಉದ್ಯೋಗ ಸ್ಥಾನದಲ್ಲಿ ಗೌರವದ ಸ್ಥಾನ. ಉದ್ಯಮದಲ್ಲಿ ಕಡಿಮೆಯಾದ ಪೈಪೋಟಿ. ಉತ್ಪನ್ನಗಳ ಸುಧಾರಣೆಗೆ ನೌಕರರ ಸಹಕಾರ. ಮನೆಯಲ್ಲಿ  ಶಾಂತಿ, ಸದ್ಭಾವನೆಯ ವಾತಾವರಣ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೩. ಮಿಥುನ:
 
  ಭಾವನೆಗಳಿಗೆ ಸ್ಪಂದಿಸುವುದನ್ನು ಕಲಿಯಿರಿ.  ಉದ್ಯೋಗ ಸ್ಥಾನದಲ್ಲಿ ಅನುಕೂಲ. ಆರ್ಥಿಕ ವ್ಯವಹಾರ ಸುಧಾರಣೆ..ಪಾಲುದಾರಿಕೆ ಉದ್ಯಮ ಅನುಕೂಲಕರ. ಉದ್ಯಮ ವ್ಯವಹಾರದ ಸಂಬಂಧ ಸಣ್ಣ ಪ್ರವಾಸ. ಸಂಕಷ್ಟನಾಶನ ಗಣೇಶ ಸ್ತೋತ, ಶಿವಪಂಚಾಕ್ಷರ ಸ್ತೋತ್ರ, ದೇವೀಸ್ತೋತ್ರ ಓದಿ.

೪.ಕರ್ಕಾಟಕ:

 ಕುಸಿದುಹೋಗುವಷ್ಟು ಕೆಲಸಗಳ ಹೊರೆ. ಹೊಸ ಉದ್ಯಮ ಆರಂಭಕ್ಕೆ ಚಿಂತನೆ. ಸಂಸಾರದಲ್ಲಿ ಸಾಮರಸ್ಯ.  ದೇವತಾ ಕಾರ್ಯದಲ್ಲಿ ಭಾಗಿ. ರಾತ್ರಿ ಪ್ರಯಾಣದಲ್ಲಿ ಎಚ್ಚರ ಅವಶ್ಯ. ಸಂಕಷ್ಟನಾಶನ ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

೫ ಸಿಂಹ:

ಹೊಸ ಕಾರ್ಯತಂತ್ರ ಅಳವಡಿಕೆ. ಉದ್ಯೋಗದಲ್ಲಿ ಪದೋನ್ನತಿ.ಸ್ವಂತ ಉದ್ಯಮದ ನೌಕರ ವೃಂದಕ್ಕೆ ಸಂತೃಪ್ತಿ.   ಹೊಸ ಜ್ಞಾನಶಾಖೆಗೆ ಪ್ರವೇಶ.. ಕುಟುಂಬದಲ್ಲಿ ಸಮಭಾವ, ಸಾಮರಸ್ಯ ವೃದ್ಧಿ.ಗಣಪತಿ ಅಥರ್ವಶೀರ್ಷ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ..


೬.ಕನ್ಯಾ:

ಬದುಕಿನ ಜಂಜಾಟಗಳ ನಡುವೆ ಆನಂದಕ್ಕಾಗಿ ಹುಡುಕಾಟ. ಹೊಸ ವ್ಯಕ್ತಿಗಳ ಪರಿಚಯ. ಉದ್ಯೋಗ ಸ್ಥಳದಲ್ಲಿ ಸ್ಥಿರ ಪರಿಸ್ಥಿತಿ.ವಸ್ತ್ರ, ಆಭರಣ, ವಾಹನ ಸಂಸ್ಥೆಗಳಿಗೆ ಅನುಕೂಪ.  ಸಂಸಾರದ ನೆಮ್ಮದಿ ಕೆಡಿಸಲು ಹಿತಶತ್ರುಗಳ ಪ್ರಯತ್ನ.  ಗಣೇಶ ಕವಚ, ದಕ್ಷಿಣಾಮೂರ್ತಿ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೭ತುಲಾ:
ಉದ್ಯೋಗದಲ್ಲಿ ಪ್ರತಿಭೆ, ಅನುಭವಕ್ಕೆ ಗೌರವ. ಹೊಸ ಸಹೋದ್ಯೋಗಿಗಳ ಸೇರ್ಪಡೆ. ಸರಕಾರಿ ನೌಕರರಿಗೆ ವರ್ಗಾವಣೆಯ ಚಿಂತೆ.ಗೃಹೋಪಯೋಗಿ ಸಾಧನಗಳ ಖರೀದಿ.  ಇಷ್ಟಾರ್ಥ ಸಿದ್ಧಿಗಾಗಿ ದೇವತಾರ್ಚನೆ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೮.ವೃಶ್ಚಿಕ:

ಅಪೇಕ್ಷಿಸದಿದ್ದರೂ ಒಲಿದ ಸಂಪತ್ತು.  ಉದ್ಯೋಗದಲ್ಲಿ ಸೌಲಭ್ಯ ವೃದ್ಧಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಶೋಕಿ ಸಾಮಗ್ರಿಗಳ ವಿತರಕರಿಗೆ ಲಾಭ. ಕೃಷಿ ಕ್ಷೇತ್ರದಲ್ಲಿ ಹೊಸಬರಿಗೆ ಮಾರ್ಗದರ್ಶನ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೯. ಧನು:

ಎರಡು ದುಃಖಗಳ ನಡುವಿನದೇ ಆನಂದ. ಉದ್ಯೋಗಿಗಳಿಗೆ  ಸಮಾಧಾನ.  ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಲಾಭ ಮಧ್ಯಮ. ಬಂಧು ಕಲಹದ ಪರಿಹಾರಕ್ಕೆ  ಮಧ್ಯಸ್ಥಿಕೆ. ಗೃಹಿಣಿಯರ ಉದ್ಯಮಕ್ಕೆ ಅಭೂತಪೂರ್ವ ಕೀರ್ತಿ.
ಸಂಕಷ್ಟನಾಶನ ಗಣೇಶ ಸ್ತೋತ್ರ, ಲಕ್ಷ್ಮೀನರಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೧೦. ಮಕರ:

 ಉದ್ಯೋಗ ಸ್ಥಾನದಲ್ಲಿ ಸಾಧನೆಗೆ ಶ್ಲಾಘನೆ. ಸ್ವಂತ ಉದ್ಯಮ ವಿಸ್ತರಣೆಗೆ ಕಾನೂನಿನ ತೊಡಕು ನಿವಾರಣೆ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.  ಮನೆಯಲ್ಲಿ ಸಮಾಧಾನದ ವಾತಾವರಣ. ಗಣಪತಿ ಅಥರ್ವಶೀರ್ಷ, ಶಿವಸಹಸ್ರನಾಮ, ಗುರುಸ್ತೋತ್ರ ಓದಿ.


೧೧.ಕುಂಭ:

ಉದ್ಯೋಗದಲ್ಲಿ  ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ಬೆಳವಣಿಗೆ  ಸುಗಮ. ಉತ್ಪನ್ನಗಳಿಗೆ ಹೊಸ ರೂಪ ಕೊಡಲು ಚಿಂತನೆ.  ಮುದ್ರಣ ಸಾಮಗ್ರಿ, ಸ್ಟೇಶನರಿ ರಖಂ ವ್ಯವಹಾರಸ್ಥರಿಗೆ ಆದಾಯ ವೃದ್ಧಿ. ಮಕ್ಕಳಿಗೆ ಅನೇಕ ವಿಷಯಗಳ ಕಲಿಕೆಯಲ್ಲಿ ಆಸಕ್ತಿ. ಗಣೇಶ ಅಷ್ಟಕ, ಕನಕಧಾರಾ ಸ್ತೋತ್ರ, ಶನಿಮಹಾತ್ಮೆ ಓದಿ.

೧೨.ಮೀನ:

ಉದ್ಯೋಗ ಸ್ಥಾನದಲ್ಲಿ ಜಯ ಹಾಗೂ ಕೀರ್ತಿ ಎರಡೂ ಲಭ್ಯ. ಸರಕಾರಿ ಕಾರ್ಯಾಲಯಗಳಲ್ಲಿ ನಿಧಾನ ಕಾರ್ಯ. ಆಸ್ತಿ ವಿಸ್ತರಣೆ ಪ್ರಯತ್ನದಲ್ಲಿ ಮುನ್ನಡೆ.  ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ  ಮಧ್ಯಮ ಲಾಭ. ಸಟ್ಟಾ ವ್ಯವಹಾರದಿಂದ ದೂರವಿರಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.