ದಿನ ಭವಿಷ್ಯ

14-08-2025

Aug 14, 2025 - 15:37
Aug 13, 2025 - 16:42
ದಿನ ಭವಿಷ್ಯ

                ಜ್ಯೋತಿರ್ಮಯ


ಅದೃಷ್ಟ ಸಂಖ್ಯೆ  5

೧. ಮೇಷ:

  ಮುದ ನೀಡುವ ಅನಿರೀಕ್ಷಿತ ಘಟನೆಗಳು. ಉದ್ಯೋಗಸ್ಥರಿಗೆ ಸಹವರ್ತಿಗಳಿಂದ ಸಕಾಲಿಕ ನೆರವು. ವ್ಯವಹಾರಸ್ಥರಿಗೆ ದೇವತೋಪಾಸನೆಯಿಂದ ಕ್ಷಿಪ್ರಾನುಗ್ರಹ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಹರ್ಷದ ಸನ್ನಿವೇಶ. ಹೊಸ ಪಾಲುದಾರಿಕೆ  ವ್ಯವಹಾರದ ಪ್ರಸ್ತಾವ. ಗಣೇಶ ಕವಚ, ವೇದಸಾರ ಶಿವಸ್ತೋತ್ರ, ಶನಿಮಹಾತ್ಮೆ ಓದಿ.


  

೨. ವೃಷಭ:

ಭೌತಿಕ ಅನುಕೂಲತೆಗಳನ್ನು ಕಲ್ಪಿಸುವ  ಯೋಜನೆಗಳಿಗೆ ಚಾಲನೆ. ದೀರ್ಘಾವಧಿ ಹೂಡಿಕೆಗಳಲ್ಲಿ  ವಿಶೇಷ ಆಸಕ್ತಿ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ. ಉಳಿತಾಯ ಯೋಜನೆಗಳ  ಏಜೆಂಟರಿಗೆ ಒಳ್ಳೆಯ ದಿನ. ಕಲೋಪಾಸಕರಿಗೆ ಹೊಸ ಅವಕಾಶ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೩ಮಿಥುನ:

 ಮನೋಬಲವೃದ್ಧಿಯೊಂದೇ ಕಾರ್ಯಸಿದ್ಧಿಗೆ ಮಾರ್ಗ. ಉದ್ಯೋಗ ರಂಗದಲ್ಲಿ ಹೆಚ್ಚಿನ ಜವಾಬ್ದಾರಿ. ಕರಕುಶಲ ಸಾಮಗ್ರಿಗಳ ನಿರ್ಮಾಪಕರಿಗೆ ಏಳಿಗೆಯ ಕಾಲ. ಗೃಹಿಣಿಯರಿಗೆ ಸ್ವಂತ ಆದಾಯ ಗಳಿಕೆಯಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ಪಾಠೇತರ ಚಟುವಟಿಕೆಗಳಲ್ಲಿ ಆಸಕ್ತಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೪. ಕರ್ಕಾಟಕ:

  ಭವಿಷ್ಯತ್ತಿಗಾಗಿ ಉಳಿತಾಯ ಕ್ರಮ.  ಕಟ್ಟಡ ನಿರ್ಮಾಣ, ಆಸ್ತಿ ಖರೀದಿ- ಮಾರಾಟ ವ್ಯವಹಾರ ನಿಧಾನ ಪ್ರಗತಿ. ವೈದ್ಯರ ಕೀರ್ತಿ ವರ್ಧನೆ. ಉದ್ಯೋಗ ಅರಸುತ್ತಿರುವವರಿಗೆ  ಸದವಕಾಶ. ಗೃಹಿಣಿಯರಿಗೆ ಮನೋರಂಜನೆ. ಗಣಪತಿ ಅಥರ್ವಶೀರ್ಷ, ದಾರಿದ್ರ್ಯದಹನ ಶಿವಸ್ತೋತ್ರ, ಗುರುಸ್ತೋತ್ರ ಓದಿ.
 


೫.ಸಿಂಹ:

ಉದ್ಯೋಗ, ವ್ಯವಹಾರಗಳ ಪ್ರಗತಿ‌ ನಿರಾತಂಕ.  ಪಾರದರ್ಶಕ ನಡೆಯಿಂದ ವಿಶ್ವಾಸ ವೃದ್ಧಿ. ದೂರದ ಬಂಧುಗಳ ಆಗಮನದಿಂದ ಸಂತಸ. ವ್ಯವಹಾರ ಕ್ಷೇತ್ರ ವಿಸ್ತರಣೆಯ ಕುರಿತು ವಿಮರ್ಶೆ. ಮಕ್ಕಳಿಗೆ ವ್ಯಾಸಂಗ, ಮನೋರಂಜನೆ ಎರಡರಲ್ಲೂ  ಪ್ರಯಾಣ‌. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

೬. ಕನ್ಯಾ:
  ಮನೋರಂಜನಾ ಸಂಬಂಧಿ  ಉದ್ಯಮಗಳಿಗೆ ಪ್ರಗತಿ. ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ  ಆರ್ಥಿಕ ಲಾಭ. ಮಕ್ಕಳ ವಿವಾಹ ಮ್ಗಾತುಕತೆಯಲ್ಲಿ ಮುನ್ನಡೆ. ಗೃಹೋಪಕರಣಗಳ‌ ಖರೀದಿಗೆ ಧನವ್ಯಯ. ವ್ಯವಹಾರ ಸಂಬಂಧ ಉತ್ತರಕ್ಕೆ ಪ್ರಯಾಣ‌. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

೭. ತುಲಾ:
 ಉದ್ಯೋಗ ಸ್ಥಾನದಲ್ಲಿ ತಕ್ಕಮಟ್ಟಿಗೆ ಅನುಕೂಲ. ಬಂಧುವರ್ಗದವರೊಡನೆ ದೇವಾಲಯ ದರ್ಶನ. ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ವೈದ್ಯರೊಂದಿಗೆ ಸಮಾಲೋಚನೆಯಿಂದ ಸಂಶಯ ನಿವಾರಣೆ. ಅವಿವಾಹಿತರಿಗೆ ವಿವಾಹ ಯೋಗ. ಗಣೇಶ ಕವಚ, ದುರ್ಗಾ ಸ್ತೋತ್ರ, ಹನುಮಾನ್‌ ಚಾಲೀಸಾ ಓದಿ.

೮.ವೃಶ್ಚಿಕ:

 ಅರ್ಹರಿಗೆ ಉಪಕಾರ ಮಾಡುವ ಅವಕಾಶ ಪ್ರಾಪ್ತಿ. ಮಕ್ಕಳ ಹೊಸ ಉದ್ಯಮ ಯೋಜನೆಗೆ ಚಾಲನೆ. ವಸ್ರ್ರ, ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳ ಆದಾಯ ವೃದ್ಧಿ. ಕರಕುಶಲ ಸಾಮಗ್ರಿ ತಯಾರಕರಿಗೆ ಉದ್ಯೋಗಾವಕಾಶ. ಬಂಧುಗಳ ಕಡೆಯಿಂದ ಶುಭ ಸಮಾಚಾರ. ಗಣೇಶ ಕವಚ, ಶಿವಕವಚ, ಆದಿತ್ಯಹೃದಯ ಓದಿ.

೯. ಧನು:

  ಉದ್ಯೋಗಸ್ಥರಿಗೆ ಮೇಲಿನವರಿಂದ ಕಿರಿಕಿರಿ. ಅಪರೂಪದ ಬಂಧುಗಳ ಭೇಟಿ. ಸಣ್ಣ ಶಾರೀರಿಕ ತೊಂದರೆಗಾಗಿ ವೈದ್ಯರ ಭೇಟಿ. ನೆರೆಮನೆಯವರ ಸಮಸ್ಯೆ ಪರಿಹಾರಕ್ಕೆ ಸಹಾಯ. ಮಿತ್ರನಿಗೋಸ್ಕರ ನ್ಯಾಯಾಲಯಕ್ಜೆ ಯಾತ್ರೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೧೦.ಮಕರ:
  ನಿಗದಿತ ಸಮಯದಲ್ಲಿ ಕೆಲಸ ಮುಗಿಸಿದ ಸಮಾಧಾನ. ಮಕ್ಕಳ ಶೈಕ್ಷಣಿಕ ಪ್ರಗತಿಯ  ಚಿಂತೆ. ಸಿವಿಲ್ ಎಂಜಿನಿಯರರು, ಕಂಟ್ರಾಕ್ಟರುಗಳಿಗೆ ಹೊಸ ಕೆಲಸಕ್ಕೆ ಆಹ್ವಾನ. ಲೇವಾದೇವಿ ವ್ಯವಹಾರದಲ್ಲಿ ಕಿಂಚಿತ್ ಲಾಭ. ಬ್ಯೂಟಿ ಪಾರ್ಲರ್ ನಿರ್ವಾಹಕರಿಗೆ ಲಾಭ ವೃದ್ಧಿ. ಗಣಪತಿ ಅಥರ್ವಶೀರ್ಷ, ಮಹಾಲಕ್ಷ್ಮಿ ಅಷ್ಟಕ, ಹನುಮಾನ್ ಚಾಲೀಸಾ ಓದಿ.


೧೧. ಕುಂಭ:

ನಿತ್ಯದ ವ್ಯವಹಾರಗಳಲ್ಲಿ ಕೊಂಚ ಕಿರಿಕಿರಿ. ಉದ್ಯೋಗಸ್ಥರಿಗೆ ಹಿತಶತ್ರುಗಳಿಂದ ತೊಂದರೆ. ಸಾಮಾಜಿಕ ಕ್ಷೇತ್ರದಲ್ಲಿ ಶುಭಸೂಚನೆಯ ವಿದ್ಯಮಾನಗಳು. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಳ. ದೇವತಾರ್ಚನೆಯಲ್ಲಿ ಪಾಲುಗೊಳ್ಳುವ ಅವಕಾಶ‌. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ತ, ಶನಿಮಹಾತ್ಮೆ ಓದಿ.


೧೨. ಮೀನ:

ದಿನನಿತ್ಯದ ವ್ಯವಹಾರಗಳಲ್ಲಿ ಯಶಸ್ಸು. ಸರಕಾರಿ ಕಾರ್ಯಾಲಯಗಳಲ್ಲಿ ಸಹಕಾರ. ಹಣಕಾಸು ವ್ಯವಹಾರ ನಡೆಸುವವರಿಗೆ ಕೊಂಚ ಹಿನ್ನಡೆ. ಕೃಷ್ಯುತ್ಪನ್ನ ಮಾರಾಟದಿಂದ ಮಧ್ಯಮ ಲಾಭ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿಯಿಂದ ನೆಮ್ಮದಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.