ದಿನ ಭವಿಷ್ಯ
05-09-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 5.
೧. ಮೇಷ:
ಉದ್ಯೋಗದಲ್ಲಿ ಸ್ಥಿರವಾಗುವ ಯೋಗವಿದೆ. ದೀರ್ಘ ಕಾಲದ ಯೋಜನೆಗಳ ಕುರಿತು ಸಮಾಲೋಚನೆ. ಸಕಾಲದಲ್ಲಿ ಕೈಸೇರಿದ ಅಪೇಕ್ಷಿತ ನೆರವು. ಹೊಸ ವಾಹನ ಖರೀದಿಗೆ ಸಿಧ್ಧತೆ. ಸಂಸಾರದಲ್ಲಿ ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಹರ್ಷದ ವಾತಾವರಣ. ಗಣೇಶ ಪಂಚರತ್ನ, ವಿಶ್ವನಾಥಾಷ್ಟಕ, ಶನಿಮಹಾತ್ಮೆ ಓದಿ.
೨.ವೃಷಭ:
ಕ್ರಮಬದ್ಧ ಯೋಜನೆಗಳ ಫಲವು ಕೈಗೆ ಬರುವ ಸಮಯ.ಹಣಕಾಸು ಪರಿಸ್ಥಿತಿ ಗಣನೀಯ ಸುಧಾರಣೆ. ಉದ್ಯೋಗಸ್ಥರಿಗೆ ಪದೋನ್ನತಿ, ವೇತನ ಏರಿಕೆ ಸಂಭವ. ಹಿತಶತ್ರುಗಳ ವಿಷಯದಲ್ಲಿ ಎಚ್ಚರವಿರಲಿ. ಲೇವಾ ದೇವಿ ವ್ಯವಹಾರಸ್ಥರಿಗೆ ಸಣ್ಣ ಲಾಭ. ಗಣಪತಿ ಅಥರ್ವಶೀರ್ಷ, ದೇವೀಕವಚ,ಕವಚ, ಆದಿತ್ಯಹೃದಯ ಓದಿ.
೩ಮಿಥುನ:
ಪ್ರಾಪಂಚಿಕ ಚಿಂತೆಗಳಿಂದ ಮನಸ್ಸನ್ನು ಮುಕ್ತಗೊಳಿಸಿಕೊಳ್ಳುವ ಪ್ರಯತ್ನ. ಉದ್ಯೋಗಸ್ಥರಿಗೆ ಹೆಚ್ಚು ಕಾರ್ಯಾವಕಾಶ. ನಿರ್ಮಾಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಆಪ್ತರಿಂದ ಸಕಾಲದಲ್ಲಿ ನೆರವು ಲಭ್ಯ. ಸಂಸಾರ ಸುಖ ತೃಪ್ತಿಕರ, ಗೃಹಿಣಿಯರಿಗೆ ನೆಮ್ಮದಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೪. ಕರ್ಕಾಟಕ:
ಕ್ಷಮಾಗುಣದಿಂದ ಮನಸ್ಸಿಗೆ ಸಮಾಧಾನ. ವಿಘ್ನೇಶ್ವರನ ಉಪಾಸನೆಯಿಂದ ಸಮಸ್ಯೆಗಳು ದೂರ. ಉದ್ಯೋಗ ಕ್ಷೇತ್ರದಲ್ಲಿ ನೆಮ್ಮದಿ. ವಸ್ತ್ರೋದ್ಯಮಿಗಳಿಗೆ, ಸಿದ್ಧ ಉಡುಪು ಮಾರಾಟಗಾರರಿಗೆ ಅಧಿಕ ಲಾಭ. ಗೃಹಿಣಿಯರ ಆರ್ಥಿಕ ಸ್ವಾವಲಂಬನೆ ಪ್ರಯತ್ನಕ್ಕೆ ಯಶಸ್ಸು. ಗಣೇಶ ಅಷ್ಟಕ, ಶಿವಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೫.ಸಿಂಹ:
ಉದ್ಯೋಗ, ವ್ಯವಹಾರ ಎರಡು ಕ್ಷೇತ್ರಗಳಲ್ಲೂ ಹೊಸ ಜವಾಬ್ದಾರಿಗಳು. ಮನೆಯಲ್ಲಿ ಸಮಾಧಾನದ ವಾತಾವರಣ. ಅಪರೂಪದ ಅತಿಥಿಗಳ ಆಗಮನ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕೂಡಿ ಬರುವ ಸಾಧ್ಯತೆ. ಪಶ್ಚಿಮ ದಿಕ್ಕಿನಲ್ಲಿ ಸಣ್ಣ ಪ್ರಯಾಣ. ಸಂಕಷ್ಡನಾಶನ ಸ್ತೋತ್ರ, ಸುಬ್ರಹ್ಮಣ್ಯ ಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೬. ಕನ್ಯಾ:
ಮನೆಮಂದಿಯೆಲ್ಲರ ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ನೆಮ್ಮದಿ. ಆಭರಣ ತಯಾರಿ ವೃತ್ತಿಯವರಿಗೆ ವಿಶೇಷ ಅವಕಾಶಗಳು. ಲೆಕ್ಕ ಪರಿಶೋಧಕರು, ನ್ಯಾಯವಾದಿಗಳು, ಇತ್ಯಾದಿ ವೃತ್ತಿಪರರಿಗೆ ಕಿರಿಕಿರಿ. ಹಿರಿಯರ, ಗೃಹಿಣಿಯರ ಹಣಕಾಸು ಪರಿಸ್ಥಿತಿ ಸುಧಾರಣೆ. ಗಣೇಶ ಸ್ತೋತ್ರ ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೭. ತುಲಾ:
ನೆಂಟರಿಷ್ಟರ ಭೇಟಿಯಿಂದ ಮನಸ್ಸು ನಿರಾಳ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ. ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆಯಿಂದ ಜನಗೌರವ ಪ್ರಾಪ್ತಿ. ಪಶುಪಾಲನೆಯಲ್ಲಿ ಆಸಕ್ತಿಯುಳ್ಳವರಿಗೆ ಶುಭಫಲ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ಶ್ರಮ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
೮.ವೃಶ್ಚಿಕ:
ಅನ್ಯರ ಸಾಧನೆಯನ್ನು ನೋಡಿ ಕರುಬದಿರಿ. ಮನೆಮಂದಿಯಿಂದ ಉತ್ತಮ ಸಹಕಾರ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸೂಚನೆ. ವಧೂ ವರಾನ್ವೇಷಿಗಳಿಗೆ ಯೋಗ್ಯ ಜೋಡಿ ಲಭಿಸುವ ಸಾಧ್ಯತೆ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಕ್ಷೇಮ. ಗಣೇಶ ಅಷ್ಟೋತ್ತರ ಶತನಾಮ ಸ್ರೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ರಾಜರಾಜೇಶದವರೀ ಅಷ್ಟಕ ಓದಿ.
೯.ಧನು:
ಶ್ರೀಗುರುದೇವತಾನುಗ್ರಹದಿಂದ ಕಾರ್ಯಸಿದ್ಧಿ. ಬಂಧುಮಿತ್ರ ವರ್ಗದವರಿಂದ ಉತ್ತಮ ಸಹಕಾರ. ಉದ್ಯೋಗದಲ್ಲಿ ಪ್ರಗತಿ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳು ನಿಮ್ಮದಾಗಲಿವೆ. ಹೂವು, ಹಣ್ಣು ವ್ಯಾಪಾರಿಗಳಿಗೆ ಮಧ್ಯಮ ಲಾಭ. ಗಣೇಶ ಕವಚ, ಆದಿತ್ಯ ಹೃದಯ, ದುರ್ಗಾ ಸ್ತೋತ್ರ ಓದಿ.
೧೦.ಮಕರ:
ಅತಿಯಾದ ಚಿಂತೆಯಿಂದ ಆರೋಗ್ಯಕ್ಕೆ ಹಾನಿ. ಮನೆಮಂದಿಯೆಲ್ಲರಿಂದ ಉತ್ತಮ ಸಹಕಾರ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಗೆ ಮೆಚ್ಚುಗೆ. ಕಾರ್ಯನಿಮಿತ್ತ ಪಕ್ಕದ ಪ್ರದೇಶಕ್ಕೆ ಭೇಟಿ ಸಂಭವ. ಹಿರಿಯ ಬಂಧುಗಳಿಂದ ಸಕಾಲಿಕ ಸಹಾಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ನಿರಂತರ ಚಟುವಟಿಕೆಗಳ ದಿನ. ದೂರದ ಬಂಧುಗಳ ಆಗಮನ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳ ನಿರ್ವಹಣೆ. ಅಪರಿಚಿತರೊಬ್ಬರ ಭೇಟಿಯಿಂದ ಲಾಭ. ಹೊಸ ವ್ಯವಹಾರ ಕ್ಷೇತ್ರ ಪ್ರವೇಶಕ್ಕೆ ಅವಸರ ಬೇಡ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೧೨. ಮೀನ:
ಉದ್ಯೋಗಸ್ಥರಿಂದ ಹೊಸ ಸವಾಲುಗಳ ಯಶಸ್ವೀ ನಿರ್ವಹಣೆ. ಹೊಸದೊಂದು ಕಾರ್ಯಕ್ಷೇತ್ರಕ್ಕೆ ಪದಾರ್ಪಣೆ. ಹಿರಿಯರ ಆರೋಗ್ಯ ಸುಧಾರಣೆ. ವ್ಯವಹಾರ ಕ್ಷೇತ್ರದಲ್ಲಿ ಸಂಗಾತಿಯಿಂದ ಉತ್ತಮ ಸಹಕಾರ. ಸ್ವಾವಲಂಬನೆಯ ಬದುಕು ನೆಮ್ಮದಿಯತ್ತ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.