ದಿನ ಭವಿಷ್ಯ

30-06-2025

Jun 30, 2025 - 03:00
ದಿನ ಭವಿಷ್ಯ

                  ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 3

೧.ಮೇಷ:

ಲಾಭ- ನಷ್ಟದ ಲೆಕ್ಕಾಚಾರಕ್ಕೆ ಸೂಕ್ತವಲ್ಲದ ದಿನ.  ಉದ್ಯೋಗದಲ್ಲಿ ಗುರುತರವಾದ ಜವಾಬ್ದಾರಿ. ಖಾದ್ಯ ವಸ್ತು ವ್ಯಾಪಾರಿಗಳಿಗೆ  ಅನುಕೂಲದ ದಿನ. ಗೃಹೋದ್ಯಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಕವಚ, ನರಸಿಂಹ ಸ್ತೋತ್ರ, ಶನಿಮಹಾತ್ಮೆ ಓದಿ.

  
 

೨.ವೃಷಭ:

ಯೋಜನಾಬದ್ಧ ನಡೆಯಿಂದ ಎಣಿಕೆ ಮೀರಿದ ಯಶಸ್ಸು‌. ನಿಧಾನವಾದರೂ ಸ್ಥಿರವಾದ ಪ್ರಗತಿ.  ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನದ ಹೊಣೆಗಾರಿಕೆ. ಕೃಷಿ ಉಪಕರಣಗಳ ನಿರ್ಮಾಪಕರ ಆದಾಯ ವೃದ್ಧಿ. ಗೃಹಿಣಿಯರ ಉದ್ಯಮಗಳಿಗೆ ಅನುಕೂಲದ ದಿನ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಗುರುಸ್ತೋತ್ರ ಓದಿ.
 


೩ಮಿಥುನ:

 ನಕಾರಾತ್ಮಕ  ಚಿಂತನೆಯನ್ನು ಬಿಟ್ಟರೆ ಮಾತ್ರ  ಕ್ಷೇಮ. ಮನೋಬಲ‌ ವೃದ್ಧಿಗೆ ಪ್ರಯತ್ನ ಆರಂಭ. ಉದ್ಯೋಗದಲ್ಲಿ ಪ್ರತಿಭೆಗೆ ಪ್ರಾಧಾನ್ಯ. ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಬಾಲ್ಯದ ಒಡನಾಡಿಗಳೊಡನೆ ಅನಿರೀಕ್ಷಿತ ಸಂಪರ್ಕ. ಗಣೇಶ ಪಂಚರತ್ನ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೪. ಕರ್ಕಾಟಕ:

 ಎಲ್ಲರನ್ನೂ ಜೊತೆಯಲ್ಲಿ ಸೇರಿಸಿಕೊಂಡು ಮುನ್ನಡೆದರೆ ಜಯ. ಉದ್ಯೋಗದಲ್ಲಿ ಅನಿರೀಕ್ಷಿತವಾಗಿ ಉನ್ನತ ಜವಾಬ್ದಾರಿ. ಉದ್ಯಮ ಕ್ಷೇತ್ರದಲ್ಲಿ ಕೀರ್ತಿ. ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಮಕ್ಕಳ ಜ್ಞಾನವೃದ್ಧಿಯ ಕಾರ್ಯಕ್ರಮಗಳಲ್ಲಿ ಭಾಗಿ. ಗಣೇಶ ಅಷ್ಟೋತ್ತರ ಶತನಾಮಸ್ತೋತ್ರ, ಸುಬ್ರಹ್ಮಣ್ಯ ಭುಜಂಗಸ್ತೋತ್ರ, ಶನಿಸ್ತೋತ್ರ ಓದಿ. 


೫.ಸಿಂಹ:.

  ನಡೆದುಬಂದ ದಾರಿಯ ಅವಲೋಕನದಿಂದ ಆತ್ಮತೃಪ್ತಿ. ಕಿರಿಯ ಸಹೋದ್ಯೋಗಿಗಳಿಗೆ ಯಥೋಚಿತ ಸಲಹೆ. ಸ್ವಂತ ಉದ್ಯಮದಲ್ಲಿ ನೌಕರರ ಕ್ಷೇಮಾಭಿವೃದ್ಧಿಗೆ ಕ್ರಮಗಳು. ಮಾನವಹಿತದ ಕಾರ್ಯಗಳಿಂದ ಸಮಾಜದಲ್ಲಿ ಗೌರವ ವೃದ್ಧಿ. ಮಕ್ಕಳ ಸುಪ್ತ ಪ್ರತಿಭೆಗಳ ವಿಕಾಸಕ್ಕೆ ಪ್ರೋತ್ಸಾಹ.ಗಣೇಶ ಸ್ತೋತ್ರ,ಮಹಾಲಕ್ಷ್ಮಿ ಅಷ್ಟಕ, ದೇವೀಸೂಕ್ತ ಓದಿ.

೬.ಕನ್ಯಾ:

 ಮಾನಸಿಕ ಸ್ಥೈರ್ಯ ವೃದ್ಧಿ. ಉದ್ಯೋಗ ಸ್ಥಾನದಲ್ಲಿ ಪ್ರೋತ್ಸಾಹದ  ಅನುಭವ. ಪಾಲುದಾರಿಕೆ ವ್ಯವಹಾರ ಉಳಿಸಿಕೊಳ್ಳುವುದರಿಂದ ಕ್ಷೇಮ. ಪತ್ನಿಯ ಕಡೆಯ ನೆಂಟರಿಗೆ ಸಹಾಯ. ಸಂಗೀತಾದಿ ಕಲೆಗಳನ್ನು ಬಲ್ಲವರಿಗೆ ಗೌರವ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೭. ತುಲಾ:

  ಬಾಲ್ಯದ ಒಡನಾಡಿಗಳ ಸಹಾಯದಿಂದ ಸಮಸ್ಯೆ ಪರಿಹಾರ. ಉದ್ಯೋಗದಲ್ಲಿ ಸೂಕ್ತ ಗೌರವ ಪ್ರಾಪ್ತಿ. ಅಸೂಯಾಪರರಿಗೆ ಅನಿರೀಕ್ಷಿತ ಪರಾಜಯ. ಗುರುಸ್ಥಾನದಲ್ಲಿರುವ ವ್ಯಕ್ತಿಯ ಭೇಟಿ. ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ದ್ವಾದಶನಾಮ ಸ್ತೋತ್ರ, ವಿಶ್ವನಾಥಾಷ್ಟಕ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೮.ವೃಶ್ಚಿಕ:

 ದೈಹಿಕ ಆರೋಗ್ಯ ಸುಧಾರಣೆಯಿಂದ ಆನಂದ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ನೌಕರರ ಸಮಸ್ಯೆ ಪರಿಹಾರ ಪ್ರಯತ್ನ ಸಫಲ. ಸರಕಾರಿ ನೌಕರರಿಗೆ ವರ್ಗಾವಣೆಯ ಆತಂಕ. ಸಹಕಾರಿ ಸಂಸ್ಥೆಗಳ ಪ್ರಗತಿಗೆ ತೊಂದರೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.


೯.ಧನು:

ಸದುದ್ದೇಶಕ್ಕಾಗಿ ಛಲದಿಂದ ಪ್ರಯತ್ನ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಪ್ರೋತ್ಸಾಹ. ಕೃಷಿ ಆದಾರಿತ ಉದ್ಯಮ ಘಟಕದ ಸ್ಥಾಪನೆಗಸಮಾಲೋಚನೆ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಜೇನು ಸಾಕಣೆ ಆರಂಭಿಸಲು  ನಿರ್ಧಾರ. ಗಣೇಶ ಕಬಚ, ವಿಷ್ಣು ಸಹಸ್ರನಾಮ, ಮಹಿಷಮರ್ದಿನಿ ಸ್ತೋತ್ರ ಓದಿ.

೧೦.ಮಕರ:

  ಮನೋವಿಕಾಸದ  ಪ್ರಯತ್ನದಲ್ಲಿ ಮುನ್ನಡೆ. ನಿಗದಿತ ಸಮಯಕ್ಕೆ  ಕಾರ್ಯ ಮುಗಿಸಲು ಸಾಮೂಹಿಕ ಪ್ರಯತ್ನ.   ಉತ್ಪನ್ನಗಳ ಗುಣಮಟ್ಟ ಸುಧಾರಣೆಯತ್ತ ಗಮನ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ಲಾಭ. ಫ್ಯಾಶನ್ ಡಿಸೈನಿಂಗ್ ವೃತ್ತಿಯವರಿಗೆ ಬೇಡಿಕೆ. ಗಣೇಶ ಪಂಚರತ್ನ, ರಾಮ ಭುಜಂಗಪ್ರಯಾತ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.

 
೧೧. ಕುಂಭ:.

 ಎಣಿಕೆಗೆ ಮೀರಿದಷ್ಟು ಕಾರ್ಯಗಳ ಹೊರೆ. ಹಲವು ರಂಗಗಳಿಂದ ಏಕಕಾಲಕ್ಕೆ ಕರ್ತವ್ಯದ ಕರೆ.  ಆಪ್ತರಿಂದ ಸಹಾಯದ ಕೊಡುಗೆ. ಉದ್ಯೋಗ ಸ್ಥಾನದಲ್ಲಿ ಕಿರಿಯರಿಗೆ ಮಾರ್ಗದರ್ಶನ.  ಮರುದಿನದ ಆಯೋಜಿತ ಸೇವಾ ಕಾರ್ಯಗಳಿಗೆ ಸಿದ್ಧತೆ. ಗಣೇಶ ಕವಚ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.


೧೨. ಮೀನ:

ಅವಸರದ ಕಾರ್ಯಕ್ರಮಗಳು. ಸರಕಾರಿ ಇಲಾಖೆಗಳವರ ಸಕಾರಾತ್ಮಕ ಸ್ಪಂದನ. ಕೃಷಿ ಆದಾರಿತ ಉದ್ಯಮ ಘಟಕ  ಆರಂಭಿಸಲು ನುರಿತವರ ಸಹಾಯ ಸಂಭವ. ಉದ್ಯೋಗ ಅರಸುತ್ತಿರುವವರಿಗೆ   ಸಮರ್ಪಕ ಅವಕಾಶಗಳು ಗೋಚರ. ಲೇವಾದೇವಿ ವ್ಯವಹಾರಸ್ಥರಿಗೆ ಆದಾಯ ಕುಸಿತ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.