ದಿನ ಭವಿಷ್ಯ

22-06-2025

Jun 22, 2025 - 03:00
ದಿನ ಭವಿಷ್ಯ


                ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ  4

೧. ಮೇಷ: 
ವ್ಯವಹಾರಗಳಿಗೆ ಬಿಡುವು ಇಲ್ಲದ ದಿನ.  ವ್ಯಾಪ್ತಿ ವಿಸ್ತರಣೆಯಿಂದ ಉದ್ಯಮಕ್ಕೆ ಲಾಭ.  ದವಸ ಧಾನ್ಯ ವ್ಯಾಪಾರಿಗಳಿಗೆ  ಕ್ಷೇಮ. ವಸ್ತ್ರ, ಆಭರಣ ಖರೀದಿಗೆ ಧನವ್ಯಯ. ಲೇವಾದೇವಿ ವ್ಯವಹಾರದಲ್ಲಿ  ಸಾಮಾನ್ಯ ಲಾಭ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ಶನಿ ಮಹಾತ್ಮೆ ಓದಿ.


೨. ವೃಷಭ:
ರಜಾದಿನವಾದರೂ  ಅನಿರೀಕ್ಷಿತ  ಅವಕಾಶಗಳು ಲಭ್ಯ. ಧಾರ್ಮಿಕ ಸೇವಾ ಕ್ಷೇತ್ರಕ್ಕೆ ಸಂದರ್ಶನ. ಪ್ರಾಪ್ತವಯಸ್ಕ  ಹುಡುಗರಿಗೆ  ವಿವಾಹ ಯೋಗ.  ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತೋಷದ ಅನುಭವ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ,  ಅನ್ನಪೂರ್ಣಾ ಸ್ತೋತ್ರ ಓದಿ.


೩.ಮಿಥುನ:
ಸರಕಾರಿ  ನೌಕರರಿಗೆ ಸಮಾಧಾನ. ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಶುಭದಿನ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ.  ಗೃಹೋಪಯೋಗಿ ಸಾಮಗ್ರಿ ಖರೀದಿ. ಹಿರಿಯರಿಗೆ, ಗೃಹಿಣಿಯರಿಗೆ ನೆಮ್ಮದಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೪.ಕರ್ಕಾಟಕ:
ಸಂಸಾರದ ಆವಶ್ಯಕತೆಗಳ ಕಡೆಗೆ ಗಮನ. ಹಿರಿಯರ  ಆರೋಗ್ಯ ಸುಧಾರಣೆ. ಆಪ್ತರಿಂದ ನಿರೀಕ್ಷಿತ ಸಹಾಯ ಲಭ್ಯ. ವ್ಯವಹಾರ ಸಂಬಂಧ ಸಣ್ಣ  ಪ್ರಯಾಣ. ವಿದ್ಯಾರ್ಥಿಗಳ ಅಧ್ಯಯನದಲ್ಲಿ ಹೆಚ್ಚು ಪರಿಶ್ರಮಕ್ಕೆ ಒತ್ತು. ಈ ದಿನ ಒಟ್ಟಿನಲ್ಲಿ ಮಿಶ್ರ ಫಲಗಳ ಅನುಭವ. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.


೫.ಸಿಂಹ:
ಸಹನೆ, ವಿವೇಕಗಳೊಂದಿಗೆ ಕಾಲೋಚಿತ ಕ್ರಮಗಳು. ತೀವ್ರ ಪ್ರಾರ್ಥನೆಯಿಂದ ದೇವತಾನುಗ್ರಹ ಪ್ರಾಪ್ತಿ. ಗುತ್ತಿಗೆದಾರರಿಗೆ ಕೆಲಸ ಮುಗಿಸುವ ಒತ್ತಡ. ಹಿರಿಯರ‌ ಆರೋಗ್ಯ ಸುಧಾರಣೆ.  ವಿದ್ಯಾರ್ಥಿಗಳ  ಲೋಕಜ್ಞಾನ ವೃದ್ಧಿಗೆ ಅನುಕೂಲದ ವಾತಾವರಣ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೬. ಕನ್ಯಾ:
 ರಜಾದಿನವಾದರೂ ದೇಹಕ್ಕೆ ವಿಶ್ರಾಂತಿ ಇಲ್ಲ. ಅವಿವಾಹಿತ ಹುಡುಗರಿಗೆ ಶೀಘ್ರ ವಿವಾಹ ಯೋಗ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ‌. ವಿದ್ಯಾರ್ಥಿಗಳಿಗೆ ಏಕಾಗ್ರತೆ ವೃದ್ಧಿ. ಕುಶಲ ಕರ್ಮಿಗಳಿಗೆ  ಶೀಘ್ರ ಉದ್ಯೋಗ ಪ್ರಾಪ್ತಿ. ಗೃಹಿಣಿಯರ ಸ್ವೋದ್ಯೋಗ ಯೋಜನೆ ಪ್ರಗತಿ. ಗಣೇಶ ಪಂಚರತ್ನ, ಶಿವಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

೭. ತುಲಾ:
 ಸಹೋದ್ಯೋಗಿಗಳ ಸೌಹಾರ್ದ ಭೇಟಿ.  ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಗಮನ. ಕ್ರೀಡೆ, ಸಂಗೀತಾದಿ  ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ.  ಕೃಷಿ , ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಆಸಕ್ತಿ. ಮನೆಯಲ್ಲಿ ಎಲ್ಲರಿಗೂ ಉತ್ತಮ  ಆರೋಗ್ಯ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕವಚ, ಕನಕಧಾರಾ ಸ್ತೋತ್ರ ಓದಿ. 
 

೮.ವೃಶ್ಚಿಕ:

 ಹಿತಶತ್ರುಗಳ  ಕುತಂತ್ರಗಳ ಬಗೆಗೆ ಎಚ್ಚರ. ತಾಳ್ಮೆಯ  ನಡೆನುಡಿಯಿಂದ  ಕಾರ್ಯಸಾಧನೆ.  ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ  ಗಣನಾರ್ಹ ಸುಧಾರಣೆ‌. ವ್ಯವಹಾರದ ಸಂಬಂಧ ಪ್ರಯಾಣ  ಸಂಭವ. ಹವಾಮಾನದ ಕಾರಣದಿಂದ  ವ್ಯತ್ಯಾಸಗೊಂಡಿದ್ದ ಹಿರಿಯರ ಆರೋಗ್ಯ ಸುಧಾರಣೆ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ದತ್ತಾತ್ರೇಯ ಸ್ತೋತ್ರ ಓದಿ.

೯.ಧನು:

 ಅಭಿವೃದ್ಧಿ ಕಾರ್ಯಗಳಿಗೆ  ಅನಿರೀಕ್ಷಿತ ಸಹಾಯ ಪ್ರಾಪ್ತಿ. ಕೌಟುಂಬಿಕ ಸಮಸ್ಯೆ ಪರಿಹಾರ. ದಂಪತಿಗಳ ನಡುವೆ ಅನುರಾಗ ವೃದ್ಧಿ.  ಶಿಕ್ಷಿತರಿಗೆ  ಯೋಗ್ಯ ಉದ್ಯೋಗ ಲಭಿಸುವ ಭರವಸೆ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಆರಂಭಿಸಲು ಕೆಲವರಿಗೆ ಆಸಕ್ತಿ.  ಗೃಹಿಣಿಯರು, ಮಕ್ಕಳಿಗೆ ಸಂತಸ. ಗಣೇಶ ಕವಚ, ಶಿವಕವಚ, ರಾಮರಕ್ಷಾ ಸ್ತೋತ್ರ ಓದಿ.

೧೦.ಮಕರ:

 
 ಕುಟುಂಬದ ಸದಸ್ಯರೊಂದಿಗೆ ಪ್ರೀತಿ, ವಾತ್ಸಲ್ಯದ ಸಂಬಂಧ ವೃದ್ಧಿ. ಸಣ್ಣ ಉದ್ಯಮಿಗಳ ಆದಾಯ ವೃದ್ಧಿ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ  ಲಾಭ. ಮಹಿಳೆಯರ ಗೃಹೋದ್ಯಮ ಯೋಜನೆಗೆ ಪ್ರಚಂಡ, ಯಶಸ್ಸು. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಗಣೇಶ ಕವಚ, ಆದಿತ್ಯ ಹೃದಯ, ಹನುಮಾನ್ ಚಾಲೀಸಾ ಓದಿ.  


೧೧. ಕುಂಭ:

ಸದುದ್ದೇಶಕ್ಕೆ ನೆರವು ನೀಡುವ ಅವಕಾಶ. ಕಿರಿಯ  ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸೇವೆ, ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಗೌರವ ಮತ್ತು ಜನಪ್ರಿಯತೆ ವೃದ್ಧಿ. ವೃತ್ತಿಪರರಿಗೆ ಸರ್ವತ್ರ  ಶ್ಲಾಘನೆ.  ವೈದ್ಯರ ಭೇಟಿಯಿಂದ ಸಣ್ಣ ತೊಂದರೆ ಪರಿಹಾರ. ಅಪರೂಪದ ಬಂಧುಗಳ ಭೇಟಿಯಿಂದ  ಮನೆಮಂದಿಗೆ ಹರ್ಷ. ಗಣೇಶ ಅಷ್ಟಕ,ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.

೧೨. ಮೀನ: ‌
 
ಉದ್ಯೋಗಸ್ಥರಿಗೆ ತಾತ್ಕಾಲಿಕ ವಿಶ್ರಾಂತಿ. ವ್ಯವಹಾರದಲ್ಲಿ ಅಪರಿಮಿತ  ಮುನ್ನಡೆ. ಹಣಕಾಸು ವ್ಯವಹಾರ ಸುಧಾರಣೆ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ನೂತನ ವಾಹನ, ನಿವೇಶನ ಖರೀದಿ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಮಕ್ಕಳಿಂದ ಹಿರಿಯರಿಗೆ ಆನಂದ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.