ದಿನ ಭವಿಷ್ಯ
22-08-2025

ಜ್ತೋತಿರ್ಮಯ
ಅದೃಷ್ಟ ಸಂಖ್ಯೆ 4
ಮೇಷ:
ಸರಿಯಾದ ಲೆಕ್ಕಾಚಾರದೊಂದಿಗೆ ಕ್ರಿಯೆಯಲ್ಲಿ ತೊಡಗಿರಿ. ಹೆಚ್ಚುವರಿ ಆದಾಯದ ಮಾರ್ಗ ಗೋಚರ. ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ. ಸಾಂಸಾರಿಕವಾಗಿ ನೆಮ್ಮದಿಯ ಅನುಭವ. ಗಣೇಶ ಕವಚ, ದೇವೀಸ್ತೋತ್ರ, ಶನಿಮಹಾತ್ಮೆ ಓದಿ.
೨.ವೃಷಭ:
ಜವಾಬ್ದಾರಿಯನ್ನು ಹೊರಲು ನೀವಾಗಿ ಮುಂದಾಗಬೇಡಿ. ಸಾಮಾಜಿಕ ಕಾರ್ಯಗಳಿಗೆ ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಉಳಿತಾಯ ಏಜೆಂಟರಿಗೆ ಸಾಮಾನ್ಯ ಲಾಭ. ಹೊಸ ವ್ಯವಹಾರ ಪ್ರಸ್ತಾವದಿಂದ ಅನುಕೂಲ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೩ಮಿಥುನ:
ಉದ್ಯೋಗ, ವ್ಯವಹಾರ ಎರಡು ಕ್ಷೇತ್ರಗಳಲ್ಲೂ ಜಯ. ಉದ್ಯಮಕ್ಕೆ ಎದುರಾದ ಸೌಲಭ್ಯಗಳ ಸಮಸ್ಯೆ ನಿವಾರಣೆ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ. ಸ್ವಾವಲಂಬಿ ಜೀವನದ ಕಡೆಗೆ ಒಲವು. ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೪. ಕರ್ಕಾಟಕ:
ಜಗಳಗಂಟರ ಮಾತುಗಳಿಗೆ ಪ್ರತಿಕ್ರಿಯೆ ನೀಡದಿರಿ. ಸಣ್ಣ ಉದ್ಯಮಿಗಳಿಗೆ ತುಂಡು ಪುಢಾರಿಗಳ ಕಾಟ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಮಗಳ ವಿವಾಹ ಪ್ರಯತ್ನ ಯಶಸ್ವಿ. ಸಣ್ಣ ಪ್ರಮಾಣದ ಕೃಷಿಕಾರ್ಯದಲ್ಲಿ ಸಂತೃಪ್ತಿ. ಗಣೇಶ ದ್ವಾದಶನಾಮ ಸ್ತೋತ್ರ, ದುರ್ಗಾಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೫.ಸಿಂಹ:
ಜನರ ಗಮನ ಸೆಳೆದ ಕಾರ್ಯಪದ್ಧತಿ. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ. ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ. ಮೂಲಸೌಲಭ್ಯಗಳ ಸುಧಾರಣೆಗೆ ಪ್ರಯತ್ನ. ಗಣೇಶ ತ್ರಿಶತಿ ಸ್ತೋತ್ರ, ವಿಷ್ಣು ಸಹಸ್ರನಾಮ, ಆಂಜನೇಯ ಸ್ತೋತ್ರ ಓದಿ.
೬.ಕನ್ಯಾ:
ಉದರದ ಆರೋಗ್ಯದ ಕುರಿತು ಜಾಗ್ರತೆ ಇರಲಿ. ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಲ್ಲಿ ನಷ್ಟ. ಪಾಲುದಾರಿಕೆ ಉದ್ಯಮದಲ್ಲಿ ನಿಧಾನ ಪ್ರಗತಿ. ಹಿರಿಯರ ಆರೋಗ್ಯ ಸ್ಥಿರವಾಗಿ ಸುಧಾರಣೆ. ಗಣೇಶ ಕವಚ, ಕಾರ್ತಿಕೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೭. ತುಲಾ:
ದುಡಿಮೆಗೆ ತಕ್ಕ ಪ್ರತಿಫಲದ ಭರವಸೆ. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ನೂತನ ನಿವೇಶನ ಖರೀದಿ ಮಾತುಕತೆ. ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಪ್ರಚಾರ. ಗುರುವಿನ ಅನುಗ್ರಹ ಇರುವುದರಿಂದ ಸಂಸಾರದಲ್ಲಿ ಪ್ರೀತಿಗೆ ಕೊರತೆಯಿಲ್ಲ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ದೇವೀಕವಚ ಓದಿ.
೮.ವೃಶ್ಚಿಕ:
ಹಿರಿಯ ಅಧಿಕಾರಿಗಳಿಗೆ ಕಿರಿಕಿರಿ. ಖಾಸಗಿ ರಂಗದವರಿಗೆ ಸಾಮಾನ್ಯ ಪರಿಸ್ಥಿತಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅದೃಷ್ಟ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ಮಕ್ಕಳ ಆರೋಗ್ಯದ ಕುರಿತು ಎಚ್ಚರ. ಗಣೇಶ ಕವಚ, ಶಿವಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.
೯.ಧನು:
ಹೊಸ ಕಲ್ಪನೆಗಳಿಗೆ ರೂಪ ನೀಡುವ ಪ್ರಯತ್ನ. ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಹಿನ್ನಡೆ. ಉದ್ಯೋಗಾಸಕ್ತ ಶಿಕ್ಷಿತರಿಗೆ ಸದವಕಾಶ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ. ವ್ಯವಹಾರದ ಸಂಬಂಧ ಪ್ರಮುಖ ವ್ಯಕ್ತಿಯ ಭೇಟಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಗುರುಸ್ತೋತ್ರ ಓದಿ.
೧೦.ಮಕರ:
ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ. ಕನ್ಯಾರ್ಥಿಗಳಿಗೆ ನಿರಾಶೆಯಿಂದ ಬಿಡುಗಡೆ. ಹಳೆಯ ಒಡನಾಡಿಗಳ ಸಂಪರ್ಕ. ಅನ್ಯಾಯ ಮಾಡಿದವರ ವಿರುದ್ಧ ಸೇಡಿನ ಭಾವನೆ ಬೇಡ. ಮಕ್ಕಳ ಆರೋಗ್ಯ ರಕ್ಷಣೆಗೆ ಕಾಳಜಿ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದೇವೀಕವಚ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:.
ಎಳೆಯರ ಒಡೆತನದ ಘಟಕದ ನೇತೃತ್ವ ವಹಿಸಲು ಆಹ್ವಾನ. ಗ್ರಾಹಕರ ಅಪೇಕ್ಷೆಗೆ ಸರಿಯಾಗಿ ಸ್ಪಂದನ. ಸಮಾಜ ಸೇವಾಕಾರ್ಯಗಳಿಗೆ ಮತ್ತಷ್ಟು ಅವಕಾಶಗಳು. ಕುಶಲಕರ್ಮಿಗಳಿಗೆ ಕೀರ್ತಿ ತರುವ ಸನ್ನಿವೇಶ. ದೇವತಾ ಕಾರ್ಯದಲ್ಲಿ ಭಾಗಿ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ಉದ್ಯೋಗ ಸ್ಥಾನದಲ್ಲಿ ಕೊಂಚ ವ್ಯತ್ಯಾಸ. ಸರಕಾರಿ ಕಾರ್ಯಾಲಯಗಳಲ್ಲಿ ಸಾಮಾನ್ಯ ಅನುಭವ. ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಕಾಲ ಸನ್ನಿಹಿತ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ. ಹೊಸ ವ್ಯವಹಾರ ಪ್ರಸ್ತಾವದಿಂದ ಅನುಕೂಲ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.