ದಿನ ಭವಿಷ್ಯ
26-06-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 8
೧. ಮೇಷ:
ಇಂದಿನ ದಿನ ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆ. ವ್ಯವಹಾರದಲ್ಲಿ ವಿಶೇಷ ಯಶಸ್ಸು. ಸರಕಾರಿ ಉದ್ಯೋಗಸ್ಥರಿಗೆ ಯಥಾಪ್ರಕಾರದ ಕಿರಿಕಿರಿಗಳು. ಭವಿಷ್ಯದ ಹೂಡಿಕೆಗಳ ಕುರಿತು ಚಿಂತನೆ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಸಣ್ಣ ಪ್ರಯಾಣ ಸಂಭವ. ಗಣಢಶ ಅಷ್ಟೋತ್ತರ ಶತನಾಮ ಸ್ತೋತ್ರ, ಶನಿಮಹಾತ್ಮೆ ಓದಿ.
೨.ವೃಷಭ:
ಭವಿಷ್ಯದ ಯೋಜನೆಗಳ ಕುರಿತು ಚಿಂತನೆ. ಅನ್ವೇಷಕರೆದುರು ವಿಶಿಷ್ಟ ಅವಕಾಶಗಳ ಅನಾವರಣ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ಪ್ರಮುಖ ಉದ್ಯೋಗಪತಿಯ ಭೇಟಿ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ. ಗಣೇಧ ಕವಚ, ಶಿವಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೩.ಮಿಥುನ:
ಗೆಳೆಯರ ಯೋಜನೆ ಅನುಷ್ಠಾನಕ್ಕೆ ಸಹಾಯ. ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ. ಅನವಶ್ಯ ವೈಮನಸ್ಯಕ್ಕೆ ಅವಕಾಶ ಬೇಡ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ. ದ್ವಿಚಕ್ರ ವಾಹನ ಚಾಲನೆಯಲ್ಲಿ ಎಚ್ಚರ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಆದಿತ್ಯಹೃದಯ ಓದಿ.
೪. ಕರ್ಕಾಟಕ:
ಉದ್ಯೋಗಸ್ಥರಿಗೆ ಒಂದಿಲ್ಲೊಂದು ಚಿಂತೆ. ಕಿರಿಯ ಉದ್ಯಮಿಗಳ ಸ್ನೇಹಕೂಟ ಆಯೋಜನೆ. ಹಿರಿಯರಿಗೆ ಸರಕಾರಿ ಸೌಲಭ್ಯಗಳನ್ನು ದೊರಕಿಸುವ ಪ್ರಯತ್ನ. ಮಹಿಳೆಯರ ಸ್ವೋದ್ಯೋಗ ಯೋಜನೆ ಉತ್ಪನ್ನಗಳಿಗೆ ಕೀರ್ತಿ.
ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ರೋತ್ರ, ಕನಕಧಾರಾ ಸ್ತೋತ್ರ ಓದಿ.
೫.ಸಿಂಹ:
ಉದ್ಯಮಕ್ಕೆ ನವಚೈತನ್ಯ ನೀಡುವ ಪ್ರಕ್ರಿಯೆ ಆರಂಭ. ಪರಿಣತರ ಸಲಹೆಯಂತೆ ಹೊಸ ಕ್ರಮಗಳು. ಶಿಕ್ಷಿತ ಕುಶಲಕರ್ಮಿಗಳಿಗೆ ಶೀಘ್ರ ಉದ್ಯೋಗ. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ, ನೆಮ್ಮದಿಯ ಅನುಭವ. ಸಂಸ್ಕಾರ ನೀಡಿದ ಹಿರಿಯರಿಗೆ ಗೌರವ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೬. ಕನ್ಯಾ:
ಉದ್ಯೋಗಸ್ಥರಿಗೆ ವಿಶಿಷ್ಟ ಜವಾಬ್ದಾರಿಗಳು. ಉದ್ಯಮಕ್ಕೆ ಬಂದಿದ್ದ ಸಣ್ಣ ಸಮಸ್ಯೆ ನಿವಾರಣೆ. ಹಿರಿಯರ ಆಸ್ತಿಯಲ್ಲಿ ಕೃಷಿ ಆರಂಭ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಕವಚ, ನರಸಿಂಹ ಕವಚ, ಲಕ್ಷ್ಮೀಸ್ತೋತ್ರ ಓದಿ.
೭.ತುಲಾ:
ಉದ್ಯೋಗಸ್ಥರ ಪಾಲಿಗೆ ನಿಲ್ಲದ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ಉದ್ಯೋಗ ಅರಸುವವರಿಗೆ ಮಾರ್ಗದರ್ಶನ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಮಿತ್ರನ ಆರೋಗ್ಯ ರಕ್ಷಣೆಯ ಕಾಳಜಿ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೮. ವೃಶ್ಚಿಕ:
ದೊಡ್ಡ ಆಪತ್ತಿನ ಭೀತಿ ಅನವಶ್ಯ. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಾಂಸಾರಿಕ ನೆಮ್ಮದಿ ಕೆಡಿಸುವವರಿಗೆ ಮುಖಭಂಗ. ಗಣೇಶ ಪಂಚರತ್ನ, ವಿಷ್ಷು ಸಹಸ್ರನಾಮ, ಗುರುಸ್ತೋತ್ರ ಓದಿ.
೯. ಧನು:
ಕಾರ್ಯ ಸುಧಾರಿಸಲು ಕಿರಿಯರಿಗೆ ಮಾರ್ಗದರ್ಶನ. ಉದ್ಯಮದ ವೈವಿಧ್ಯೀಕರಣ ಯೋಜನೆ ಪ್ರಗತಿಯಲ್ಲಿ. ಹಿರಿಯರ ಆರೋಗ್ಯದ ಕಡೆಗೆ ಗಮನ ಇರಲಿ. ಮಕ್ಕಳ ಅಧ್ಯಯನಾಸಕ್ತಿ ಹಾಗೂ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ. ಅಶಕ್ತರ ನೆರವಿನ ಯೋಜನೆಗಳಲ್ಲಿ ಭಾಗಿ. ಗಣೇಶ ಪಂಚರತ್ನ, ಶಿವ ಪಂಚಾಕ್ಷರ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
೧೦. ಮಕರ:
ಉದ್ಯೋಗಸ್ಥರಿಗೆ ಕಾಲಮಿತಿಯ ಸವಾಲು. ವಸ್ತ್ರ, ಆಭರಣ ಉದ್ಯಮಿಗಳಿಗೆ ದೊಡ್ಡ ಮೊತ್ತದ ಲಾಭ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಲೇವಾದೇವಿ ವ್ಯವಹಾರಸ್ಥರಿಗೆ ಮೋಸ. ಸಂಗೀತ ಶ್ರವಣದಿಂದ ಮನಶ್ಶಾಂತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧.ಕುಂಭ:
ಶೀಘ್ರ ಮುಕ್ತಾಯಗೊಳ್ಳುವ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ ಲಲಿತ ಕಲೆಗಳಲ್ಲಿ ಆಸಕ್ತರಿಗೆ ಹರ್ಷ. ಕೃಷ್ಯುತ್ಪಾದನೆ ವೃದ್ಧಿಯಲ್ಲಿ ಯಶಸ್ಸು. ಟೈಲರಿಂಗ್, ವೈಂಡಿಂಗ್ ಬಲ್ಲವರಿಗೆ ಅಧಿಕ ಆದಾಯ. ಗಣಪತಿ ಅಥರ್ವಶೀರ್ಷ,ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೧೨. ಮೀನ:
ನವೋತ್ಸಾಹ, ವಿಶೇಷ ಕಲ್ಪನೆಗಳ ಪ್ರಭಾವ. ಹೊಸಬಗೆಯ ಜವಾಬ್ದಾರಿಗಳು. ಸಾಮೂಹಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಸಂಸಾರದಲ್ಲಿ. ಇಲಾಖೆಗಳಿಂದ ಸಕಾಲಿಕ ಸ್ಪಂದನ. ಕುಟುಂಬದಲ್ಲಿ ಪ್ರೀತಿ, ಸ್ನೇಹ, ವಿಶ್ವಾಸ ವೃದ್ಧಿ. ಗಣೇಶ ಕವಚ ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.