ದಿನ ಭವಿಷ್ಯ

24-07-2025

Jul 24, 2025 - 03:00
ದಿನ ಭವಿಷ್ಯ

                 ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  6

೧. ಮೇಷ:

  ಮಾನಸಿಕ ತುಮುಲದಿಂದ ಹೊರಬರಲು ಉದ್ಯೋಗಸ್ಥರ ಪ್ರಯತ್ನ.   ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ನಿರ್ಮಾಣ ಸಂಸ್ಥೆ ನೌಕರರಿಗೆ ಕೊಂಚ ಸಮಾಧಾನ. ಸಂಸಾರ ಸುಖ, ಆರೋಗ್ಯ ಉತ್ತಮ. ವಿದೇಶೀ ಮೂಲದಿಂದ ಧನಾಗಮದ ಸಾಧ್ಯತೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.


೨. ವೃಷಭ:

  ಸುಗಮವಾದ ಹಣಕಾಸು ವ್ಯವಹಾರ. ಸರಕಾರಿ  ನೌಕರರಿಗೆ  ವರ್ಗಾವಣೆಯ ಸೂಚನೆ. ಮನೆಯಲ್ಲಿ  ನೆಮ್ಮದಿಯ ವಾತಾವರಣ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಕೇಟರಿಂಗ್ ವ್ಯವಹಾರಸ್ಥರಿಗೆ ಸಮಯ ಪಾಲನೆಯ ಸವಾಲು. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೩ಮಿಥುನ:

 ಗಟ್ಟಿ ಮನಸ್ಸಿನಿಂದ ಮಾಡುವ ಪ್ರಯತ್ನಕ್ಕೆ ಜಯ. ಉದ್ಯೋಗಸ್ಥರ  ಕಾರ್ಯ ನಿರ್ವಹಣೆ  ನಿರಾತಂಕ. ವ್ಯವಹಾರಸ್ಥರಿಗೆ ತಾತ್ಕಾಲಿಕ ತೊಂದರೆ. ವಾಹನ ಚಾಲನೆಯಲ್ಲಿ ಎಚ್ಚರ. ಗೃಹಿಣಿಯರು,ಮಕ್ಕಳಿಗೆ ಸಂತೋಷ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೪. ಕರ್ಕಾಟಕ:


  ಉದ್ಯೋಗ ಸ್ಥಾನದಲ್ಲಿ ಮಾಮೂಲು ವಾತಾವರಣ. ಪಾಲುದಾರಿಕೆ ವ್ಯವಹಾರ ತೃಪ್ತಿಕರ. ಭೂಮಿ  ವ್ಯವಹಾರ ಮಾಡುವವರಿಗೆ‌  ಉತ್ತಮ ಲಾಭ. ವ್ಯವಹಾರ ಸಂಬಂಧ ಸಣ್ಣ ಪ್ರವಾಸ ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಅನುಕೂಲ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
 


೫.ಸಿಂಹ:

  ಸ್ವಯಂ ಉದ್ಯೋಗಸ್ಥರಿಗೆ ದೈವಾನುಗ್ರಹ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರ ಉದ್ಯಮಗಳಿಗೆ ಶುಭದಿನ. ಮುದ್ರಣ ವ್ಯವಹಾರದವರಿಗೆ ಅನುಕೂಲ. ಗಣೇಶ ಪಂಚರತ್ನ, ಶಿವಕವಚ, ನವಗ್ರಹ ಸ್ತೋತ್ರ ಓದಿ.

೬. ಕನ್ಯಾ:

 ಹಳೆಯ ಹೂಡಿಕೆಯಿಂದ ದೊಡ್ಡ ಮೊತ್ತ ಲಭ್ಯ.   ಉನ್ನತ ಉದ್ಯೋಗಸ್ಥರಿಗೆ. ಅಸಹಾಯಕರಿಗೆ ಸಹಾಯ ಮಾಡುವ ಯೋಗ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳಿಗೆ ಸಮಯದ ಸದುಪಯೋಗಕ್ಕೆ ಮಾರ್ಗದರ್ಶನ‌. ಗಣೇಶ ತ್ರಿಶತಿ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೭. ತುಲಾ:

  ಉದ್ಯೋಗ ಸ್ಥಾನದಲ್ಲಿ ಹೆಚ್ಚುವರಿ ಜವಾಬ್ದಾರಿ. ನಿವೇಶನ, ಮನೆ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಅನುಕೂಲ. ಕೃಷಿ ಉತ್ಪನ್ನ ಮಾರಾಟಗಾರರಿಗೆ  ತೃಪ್ತಿಕರ ಆದಾಯ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಹಿರಿಯರಿಗೆ ಉಲ್ಲಾಸದವಾತಾವರಣ.  ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.


೮.ವೃಶ್ಚಿಕ:

 ಉದ್ಯೋಗ, ವ್ಯವಹಾರಗಳಲ್ಲಿ  ಸಮಾಧಾನ. ಮಾಲಿಕ- ನೌಕರರ ಬಾಂಧವ್ಯ ಸುಧಾರಣೆ. ಆಸ್ತಿ ಖರೀದಿ, ಮಾರಾಟ ವ್ಯವಹಾರಕ್ಕೆ ಅನುಕೂಲ. ಲೇವಾದೇವಿ ವ್ಯವಹಾರಸ್ಥರಿಗೆ  ಸ್ವಲ್ಪಮಟ್ಟಿನ ಲಾಭ. ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ  ಉತ್ತಮ ಲಾಭ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ


೯.ಧನು:

 ಹೊಂದಾಣಿಕೆ,  ಕಾರ್ಯನಿಷ್ಠೆ ಜೊತೆಗೂಡಿ ಯಶಸ್ಸು. ಹಿತಶತ್ರುಗಳ ಬಗ್ಗೆ ಎಚ್ಚರಿಕೆ. ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ದೇವತಾರ್ಚನೆಯಲ್ಲಿ ಆಸಕ್ತಿ. ವ್ಯವಹಾರದಲ್ಲಿ ಎಡವದಂತೆ ಎಚ್ಚರ. ಮಕ್ಕಳ ಓದಿನತ್ತ ಗಮನವಿರಲಿ. ಸಂಕಷ್ಟಹರ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಹನುಮಾನ್‌ ಚಾಲೀಸಾ ಓದಿ.


೧೦.ಮಕರ:

  ಉದ್ಯೋಗ ಸ್ಥಾನದಲ್ಲಿ ಸ್ವತಂತ್ರ ಜವಾಬ್ದಾರಿ. ಮನೆಮಂದಿಯ ಸಹಕಾರ,ಉತ್ತಮ. ಪಾಲುದಾರಿಕೆ ವ್ಯವಹಾರಸ್ಥರಿಗೆ ಕೊಂಚ ಹಿನ್ನಡೆ. ದ್ರವಪದಾರ್ಥ ವ್ಯಾಪಾರಿಗಳಿಗೆ ಅಧಿಕ ಲಾಭ. ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ. ಗಣಪತಿ ಅಥರ್ವಶೀರ್ಷ, ಕಾರ್ತಿಕೇಯ ಸ್ತೋತ್ರ, ಗುರುಸ್ತೋತ್ರ ಓದಿ.


೧೧. ಕುಂಭ:

  ದಿನವಿಡೀ ಬಿಡುವಿಲ್ಲದ  ಚಟುವಟಿಕೆಗಳು. ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಅನುಕೂಲ ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

೧೨. ಮೀನ:

 ವ್ಯವಹಾರದ ಓಟಕ್ಕೆ ಸಣ್ಣ ತಡೆ. ಇಲಾಖೆಗಳಿಂದ ಅನುಕೂಲಕರ ಸ್ಪಂದನ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಮನೆಮಂದಿಯಿಂದ ವ್ಯವಹಾರದಲ್ಲಿ ಉತ್ತಮ ಸಹಕಾರ. ಸಾಮಾಜಿಕ ಕಾರ್ಯದ ಒತ್ತಡ. ಗಣಪತಿ ಅಥರ್ಬಶೀರ್ಷ, ದತ್ತಾತ್ರೇಯ ಸ್ತೋತ್ರ,ಶನಿಮಹಾತ್ಮೆ ಓದಿ.