ದಿನ ಭವಿಷ್ಯ
01-09-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ1
೧.ಮೇಷ:
ಹೊಸ ಮಾಸ, ಹೊಸ ಸಪ್ತಾಹದ ಮೊದಲ ದಿನವಾದ ಇಂದು ನಿಮ್ಮ ಇಚ್ಛೆಗಳು ಬಹುಪಾಲು ಫಲಿಸುತ್ತವೆ. ಕೆಲಸ, ಕಾರ್ಯಗಳನ್ನು ಸಂಭ್ರಮದೊಡನೆ ಅನುಭವಿಸಿ. ಉದ್ಯಮ, ವ್ಯವಹಾರ ಎರಡು ಕ್ಷೇತ್ರಗಳಲ್ಲೂ ಉತ್ತಮ ಲಾಭ. ಲೇವಾದೇವಿ ವ್ಯವಹಾರದಲ್ಲಿ ಇಂದಿನ ಮಟ್ಟಿಗೆ ಅನುಕೂಲ. ಹಳೆಯ ಗೆಳೆಯರ ಭೇಟಿ. ಅಧ್ಯಾತ್ಮದ ಕಡೆಗೆ ಒಲವು. ಮನೆಯವರ ಆರೋಗ್ಯ ಉತ್ತಮ. ಗಣೇಶ ಕವಚ, ಆದಿತ್ಯ ಹೃದಯ, ಶನಿಮಹಾತ್ಮೆ ಓದಿ.
೨.ವೃಷಭ:
ಧರ್ಮಸಮ್ಮತ ಅಪೇಕ್ಷೆಗಳು ಈಡೇರುತ್ತವೆ. ಲಕ್ಷ್ಮೀಕಟಾಕ್ಷಕ್ಕೆ ಗುರಿಯಾಗುವಿರಿ. ಸರಕಾರಿ ಅಧಿಕಾರಿಗಳಿಗೆ ಇಷ್ಟಾರ್ಥ ಸಿದ್ಧಿಯ ಸೂಚನೆ. ಉದ್ಯಮದ ಉತ್ಪನ್ನಗಳ ಗ್ರಾಹಕರ ಸಂಖ್ಯೆ ಹೆಚ್ಚಳ. ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ. ಅವಿವಾಹಿತ ಹುಡುಗರಿಗೆ ವಿವಾಹ ನಿಶ್ಚಯ. ಕೃಷ್ಯುತ್ಪನ್ನಗಳ ಬೆಲೆ ಏರಿಕೆಯಿಂದಲಾಭ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಸುಬ್ರಹ್ಮಣ್ಯ ಸ್ತೋತ್ರ ಓದಿ.
೩. ಮಿಥುನ:
ಹಲವು ಬಗೆಯ ಸಂದರ್ಭಗಳಲ್ಲಿ ವಿಜಯ. ಹೊಸ ವಿಭಾಗದಲ್ಲಿ ಕಾರ್ಯಕ್ಕೆಸಿದ್ಧತೆ. ಸ್ವಂತ ಉದ್ಯಮದ ಪರಿಸ್ಥಿತಿ ಸುಧಾರಣೆ. ಕೆಲವು ಬಗೆಯ ಉದ್ಯಮಗಳಿಗೆ ಮುನ್ನಡೆ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ದೇವತಾರ್ಚನೆ, ಧ್ಯಾನ, ಸತ್ಸಂಗದಲ್ಲಿ ಆಸಕ್ತಿ. ಆರೋಗ್ಯ ಉತ್ತಮ. ಗಣೇಶ ಪಂಚರತ್ನ, ಆದಿತ್ಯ ಹೃದಯ, ವಿಷ್ಣು ಸಹಸ್ರನಾಮ ಓದಿ.
೪.ಕರ್ಕಾಟಕ:
ಅಕಾರಣವಾಗಿ ಅಪವಾದಗಳಿಗೆ ಗುರಿಯಾಗದಂತೆ ಎಚ್ಚರವಾಗಿರಿ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಬಾಧೆ. ಉದ್ಯಮಗಳ ಕಾನೂನು ಸಮಸ್ಯೆ ನಿವಾರಣೆ. ನೌಕರರ ಕ್ಷೇಮಾಭಿವೃದ್ಧಿ ಯೋಜನೆ ಜಾರಿ. ಖಾದಿ, ಗ್ರಾಮೋದ್ಯೋಗಗಳಿಗೆ ಉತ್ಕರ್ಷದ ಕಾಲ. ದೇವತಾರಾಧನೆ, ಸದ್ಗ್ರಂಥ ಪಾರಾಯಣ, ಧ್ಯಾನ, ಭಜನೆ, ಸತ್ಸಂಗಗಳ ಕಡೆಗೆ ಒಲವು. ಗಣೇಶ ಅಷ್ಟಕ, ನವಗ್ರಹ ಸ್ತೋತ್ರ, ನರಸಿಂಹ ಸ್ತೋತ್ರ ಓದಿ.
೫ ಸಿಂಹ:
ಕಳೆದ ದಿನಗಳ ಕಾರ್ಯಗಳ ಹಿನ್ನೋಟದಿಂದ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಹೊಸ ವ್ಯವಸ್ಥೆಗಳ ಬಗ್ಗೆ ಚಿಂತನೆ. ಉದ್ಯಮದ ಉತ್ಪನ್ನಗಳಿಗೆ ಅನ್ಯ ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಬೇಡಿಕೆ. ಉದ್ಯಮ ವಲಯಗಳಿಂದ ಪ್ರೋತ್ಸಾಹ ಮಹಿಳೆಯರ ಗೃಹೋದ್ಯಮಗಳು ಯಶಸ್ಸಿನತ್ತ ಮುನ್ನಡೆ. ಗಣೇಶ ಕವಚ, ಶಿವ ಕವಚ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
೬.ಕನ್ಯಾ:
ಉದ್ಯೋಗ,ವ್ಯವಹಾರಗಳಲ್ಲಿ ಹೊಸ ಅನುಭವ. ಸರಕಾರಿ ಉದ್ಯೋಗಿಗಳಿಗೆ ಕೊಂಚ ನೆಮ್ಮದಿ. ವಿದ್ಯುತ್ ಮತ್ತುಇಲೆಕ್ಟ್ರಾನಿಕ್ಸ್ ಉದ್ಯಮಗಳಿಗೆ ಅಧಿಕ ಲಾಭ. ಅವಿವಾಹಿತರಿಗೆ ಶೀಘ್ರ ವಿವಾಹ. ಯೋಗ. ಕಿರು ಉದ್ಯಮಗಳ ಅಭಿವೃದ್ಧಿಗೆ ಹೊಸ ಯೋಜನೆಗಳು. ವೃತ್ತಿ ಪರಿಣತಿ ವೃದ್ಧಿಗೆ ಖಾಸಗಿ ವ್ಯವಸ್ಥೆ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂತೃಪ್ತಿ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ದೇವೀ ಸ್ತೋತ್ರ ಓದಿ.
೭ತುಲಾ:
ಮನುಷ್ಯ ಪ್ರಯತ್ನ, ದೈವಾನುಗ್ರಹ ಮೇಳೈಸುವ ಸಮಯ. ಉದ್ಯೋಗ ರಂಗದಲ್ಲಿ ಕೊಂಚ ಸಮಾಧಾನ. ಹಳೆಯ ಪರಿಚಿತರಿಂದ ವೃತ್ತಿ ಪರಿಣತಿ ವೃದ್ಧಿಗೆ ಸಹಾಯ. ಉದ್ಯೋಗ ಸ್ಥಾನಕ್ಕೆ ಗಣ್ಯ ವ್ಯಕ್ತಿಗಳ ಭೇಟಿ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಆನಂದ. ಹತ್ತಿರದ ದೇವಾಲಯಕ್ಕೆ ಸಂದರ್ಶನ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಪಂಚರತ್ನ, ನವಗ್ರಹ ಸ್ತೋತ್ರ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
೮.ವೃಶ್ಚಿಕ:
ಬದಲಾಗುವ ಬದುಕಿಗೆ ಹೊಂದಿಕೊಂಡ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಕೊಂಚ ಮುನ್ನಡೆಯ ಸಾಧ್ಯತೆ. ಉದ್ಯಮ ಸ್ಥಾನದಲ್ಲಿ ನಿಧಾನಗತಿಯ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಹಳೆಯ ನಿಕಟ ಪರಿಚಿತರ ಅಕಸ್ಮಾತ್ ಭೇಟಿ. ಉದ್ಯೋಗ ಅರಸುವ ಶಿಕ್ಷಿತರಿಗೆ ಶುಭ ಸಮಾಚಾರ. ಹಿರಿಯರ ಆರೋಗ್ಯ ಸುಧಾರಣೆ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೯. ಧನು:
ಬದುಕಿನ ನಿತ್ಯ ಹೋರಾಟದಲ್ಲಿ ವಿಜಯದ ಆನಂದ. ಉದ್ಯೋಗದಲ್ಲಿ ಲಭಿಸಿದ ಹಿರಿಯ ಸ್ಥಾನ ಭದ್ರ. ಸಣ್ಣ ಪ್ರಮಾಣದ ಗೃಹೋದ್ಯಮ ಆರಂಭ. ಸ್ವಂತ ಮನೆ ಹೊಂದುವ ಹಂಬಲ ಈಡೇರುವ
ಭರವಸೆ. ಊರಿನ ದೇವಾಲಯಕ್ಕೆ ಸಂದರ್ಶನ. ಸೋದರ, ಸೋದರಿಯ ಭೇಟಿ. ಸಂಸಾರದಲ್ಲಿ ಪ್ರೇಮ, ವಿಶ್ವಾಸದ ವಾತಾವರಣ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
೧೦. ಮಕರ:
ವೃದ್ಧಿಯಾದ ಉತ್ಸಾಹದೊಂದಿಗೆ ಸಪ್ತಾಹ ಆರಂಭ ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ ನಿರ್ವಹಣೆಗೆ ಸಿದ್ಧತೆ. ಉದ್ಯಮಕ್ಕೆ ಹೊಸ ನೌಕರರ. ಸೇರ್ಪಡೆ. ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಸಪ್ತಾಹದ ಕೊನರಯಲಗಲಿ ನಿರೀಕ್ಷೆ ಮೀರಿದ ಲಾಭ. ದೇವತಾರಾಧನೆಗೆ ಸಮಯ ಹೊಂದಿಸಿಕೊಳ್ಳುವ ಪ್ರಯತ್ನ. ಗಣೇಶ ಕವಚ, ವಿಷ್ಣು ಸಹಸ್ರನಾಮ,ಹನುಮಾನ್ ಚಾಲೀಸಾ ಓದಿ.
೧೧.ಕುಂಭ:
ಸತ್ಕರ್ಮಗಳಿಗೆ ಭಗವಂತನಿಂದ ಫಲ ನೀಡಿಕೆ. ಕೌಟುಂಬಿಕ ವಲಯದಲ್ಲಿ ಗುರು ಸ್ಥಾನ ಲಭ್ಯ. ಉದ್ಯಮದ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳಿಗೆ ಅಧಿಕ ಬೇಡಿಕೆ. ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಉದ್ಯೋಗಾಸಕ್ತರಿಗೆ ಅವಕಾಶ ಹುಡುಕಲು ಮಾರ್ಗದರ್ಶನ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೧೨.ಮೀನ:
ಹೊಸ ಸಪ್ತಾಹದಲ್ಲಿ ಹೊಸ ಹೊಣೆಗಾರಿಕೆಗಳು. ವೃತ್ತಿಬಾಂಧವರ ಸಹಾಯ ಕೋರಿಕೆಗೆ ಸ್ಪಂದನ. ಸಮಾಜ ಬಾಂಧವರಿಂದ ಸ್ಪಂದನ. ಜನಸೇವಾ ಕಾರ್ಯಗಳು ಮುಂದುವರಿಕೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿನೂತನ ವ್ಯವಸ್ಥೆ. ಮನೆಮಂದಿಯೆಲ್ಲರ ಆರೋಗ್ಯ ಉತ್ತಮ. ಮಕ್ಕಳ ಕಲಿಕೆ ಆಸಕ್ತಿ. ಮನೆಯಲ್ಲಿ ಹಬ್ಬದ ವಾತಾವರಣ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.