ದಿನ ಭವಿಷ್ಯ

27-06-2025

Jun 27, 2025 - 03:00
ದಿನ ಭವಿಷ್ಯ

ದಿನ ಭವಿಷ್ಯ

ಅದೃಷ್ಟ ಸಂಖ್ಯೆ 9


೧.ಮೇಷ:

ಸದುದ್ದೇಶದಿಂದ ಮಾಡಿದ ಕಾರ್ಯಕ್ಕೆ ಸತ್ಫಲ. ನಿಯೋಜಿತ ಜವಾಬ್ದಾರಿ ಮುಕ್ತಾಯ.  ಸ್ವಂತ ಉದ್ಯಮದ ಪ್ರಗತಿ ಅಬಾಧಿತ. ಅತಿಥಿ ಸತ್ಕಾರ ಯೋಗ. ಉದ್ಯೋಗ ಅರಸುತ್ತಿರುವರಿಗೆ ಒಳ್ಳೆಯ ಅವಕಾಶ. ಸಂಸಾರದಲ್ಲಿ ಪ್ರೀತಿ, ವಿಶ್ವಾಸದ ವಿನಿಮಯ. ಗಣೇಶ ಕವಚ, ಆದಿತ್ಯ ಹೃದಯ, ಶನಿ ಮಹಾತ್ಮೆ ಪಾರಾಯಣ ಮಾಡಿ.


೨. ವೃಷಭ

ನಿಧಾನವಾದರೂ ನಿಲ್ಲದ ಪ್ರಗತಿ. ಉದ್ಯೋಗದಲ್ಲಿ ಹಂತಹಂತವಾಗಿ ಏಳಿಗೆ. ಉದ್ಯಮದ ಬೆಳವಣಿಗೆ ಸ್ಥಿರ.  ಗುರುದರ್ಶನ ಪ್ರಾಪ್ತಿ.   ವಸ್ತ್ರ, ಆಭರಣ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಲಾಭ. ಮಕ್ಕಳ ಕಲಿಕೆ ಆಸಕ್ತಿ ಹೆಚ್ಚಿಸಲು ಶ್ರಮ. ಸಂಸಾರದಲ್ಲಿ, ಪ್ರೀತಿ, ವಿಶ್ವಾಸ ವೃದ್ಧಿ. ಗಣೇಶ, ಶಿವ, ಆಂಜನೇಯ ಸ್ತೋತ್ರ ಪಠಿಸಿ.


೩. ಮಿಥುನ:

ವೇಷಧಾರಿಗಳನ್ನು ನೋಡಿ ಅಂಜದಿರಿ. ವೃದ್ಧಿಯಾಗಿರುವ ಕ್ರಿಯಾಶೀಲತೆ ಅನಾವರಣ. ಕೃಷ್ಯುತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಸ್ವಂತ  ಉದ್ಯಮದ ಅಭಿವೃದ್ಧಿಗೆ ಹೊಸ ಮಾರ್ಗ  ಗೋಚರ. ಸಂಗಾತಿಯ ಆರೋಗ್ಯ ಸುಧಾರಣೆ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿಗೆ ಹೊಸ ವ್ಯವಸ್ಥೆ .ಗಣೇಶ ಕವಚ,ದೇವೀ ಸ್ತೋತ್ರ, ಗುರುಸ್ತೋತ್ರ ಓದಿರಿ.


೪. ಕರ್ಕಾಟಕ:

ಹೆಚ್ಚು-  ಕಡಿಮೆಯಾಗುವ ಹೊರೆಗಳು. ಸಾಧನೆಗೆ ಸೂಕ್ತ ಪ್ರತಿಫಲ ಲಭ್ಯ.  ಉದ್ಯಮದ ಸ್ಥಾನ ನವೀಕರಣಕ್ಕೆ ಧನವ್ಯಯ. ವಸ್ತ್ರ,ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಅವಿವಾಹಿತ ಹುಡುಗ,  ಹುಡುಗಿಯರಿಗೆವಿವಾಹ ನಿಶ್ಚಯ.   ಗಣೇಶ ಕವಚ, ಆದಿತ್ಯ ಹೃದಯ, ನವಗ್ರಹ ಸ್ತೋತ್ರ  ಓದಿ.


೫. ಸಿಂಹ:

ನೀವು ಆರಿಸಿಕೊಂಡ ಮಾರ್ಗದ ಕುರಿತು ಗೊಂದಲ ಬೇಡ. ನಿಗದಿತ ಕಾರ್ಯ  ಮುಕ್ತಾಯದಲ್ಲಿ  ನೀವೇ ಮುಂದು.ಉದ್ಯಮ ಕ್ಷೇತ್ರದಲ್ಲಿ ನಿಲ್ಲದ ಸಾಧನೆ. ಹೊಸ ಪರಿಣತರ ಸೇರ್ಪಡೆ.  ಸ್ವೋದ್ಯೋಗಗಳಿಗೆ ಉತ್ಕರ್ಷ ಆರಂಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದ. ಗಣೇಶ ,ವಿಷ್ಣು, ಸುಬ್ರಹ್ಮಣ್ಯ ಸ್ತೋತ್ರ ಓದಿ


೬. ಕನ್ಯಾ:

ಗುರಿ ತಲುಪಲು ದೃಷ್ಟಿ ನೇರವಾಗಿರುವುದು ಮುಖ್ಯ. ಉದ್ಯೋಗದಲ್ಲಿ ಸಮಯಪಾಲನೆಗೆ ಆದ್ಯತೆ.  ಸಹಕಾರಿ ರಂಗದ ನೌಕರರಿಗೆ ಸವಾಲಿನ ಅನುಭವ. ಬಂಧುಗಳ ಮನೆಯಲ್ಲಿ ವಿವಾಹದ ಸಿದ್ಧತೆ. ಮನೆಯ ವಾಸ್ತು ಸುಧಾರಣೆಗೆ ಕ್ರಮ. ಆರೋಗ್ಯ ಉತ್ತಮ. ಗಣಪತಿ ಸ್ತೋತ್ರ, ನವಗ್ರಹ ಸ್ತೋತ್ರ, ವಿಷ್ಣುಸಹಸ್ರನಾಮ ಪಾರಾಯಣ ಒಳ್ಳೆಯದು.

೭. ತುಲಾ:

ಯಾವ ಕೊರಗೂ ನಿಮ್ಮನ್ನು ಬಾಧಿಸದು. ಉದ್ಯೋಗದಲ್ಲಿ ಮುನ್ನಡೆ. ಹುಟ್ಟು ಅಧ್ಯಾಪಕರಾಗಿರುವ ನಿಮಗಿಂದು ಹಲವರಿಗೆ ಸಲಹೆ ನೀಡುವ ಅವಕಾಶ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ.  ಗಣಪತಿ, ಸೂರ್ಯ, ಶಿವ, ನವಗ್ರಹ ಸ್ತೋತ್ರ ಓದಿ..


೮. ವೃಶ್ಚಿಕ:


ವಯಸ್ಸು ದಾಟುತ್ತಿದೆಯೆಂದು ಕೊರಗದಿರಿ.  ಉದ್ಯೋಗದಲ್ಲಿ ಮುನ್ನಡೆ.ಉದ್ಯಮದಲ್ಲಿ  ಕೀರ್ತಿ ತರುವ ಸಾಧನೆ . ಲೇವಾದೇವಿ ವ್ಯವಹಾರ ಸಲ್ಲದು. ದೀರ್ಘಾವಧಿ ಉಳಿತಾಯ ಯೋಜನೆಗಳ ಫಲ ಕೈಸೇರಿದ ಅನುಭವ. ದೇವಿಯ  ಆಲಯದಲ್ಲಿ ಪೂಜೆ, ಪ್ರಾರ್ಥನೆಗಳಲ್ಲಿ ಭಾಗಿ. ಮನೆಯಲ್ಲಿ ಗಣೇಶ ಕವಚ, ಆದಿತ್ಯ ಹೃದಯ, ನವಗ್ರಹ ಸ್ತೋತ್ರ ಓದಿ.


೯. ಧನು:

ಪರಮಾತ್ಮನ ಮೇಲೆ ಅಚಲ ಶ್ರದ್ಧಾಭಕ್ತಿಗಳೇ ಶ್ರೀರಕ್ಷೆ. ಉದ್ಯೋಗ ಸ್ಥಾನ ಭದ್ರ.  ಸ್ವಂತ ವ್ಯಾಪಾರ ಮುಂದುವರಿಕೆ. ಪಾಲುದಾರಿಕೆ ಉದ್ಯಮ ಆರಂಭ. ಕೃಷಿ ಕ್ಷೇತ್ರದಲ್ಲಿ ಹೂಡಿಕೆಯಿಂದ‌  ಮಧ್ಯಮ ಲಾಭ. ವಸ್ತ್ರ ವ್ಯಾಪಾರಿಗಳಿಗೆ ಆದಾಯ ಹೆಚ್ಚಳ. ಗ಼ಣೇಶ ಸ್ತೋತ್ರ, ನವಗ್ರಹ ಸ್ತೋತ್ರ ವಿಷ್ಣುಸ್ತೋತ್ರ ಓದಿರಿ


೧೦. ಮಕರ:

ಪಟ್ಟುಬಿಡದ ಪ್ರಯತ್ನದಿಂದ ಮನೋಬಲ ವೃದ್ಧಿ. ಉದ್ಯೋಗ ಸ್ಥಾನದಲ್ಲಿ ಯಥಾಪ್ರಕಾರ ಒತ್ತಡ. ಉದ್ಯಮಿಗಳಿಗೆ ವಿಶ್ವಾಸಾರ್ಹತೆ ಕಾಯ್ದುಕೊಳ್ಳುವ ಸವಾಲು. ವೃತ್ತಿಪರರಿಗೆ‌ ನಿಗದಿತ ಸಮಯಕ್ಕೆ ಕಾರ್ಯ ಮುಗಿಸುವ ತರಾತುರಿ.   ಹಿರಿಯರಿಂದ ಸಹಾಯ. ಮನೆಯಲ್ಲಿ ಸಕಾರಾತ್ಮಕ ಸ್ಪಂದನಗಳ ಸೃಷ್ಟಿಗೆ ದೇವತಾ ಕಾರ್ಯಗಳ ಸಹಾಯ. ಗಣೇಶ ಅಷ್ಟಕ,ಶನಿಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧. ಕುಂಭ:

   ಕಿರಿಯರಿಗೆ ಪ್ರೋತ್ಸಾಹದ ಮಾತುಗಳಿಂದ ಮಾರ್ಗದರ್ಶನ. ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ಯಂತ್ರೋಪಕರಣ ಬಿಡಿಭಾಗ ವ್ಯಾಪಾರಿಗಳ ಆದಾಯ ಹೆಚ್ಚಳ. ಸಂಸಾರದಲ್ಲಿ ಪ್ರೀತಿ, ವಾತ್ಸಲ್ಯ, ಸಾಮರಸ್ಯ ವೃದ್ಧಿ. ಸಮಾಜ ಸೇವೆ ಮುಂದುವರಿಕೆ.ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ , ಶನಿಮಹಾತ್ಮೆ ಓದಿ.

೧೨. ಮೀನ:

ಕ್ಷಣಿಕ ಹಿನ್ನಡೆಗಳಿಂದ ಅಂಜದೆ ಮುಂದುವರಿಯಿರಿ.  ಉದ್ಯೋಗದ ವ್ಯಾಪ್ತಿ ಅನಪೇಕ್ಷಿತವಾಗಿ ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ.  ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಆರಂಭಿಸುವ ಯೋಜನೆ ಮುನ್ನಡೆ.   ಹಿರಿಯರ ಆರೋಗ್ಯ ವೃದ್ಧಿ. ಗಣೇಶ ಕವಚ, ಶಿವಸ್ತುತಿ, ಶನಿಮಹಾತ್ನೆ ಪಾರಾಯಣ ಮಾಡಿ.