ದಿನ ಭವಿಷ್ಯ
30-08-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 3
೧. ಮೇಷ:
ಯಶಸ್ಸಿನ ಕಡೆಗೆ ಸ್ಥಿರವಾದ ನಡಿಗೆ. ಉದ್ಯೋಗಸ್ಥರಿಗೆ ಸುಖಾನುಭೂತಿ. ಗೃಹಾಲಂಕಾರ ಸಾಮಗ್ರಿ ಮಾರಾಟಗಾರರಿಗೆ ಅಧಿಕ ಲಾಭ. ಕೃಷಿಕರಿಗೆ, ಶ್ರಮಜೀವಿಗಳಿಗೆ ತಕ್ಕ ಪ್ರತಿಫಲ. ಬೌದ್ಧಿಕ ಶ್ರಮಕ್ಕೆ ತಕ್ಕ ಪ್ರತಿಫಲ ನಿರೀಕ್ಷೆ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೨. ವೃಷಭ:
ಯಾವುದಕ್ಕೂ ಗಡಿಬಿಡಿ ಮಾಡದಿರಿ. ವಸ್ತ್ರೋದ್ಯಮಿಗಳಿಗೆ ಸಾಧಾರಣ ಮುನ್ನಡೆ. ಹಿರಿಯರಆರೋಗ್ಯ, ಆವಶ್ಯಕತೆಗಳತ್ತ ಗಮನವಿರಲಿ. ಮಕ್ಕಳ ಯೋಗಕ್ಷೇಮ ಗಮನಿಸಿ. ವಾಹನ ದುರಸ್ತಿಗೆ ಧನವ್ಯಯದ ಸಾಧ್ಯತೆ.
ಗಣೇಶ ಅಷ್ಟಕ, ನರಸಿಂಹ ಸ್ತೋತ್ರ, ಆದಿತ್ಯ ಹೃದಯ ಓದಿ.
೩ಮಿಥುನ:
ಧಾರ್ಮಿಕ ಚಿಂತನೆ, ದೇವತಾರ್ಚನೆಯಲ್ಲಿ ಆಸಕ್ತಿ. ಉದ್ಯೋಗಸ್ಥರಿಗೆ ವೃತ್ತಿ ಪ್ರಾವೀಣ್ಯ ವೃದ್ಧಿ. ಖಾದಿ, ಗ್ರಾಮೋದ್ಯೋಗ ವ್ಯವಹಾರಸ್ಥರಿಗೆ ಲಾಭ. ಅಂಗಸಾಧನೆ ಮಾಡುವವರಿಗೆ ಎಚ್ಚರಿಕೆ. ಗೃಹಿಣಿಯರಿಂದ ಗಳಿಕೆ ಮಾರ್ಗ ಅನ್ವೇಷಣೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೪. ಕರ್ಕಾಟಕ:
ಅನಿರೀಕ್ಷಿತ ಧನಾಗಮ ಸಂಭವ. ಗುರು ಹಿರಿಯರಿಂದ ಸಕಾಲಿಕ ಮಾರ್ಗದರ್ಶನ. ಸಂಗಾತಿಯಿಂದ ಉತ್ತಮ ಸಹಕಾರ. ಹೂವು,ತರಕಾರಿ ಬೆಳೆಗಾರರಿಗೆ ಅಧಿಕ ಲಾಭ. ಗೃಹಿಣಿಯರು , ಮಕ್ಕಳಿಗೆ ಉಲ್ಲಾಸದ ವಾತಾವರಣ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ದೇವೀಸ್ತೋತ್ರ ಓದಿ.
೫.ಸಿಂಹ:
ದೀರ್ಘಕಾಲೀನ ಹೂಡಿಕೆಗಳಲ್ಲಿ ಆಸಕ್ತಿ. ಶುಭ ಕಾರ್ಯಕ್ಕಾಗಿ ಸಡಗರದ ವಾತಾವರಣ. ಅಪರೂಪದ ಬಂಧುಗಳ ಭೇಟಿ. ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ. ಕೃಷಿ ಕ್ಷೇತ್ರ ಪ್ರವೇಶದ ಕುರಿತು ಸಮಾಲೋಚನೆ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.
೬. ಕನ್ಯಾ:
ದೈವಾನುಗ್ರಹಕ್ಕಾಗಿ ವಿಶೇಷ ಪ್ರಯತ್ನ. ಇಷ್ಟ ಮಿತ್ರರೊಡನೆ ಭೇಟಿ. ಉದ್ಯೋಗ ರಂಗದಲ್ಲಿ ಕಾರ್ಯ ನಿರ್ವಿಘ್ನ. ಆಪ್ತ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ನಿರ್ಮಾಣ ಸಾಮಗ್ರಿವಿತರಕರಿಗೆ ಅನುಕೂಲ.ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೭. ತುಲಾ:
ಮನಸ್ಸಿನ ಸಮತೋಲನ ಕಾಯ್ದುಕೊಳ್ಳಿರಿ. ಹತ್ತಿರದ ದೇವತಾ ಸನ್ನಿಧಿ ಸಂದರ್ಶನ ಉದ್ಯೋಗದಲ್ಲಿ ಅಭಿವೃದ್ಧಿ. ವ್ಯವಹಾರ ಕ್ಷೇತ್ರದಲ್ಲಿ ತೃಪ್ತಿಕರ ಮುನ್ನಡೆ. ಹಿತಶತ್ರುಗಳ ಕುರಿತು ಎಚ್ಚರಿಕೆಯಲ್ಲಿರಿ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಪಂಜರ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೮.ವೃಶ್ಚಿಕ:
ಎಚ್ಚರಿಕೆಯಿಂದ ಮುನ್ನಡೆಯಿರಿ. ವ್ಯವಹಾರ ವಿಸ್ತರಣೆಯಲ್ಲಿ ಎಚ್ಚರದಿಂದ ಸಾಗಿರಿ. ಉದ್ಯೋಗ ಕ್ಷೇತ್ರದ ಕಿರಿಕಿರಿ ಪ್ರತಿಫಲ ಪ್ರಾಪ್ತಿಗೆ ಅಡ್ಡಿಯಾಗದು. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ.ಗಣಪತಿ ಅಥರ್ವಶೀರ್ಷ, ರಾಮ ಭುಜಂಗಪ್ರಯಾತ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೯.ಧನು:
ಸಂಗಾತಿಯಿಂದ ಸಹಕಾರ, ಜೀವನ ಸುಗಮ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಹೊಂದಾಣಿಕೆ ಅವಶ್ಯ. ವಸ್ತ್ರ, ಆಭರಣ, ಶೋಕಿ ಸಾಧನಗಳಿಗೆ ಅಧಿಕ ಬೇಡಿಕೆ. ವೈದ್ಯ ವೃತ್ತಿಯವರಿಗೆ ಸವಾಲಿನಲ್ಲಿ ವಿಜಯ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ. ಸಂಕಷ್ಟನಾಶನ ಗಣೇಶ ಸ್ತೋತ್ರ, ಗಜೇಂದ್ರಮೋಕ್ಷ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
೧೦.ಮಕರ:
ಅಪೇಕ್ಷಿತ ಕಾರ್ಯಗಳೆಲ್ಲವೂ ಸುಗಮ. ಆಗಾಗ ಎದುರಾಗುವ ವಿಘ್ನಗಳು ದೂರ. ಉದ್ಯೋಗ ಕ್ಷೇತ್ರದ ಕಿರಿಕಿರಿಗಳು ತೊಲಗಿ ಮನಸ್ಸಿಗೆ ಶಾಂತಿ. ಆರ್ಥಿಕ ವ್ಯವಹಾರ ನಿರ್ವಾಹಕರಿಗೆ ಹೊಸ ಜವಾಬ್ದಾರಿಗಳು. ಮನೆಯಲ್ಲಿ ಶಾಂತಿ, ನೆಮ್ಮದಿಯ ವಾತಾವರಣ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಸತ್ಕಾರ್ಯಗಳಿಗೆ ಸಕ್ರಿಯವಾಗಿ ನೆರವಾಗುವ ಅವಕಾಶ. ಸಾಮಾಜಿಕ ಜವಾಬ್ದಾರಿಗಳ ನಿರ್ವಹಣೆ ಸುಲಭವಾಗಲಿದೆ. ಹತ್ತಿರದ ಬಂಧುವರ್ಗದಲ್ಲಿ ಶುಭಕಾರ್ಯ. ಪ್ರಕೃತಿ ಸೌಂದರ್ಯದ ತಾಣವೊಂದಕ್ಕೆ ಭೇಟಿ. ಸಂಸಾರದಲ್ಲಿ ಪ್ರೀತಿ,ಸ್ವಂತ ಆರೋಗ್ಯದ ಕುರಿತು ಎಚ್ಚರ. ಗಣಪತಿ ಅಥರ್ವಶೀರ್ಷ, ದಾರಿದ್ರ್ಯದಹನ ಶಿವಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ಗುರು ದೇವತಾನುಗ್ರಹದಿಂದ ಕಾರ್ಯಗಳು ನಿರ್ವಿಘ್ನ. ಹೊಸ ವ್ಯವಹಾರ ಪ್ರಸ್ತಾವದ ವಿಷಯದಲ್ಲಿ ಎಚ್ಚರಿಕೆಯಿರಲಿ. ವಾಹನಾದಿ ವ್ಯವಹಾರಸ್ಥರಿಗೆ ಸಂಧಿಕಾಲ. ಮುದ್ರಣ ವ್ಯವಹಾರಸ್ಥರಿಗೆ ಶುಭ.ಮನೆಯಲ್ಲಿ ನಿಶ್ಚಿಂತೆಯ ವಾತಾವರಣ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.