ದಿನ ಭವಿಷ್ಯ

17-08-2025

Aug 18, 2025 - 16:59
ದಿನ ಭವಿಷ್ಯ


                   ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  8

೧. ಮೇಷ:

   ಉದ್ಯೋಗ, ವ್ಯವಹಾರ ಕ್ಷೇತ್ರಗಳಿಗೆ  ವಿರಾಮ.  ಅವಶ್ಯವುಳ್ಳವರಿಗೆ ಸಲಹೆಯ ರೂಪದಲ್ಲಿ ಮಾರ್ಗದರ್ಶನ. ಭೂ ಸಂಬಂಧಿ  ಉದ್ಯಮಗಳಿಗೆ ಶುಕ್ರದೆಶೆ. ಮನೆಯಲ್ಲಿ‌ ಎಲ್ಲರ ಆರೋಗ್ಯ ಉತ್ತಮ. ಅಪರೂಪದ  ಬಂಧುಗಳ ಭೇಟಿ. ಒಟ್ಟಿನಲ್ಲಿ  ಆನಂದದ ದಿನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ,  ಶನಿಮಹಾತ್ಮೆಓದಿ.


೨. ವೃಷಭ:

  ಹಲವು ವಲಯಗಳಿಂದ ನೆರವು ಲಭ್ಯ. ಹಣಕಾಸು ವ್ಯವಹಾರ ಸುಗಮ.ಅನೇಕ ಮಂದಿ  ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ. ಸರಕಾರಿ  ಅಧಿಕಾರಿಗಳಿಗೆ ವಿರಾಮದ ದಿನವೂ ಒತ್ತಡ. ಮನೆಯಲ್ಲಿ  ನೆಮ್ಮದಿಯ ವಾತಾವರಣ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಕವಚ, ಆದಿತ್ಯಹೃದಯ ಓದಿ.


೩ಮಿಥುನ:

  ಸಂಸಾರದಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ದೀರ್ಘಕಾಲದ ತೊಂದರೆಗಳಿಂದ ಮುಕ್ತಿ. ಉದ್ಯೋಗಸ್ಥರಿಗೆ ವಿರಾಮದ ಕಾರಣ  ನಿರಾತಂಕ. ವ್ಯವಹಾರಸ್ಥರಿಗೆ ಆತಂಕ ನಿವಾರಣೆ. ಸ್ಥಿರವಾದ ಯತ್ನದಿಂದ  ಜಯ. ಗೃಹಿಣಿಯರು,ಮಕ್ಕಳಿಗೆ  ಕ್ಷೇಮ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೪. ಕರ್ಕಾಟಕ:

  ವಿಳಂಬವಾದರೂ ಕೈಸೇರಿದ ಸಹಾಯ.    ಉದ್ಯೋಗಸ್ಥರಿಗೆ   ನೆಮ್ಮದಿಯ ವಾತಾವರಣ. ಪಾಲುದಾರಿಕೆ ವ್ಯವಹಾರ ಕುಂಠಿತ. ಕಟ್ಟಡ ನಿರ್ಮಾಣ-ಮಾರಾಟ  ವ್ಯವಹಾರಸ್ಥರಿಗೆ   ಉತ್ತಮ ಲಾಭ. ಕೃಷಿಕರಿಗೆ ಸಾಮಾನ್ಯ ತೃಪ್ತಿಯ ಸನ್ನಿವೇಶ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಮಾಧಾನ. ಗಣೇಶ ಸ್ತೋತ್ರ, ಶಿವ ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
 


೫.ಸಿಂಹ:

 ವಿಘ್ನಗಳನ್ನು  ನಿರ್ಲಕ್ಷಿಸಿ  ಮುನ್ನಡೆಯಿರಿ. ಸ್ವಯಂ ಉದ್ಯೋಗಸ್ಥರಿಗೆ ಲಕ್ಷ್ಮೀ ಕಟಾಕ್ಷ.  ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ  ಯಶಸ್ಸು. ಮಕ್ಕಳಿಗೆ  ರಜೆಯಲ್ಲಿ ಉತ್ತಮ ಸಂಸ್ಕಾರ ನೀಡುವ ಪ್ರಯತ್ನ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.

೬. ಕನ್ಯಾ:

ಅನಿರೀಕ್ಷಿತ ಮೂಲದಿಂದ  ಧನಪ್ರಾಪ್ತಿ.  ಗುರು ಹಿರಿಯರಿಂದ ಸೂಕ್ತ ಮಾರ್ಗದರ್ಶನ.  ಸಹೋದ್ಯೋಗಿಗಳ ಸೌಹಾರ್ದ ಭೇಟಿ. ವ್ಯವಹಾರಸ್ಥರಿಗೆ  ಹೊಸ ಅವಕಾಶಗಳು ಗೋಚರ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಲಭ್ಯ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೭. ತುಲಾ:

 ಉದ್ಯೋಗಕ್ಕೆ ವಿರಾಮವಾದರೂ ಕೆಲಸದ ಚಿಂತೆ. ನಿವೇಶನ, ಮನೆ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಅನುಕೂಲ. ಕೃಷಿ ಉತ್ಪನ್ನ ಮಾರಾಟಗಾರರಿಗೆ  ತೃಪ್ತಿಕರ  ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಹಿರಿಯರಿಗೆ ಉಲ್ಲಾಸದವಾತಾವರಣ.  ಗೃಹದಲ್ಲಿ ನೆಮ್ಮದಿ, ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೮.ವೃಶ್ಚಿಕ:

  ವ್ಯವಹಾರಗಳು ನಿರೀಕ್ಷೆಯಂತೆ ನಡೆದು ಸಮಾಧಾನ. ಉದ್ಯಮದಲ್ಲಿ ಮಾಲಿಕ- ನೌಕರರ ಬಾಂಧವ್ಯ ಸುಧಾರಣೆ. ಆಸ್ತಿ ಖರೀದಿ, ಮಾರಾಟ ಮಾತುಕತೆ ಯಶಸ್ವಿ. ಹಣಕಾಸು ಲೇವಾದೇವಿ ವ್ಯವಹಾರಸ್ಥರಿಗೆ  ಅಲ್ಪಸ್ವಲ್ಪ ಲಾಭ.  ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ  ಉತ್ತಮ ಲಾಭ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೯.ಧನು:

 ಹೊಂದಾಣಿಕೆ,  ಕಾರ್ಯನಿಷ್ಠೆ ಇವೆರಡರಿಂದ ಯಶಸ್ಸು. ಸಹೋದ್ಯೋಗಿಗಳ ಅಸೂಯೆಗೆ ಗುರಿಯಾಗದಿರಿ.  ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ದೇವತಾರ್ಚನೆಯಲ್ಲಿ ಆಸಕ್ತಿ. ವ್ಯವಹಾರ ಸಂಬಂಧ ಪ್ರಯಾಣ ಸಂಭವ. ಮಕ್ಕಳ ಭವಿಷ್ಯದತ್ತ ಗಮನವಿರಲಿ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೧೦.ಮಕರ:

 ಕೆಲಸಗಳ ಒತ್ತಡವಿಲ್ಲದೆ  ನೆಮ್ಮದಿ. ಮನೆಮಂದಿಯ ಸಹಕಾರ ಉತ್ತಮ. ಪಾಲುದಾರಿಕೆ ವ್ಯವಹಾರಸ್ಥರಿಗೆ ಕೊಂಚ ಹಿನ್ನಡೆ. ಹೊಸ ಉದ್ಯಮ ಆರಂಭಿಸುವ ಯೋಜನೆ ಮುಂದೂಡಿಕೆಯಿಂದ ಶುಭ. ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ. ಮಿಶ್ರಫಲಗಳ ದಿನ. ಗಣೇಶ ಕವಚ, ನರಸಿಂಹ ಕವಚ, ನವಗ್ರಹ ಸ್ತೋತ್ರ ಓದಿ.


೧೧. ಕುಂಭ:

 ಸಾಮಾಜಿಕ ಚಟುವಟಿಕೆಗಳ ಒತ್ತಡ. ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು. ದಿನವಿಡೀ ಬಿಡುವಿಲ್ಲದ ಚಟುವಟಿಕೆಗಳು.  ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ನಿವೃತ್ತರಿಗೆ ವಿಶೇಷ ಮನೋರಂಜನೆ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಶನಿ ಸ್ತೋತ್ರ ಓದಿ.

೧೨. ಮೀನ:
  ನಿರೀಕ್ಷಿದಲಾರದಷ್ಟು ತ್ವರಿತಗತಿಯಿಂದ ಚಟುವಟಿಕೆಗಳ ನಿರ್ವಹಣೆ. ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ಸ್ಪಂದನ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಸಂಗಾತಿಯಿಂದ ವ್ಯವಹಾರದಲ್ಲಿ ಉತ್ತಮ ಸಹಕಾರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭ ಫಲಗಳ ದಿನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.