ದಿನ ಭವಿಷ್ಯ
07-07-2025

-ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 7
೧.ಮೇಷ:
ಮನಸ್ಸನ್ನು ಸ್ಥಿರಗೊಳಿಸಲು ತೀವ್ರ ಸಾಧನೆ. ಉದ್ಯೋಗದಲ್ಲಿ ಸ್ಥಿರವಾದ ಪ್ರಗತಿ ಸಹಚರರ ನಡುವೆ ಸೌಹಾರ್ದ ವೃದ್ಧಿ. ಉದ್ಯಮಗಳ ಸ್ಥಿತಿ ಸಮಗ್ರ ಸುಧಾರಣೆ. ಉತ್ಪನ್ನಗಳ ಜನಪ್ರಿಯತೆ ಹೆಚ್ಚಳ. ವಾಸಸ್ಥಾನ
ನವೀಕರಣಕ್ಕೆ ಆರಂಭ. ಸಂಸಾರದಲ್ಲಿ ಎಲ್ಲರಿಗೂ ಆರೋಗ್ಯಭಾಗ್ಯ. ಗಣಪತಿ ಅಥರ್ವ ಶೀರ್ಷ, ಆದಿತ್ಯ ಹೃದಯ , ರಾಮರಕ್ಷಾ ಸ್ತೋತ್ರ ಪಾರಾಯಣ ಮಾಡಿ.
೨.ವೃಷಭ:
ಧಾರ್ಮಿಕತೆಯತ್ತ ವಾಲುತ್ತಿರುವ ಮನಸ್ಸು. ಮನೆಯಲ್ಲಿ ದೇವತಾರ್ಚನೆ ಆರಂಭ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ ಮುಂದುವರಿಕೆ. ಸ್ವಂತ ಉದ್ಯಮದಲ್ಲಿ ಲಾಭ ವೃದ್ಧಿ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ವಿತ್ತಸಂಸ್ಥೆಯಿಂದ ನೆರವು. ಲೇವಾದೇವಿ ವ್ಯವಹಾರಸ್ಥರಿಗೆ ಅಲ್ಪ
ಲಾಭ.ನೂತನ ವಾಹನ ಖರೀದಿ. ಕುಟುಂಬದಲ್ಲಿ ವಿವಾಹ ನಿಶ್ಚಯ. ದಾಂಪತ್ಯ ಜೀವನದಲ್ಲಿ ಸೌಖ್ಯ. ಗಣೇಶ ಕವಚ, ಆದಿತ್ಯ ಹೃದಯ, ದಾರಿದ್ರ್ಯದಹನ ಶಿವಸ್ತೋತ್ರ ಓದಿ.
೩.ಮಿಥುನ:
ಉದ್ಯೋಗದಲ್ಲಿ ಅರ್ಹತೆಗೆ ಬಂದ ಗೌರವ. ಹೊಸ ವಿದ್ಯೆ ಕಲಿಯುವ ಪ್ರಯತ್ನ. ಧಾರ್ಮಿಕ ಸಂಸ್ಥೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ. ಸ್ವಂತ ಉದ್ಯಮದ ತಾತ್ಕಾಲಿಕ ಹಿನ್ನಡೆ. ಸಾಹಿತ್ಯ ಅಧ್ಯಯನಕ್ಕೆ ವಿಘ್ನ.
ಧ್ಯಾನ, ಯೋಗ ಸಾಧನೆಯಲ್ಲಿ ಮುನ್ನಡೆ. ರಕ್ಷಣಾ ರಂಗದಲ್ಲಿ ಸೇವೆ ಸಲ್ಲಿಸುವವರಿಗೆ ವಿಶಿಷ್ಟ ಗೌರವ ಪ್ರಾಪ್ತಿ. ಸಾಂಸಾರಿಕ ಕ್ಷೇತ್ರದಲ್ಲಿ ಸಮರಸದ ಪಾಲುದಾರಿಕೆ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
೪.ಕರ್ಕಾಟಕ:
ಉದ್ಯೋಗದಲ್ಲಿ ಹಿರಿತನ ಮತ್ತು ಸಾಧನೆಗೆ ಗೌರವ. ಕುಟುಂಬದಲ್ಲಿ ವೈಷಮ್ಯ ತೊಲಗಿ ಸಾಮರಸ್ಯ ಸ್ಥಾಪನೆ. ಉದ್ಯಮದಲ್ಲಿ ಸಾಧಾರಣ ತೃಪ್ತಿಕರ ಲಾಭ. ಕೃಷ್ಯುತ್ಪಾದನೆ ಮಾರಾಟದಿಂದ ಮಧ್ಯಮ ಲಾಭ. ಪರಿಸರ ರಕ್ಷಣೆಯ ಚಟುವಟಿಕೆಗಳಲ್ಲಿ ಆಸಕ್ತಿ. ಸಾಮಾಜಿಕರಿಂದ ಗೌರವ. ಹಳೆಯ ಗೆಳೆಯರೊಂದಿಗೆ ಮತ್ತೆ ಸಂಪರ್ಕ. ಆರೋಗ್ಯ ಉತ್ತಮ. ಗಣೇಶಯಶಸ್ಸು್ನ, ನವಗ್ರಹ ಸ್ತೋತ್ರ, ದಕ್ಷಿಣಾಮೂರ್ತಿ ಸ್ತೋತ್ರ ಓದಿ.
೫.ಸಿಂಹ:
ವೇಗದ ನಡೆಗೆ ತಡೆ ಬಂದ ಅನುಭವ. ಉದ್ಯೋಗದಲ್ಲಿ ಉನ್ನತ ಸ್ಥಾನ ಹೊಂದುವ ಪ್ರಯತ್ನ. ಸ್ವಂತ ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ನೌಕರರಿಂದ ಹೆಚ್ವು ಪ್ರತಿಫಲ ಅಪೇಕ್ಷೆ. ಹತ್ತಿರದ ದೇವಾಲಯಕ್ಕೆಭೇಟಿ. ಕುಟುಂಬದ ಕೂಡುವಿಕೆಯಲ್ಲಿ ದೇವತಾಕಾರ್ಯಕ್ಕೆ ಸಿದ್ಧತೆ. ಉತ್ತರ ದಿಕ್ಕಿನಿಂದ ಶುಭ ಸಮಾಚಾರ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಕವಚ, ನರಸಿಂಹ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
೬. ಕನ್ಯಾ:
ಸಂತೃಪ್ತಿ ನೀಡಿದ ಯಶಸ್ಸು. ಉದ್ಯೋಗದಲ್ಲಿ ಗೌರವ.ಅಕಸ್ಮಾತ್ ಧನಪ್ರಾಪ್ತಿಯ ಸಾಧ್ಯತೆ. ಸರಕಾರಿ ಉದ್ಯೋಗಿಗಳಿಗೆ ದಿಢೀರ್ ವರ್ಗಾವಣೆ.
ಸ್ವಂತ ಉದ್ಯಮದ ಕಟ್ಟಡ ವಿಸ್ತರಣೆ ಆರಂಭ. ವಿತ್ತಸಂಸ್ಥೆಯಿಂದ ಧನಸಹಾಯ ಲಭ್ಯ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಗೆ ಪ್ರಥಮ ಪ್ರಾಶಸ್ತ್ಯ. ದೂರದೃಷ್ಟಿಯ ಯೋಜನೆಯಲ್ಲಿ ಹೂಡಿಕೆಯಿಂದ ಲಾಭ. ಗಣೇಶ ಅಷ್ಟಕ,ಆದಿತ್ಯ ಹೃದಯ, ದುರ್ಗಾಸ್ತೋತ್ರ ಓದಿ.
೭.ತುಲಾ:
ದೇವತಾರಾಧನೆಯಿಂದ ಯಶಸ್ಸು ಪ್ರಾಪ್ತಿ. ಬಾಳಸಂಗಾತಿಯಿಂದ ಸಂಪೂರ್ಣ ಸಹಕಾರ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯಿಂದ ಕಾರ್ಯನಿರ್ವಹಣೆ. ಆಪ್ತರಿಂದ ಸಕಾಲಿಕ ಸಲಹೆ ಹಾಗೂ ಸಹಕಾರ. ವ್ಯವಹಾರದ ಕ್ಷೇತ್ರ ವಿಸ್ತರಣೆಗೆ ವಿಘ್ನ. ವಸ್ತ್ರ, ಆಭರಣ ಖರೀದಿಯಲ್ಲಿ ಆಸಕ್ತಿ. ಶಕ್ತಿ ದೇವತೆಯ ಕ್ಷೇತ್ರದರ್ಶನದಿಂದ ಬದುಕಿನಲ್ಲಿ ಆಶಾಭಾವನೆ ಮತ್ತು ಹುರುಪು ಬೆಳವಣಿಗೆ. ಗಣೇಶ ಕವಚ, ಆದಿತ್ಯ ಹೃದಯ, ಶಾರದಾಸ್ತೋತ್ರ ಓದಿ.
೮.ವೃಶ್ಚಿಕ:
ನೊಂದ ಸಂಸಾರಕ್ಕೆ ಮಾರ್ಗದರ್ಶಕರಾಗುವ. ಗುರು, ದೇವತಾನುಗ್ರಹದಿಂದ ಯಶಸ್ಸು ಪ್ರವಿಷ್ಣು ಉದ್ಯೋಗದಲ್ಲಿ ಪದೋನ್ನತಿ ಅಥವಾ ವೇತನ ಏರಿಕೆ ಸಂಭವ. ಸರಕಾರಿ ನೌಕರರಿಗೆ ಶುಭ ಸಮಾಚಾರ. ಸ್ವಂತ ಉದ್ಯಮ ವಿಸ್ತರಣೆಗೆ ಕಾರ್ಯ ಯೋಜನೆ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ. ಅವಿವಾಹಿತರಿಗೆ ವಿವಾಹ ಯೋಗ. ಹಳೆಯ ನೆಂಟರ ಭೇಟಿ ಸಂಭವ. ಗಣೇಶ ಸ್ತೋತ್ರ, ನವಗ್ರಹ ಸ್ತೋತ್ರ, ವಿಷ್ಣು ಸಹಸ್ರನಾಮ ಓದಿ.
೯. ಧನು:
ಆರೋಗ್ಯ ಕ್ಷಿಪ್ರಗತಿಯಲ್ಲಿ ಸುಧಾರಣೆ. ಹಳೆಯ ಒಡನಾಡಿಗಳ ಭೇಟಿಯಿಂದ ಬದುಕಿನಲ್ಲಿ ನವೋತ್ಸಾಹ. ಉದ್ಯೋಗದಲ್ಲಿ ಗೌರವದ ಸ್ಥಾನ. ಆದಾಯ ಹೆಚ್ಚಳದ ಯೋಜನೆಗಳು ನಿಧಾನ ಗತಿಯಲ್ಲಿ ಮುನ್ನಡೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಸಾಮಾಜಿಕ ಕಾರ್ಯದಲ್ಲಿ ಪ್ರಗತಿ ಕುಂಠಿತ. ಕೃಷಿಯಲ್ಲಿ ತೊಡಗಿಸಿಕೊಳ್ಳುವ ಹಂಬಲಕ್ಕೆ ಹಿತಶತ್ರುಗಳ ಅಡ್ಡಗಾಲು. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಪಾರಾಯಣ ಮಾಡಿ.
೧೦.ಮಕರ:
ಒಂದಿಲ್ಲೊಂದು ಕಾಟದಿಂದ ಚಿಂತಿತರಾಗಿದ್ದೀರಿ. ಆತ್ಮಬಲ ವೃದ್ಧಿಗೆ ವಿಶೇಷ ಪ್ರಯತ್ನ. ಹಿರಿಯರಿಂದ ಪೂರ್ಣಹೃದಯದ ಸಹಕಾರ. ದೇವತಾರಾಧನೆ ಮತ್ತು ಜಪ, ಧ್ಯಾನಗಳಿಂದ ಸಂಕಷ್ಟಗಳು ದೂರ. ಸ್ತ್ರೀಯರಿಗೆ ಪತಿಗೃಹದವರಿಂದ ಸಹಾಯ. ಉದ್ಯೋಗ ಪರಿವರ್ತನೆ ಪ್ರಯತ್ನಕ್ಕೆ ಹಂತಹಂತವಾಗಿ ಯಶಸ್ಸು. ಮಕ್ಕಳ ಕ್ಷೇಮದ ಕುರಿತು ಚಿಂತೆ. ಆಪ್ತರಿಂದ ಸಕಾಲಕ್ಕೆ ಸಹಾಯ. ಗಣೇಶ ಕವಚ, ವಿಷ್ಣು ಸಹಸ್ರನಾಮ, ದೇವೀ ಕವಚ ಪಾರಾಯಣ ಮಾಡಿ.
೧೧. ಕುಂಭ:
ಕುಟುಂಬದ ಜವಾಬ್ದಾರಿ ನಿರ್ವಹಣೆಯೊಂದಿಗೆ ಸಮಾಜದ ಕ್ಷೇಮ ಚಿಂತನೆ. ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ ಮುಂದುವರಿಕೆ. ಸ್ವಂತ ಉದ್ಯಮದ ಹಿತ ಅಬಾಧಿತ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಉತ್ತಮ ಆದಾಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸೇವಾ ಚಟುವಟಿಕೆಗಳಲ್ಲಿ ಪಾಲುಗೊಳ್ಳಲು ಮನೆಮಂದಿಯ ಸಂಪೂರ್ಣ ಸಹಕಾರ. ಹಿರಿಯರು, ಮಕ್ಕಳು ಕ್ಷೇಮ.ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೧೨.ಮೀನ:
ಶನಿ ಮಹಾತ್ಮನ ಕರುಣೆಯಿಂದ ಜೀವನ ಸುಗಮ. ಉದ್ಯೋಗ ಸ್ಥಾನದಲ್ಲಿ ಅನುಕೂಲದ ಸ್ಥಿತಿ. ಸೇವಾರೂಪದ ಕಾರ್ಯಗಳನ್ನು ನಿರ್ವಹಿಸುವವರಿಗೆ ಅನುಕೂಲದ ವಾತಾವರಣ. ಸರಕಾರಿ ಅಧಿಕಾರಿಗಳ ಹಾಗೂ ನೌಕರರ ಉತ್ತಮ ಸ್ಪಂದನೆಯಿಂದ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ. ಸಂಸಾರದಲ್ಲಿ ಸಂಗಾತಿಯ ಪೂರ್ಣ ಸಹಕಾರ ಹಿರಿಯರ ಶುಭ ಹಾರೈಕೆ ಶ್ರೀರಕ್ಷೆಗಳು. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಪಾರಾಯಣ ಮಾಡಿ.