ದಿನ ಭವಿಷ್ಯ

07-09-2025

Sep 9, 2025 - 13:21
ದಿನ ಭವಿಷ್ಯ

                  ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 7


೧. ಮೇಷ:
 ನಿರಂತರ ಕಾರ್ಯಪ್ರವೃತ್ತರಾಗಿರುವುದು ನಿಮ್ಮ ವಿಶೇಷ ಗುಣ. ಉದ್ಯೋಗಕ್ಕೆ ವಿರಾಮವಾದರೂ ಇತರ ಚಟುವಟಿಕೆಗಳು. ಉದ್ಯಮದ  ಉತ್ಪನ್ನಗಳಿಗೆ ಅಧಿಕ ಗ್ರಾಹಕರು. ಸಕಾಲದಲ್ಲಿ‌  ಅಪೇಕ್ಷಿತ ನೆರವು ಲಭ್ಯ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

 

೨.ವೃಷಭ:

  ಗ್ರಹಣವೆಂದು ಅಂಜಬೇಕಾಗಿಲ್ಲ. ಒಂದೇ ಉದ್ಯಮದ ಮೇಲೆ ಗಮನ ಹರಿಸಿದರೆ ಜಯ. ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ಲೇವಾದೇವಿ ವ್ಯವಹಾರದಲ್ಲಿ  ಹಿನ್ನಡೆ. ಮನೆಯಲ್ಲಿ ಎಲ್ಲರಿಗೂ ಆರೋಗ್ಯ ವೃದ್ಧಿ, ನೆಮ್ಮದಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.


೩ಮಿಥುನ:

ಗ್ರಹಣದಿಂದ ಕೇಡಾಗಬಹುದೆಂಬ ಸಂಶಯ ಬೇಡ. ಉದ್ಯೋಗ ಸ್ಥಾನಕ್ಕೆ ವಿರಾಮವಾಗಿರುವುದರಿಂದ ನೆಮ್ಮದಿ. ಗೃಹೋದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.  ಹೊಸ ಕ್ಷೇತ್ರಕ್ಕೆ ಕಾಲಿಡುವ ಉತ್ಸಾಹ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೪. ಕರ್ಕಾಟಕ:

ದಿನವಿಡೀ ಲವಲವಿಕೆಯ ಮನಸ್ಥಿತಿ. ಮನೆಮಂದಿಯೊಂದಿಗೆ ಸಂತಸದಿಂದ ಕಾಲಯಾಪನೆ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿಗಳು, ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂಭ್ರಮ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವನಾಮಾವಲ್ಯಷ್ಟಕ, ನವಗ್ರಹ ಸ್ತೋತ್ರ ಓದಿ.


೫.ಸಿಂಹ:

ಹೆಚ್ಚು ಕಡಿಮೆ ಮಿಶ್ರಫಲಗಳನ್ನು ಕಾಣುವಿರಿ. ದಿನವಿಡೀ ಹಲವು ಚಟುವಟಿಕೆಗಳು. ಸರಕಾರಿ ಅಧಿಕಾರಿಗಳಿಗೆ ಕರ್ತವ್ಯದ ಹೊರೆ. ಭೂ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಸೂರ್ಯಾಸ್ತದ ಮೇಲೆ ಪ್ರಯಾಣ ಬೇಡ. ಗಣೇಶ ಕವಚ, ನರಸಿಂಹ ಸ್ತೋತ್ರ, ನವಗ್ರಹ ಸ್ತೋತ್ರ ಓದಿ


೬.ಕನ್ಯಾ:
 
ದೈವ ಚಿಂತನೆ, ಆಧ್ಯಾತ್ಮಿಕ ಚಟುವಟಿಕೆಗಳು. ಇತರ ಕೆಲಸಗಳಿಂದ ವಿರಾಮದ ಸದುಪಯೋಗ. ಸಾರ್ವಜನಿಕ ಸಂಪರ್ಕದಲ್ಲಿ ಅಪಾರ ಯಶಸ್ಸು.  ಆಭರಣ ವ್ಯಾಪಾರಿಗಳಿಗೆ  ನಿರೀಕ್ಷೆಗಿಂತ ಅಧಿಕ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಗಷಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ. 


೭. ತುಲಾ:

 ಪೂರ್ಣ  ದೈವಾನುಗ್ರಹದ ದಿನ.ಸಂಸಾರದ ಆವಶ್ಯಕತೆಗಳ ಕಡೆಗೆ ಗಮನ. ನೌಕರ ವರ್ಗಕ್ಕೆ ತಕ್ಕಮಟ್ಟಿಗೆ ನಿಶ್ಚಿಂತೆ. ಸಣ್ಣ ವ್ಯಾಪಾರಿಗಳಿಗೆ ನಿರೀಕ್ಷೆಗೆ ತಕ್ಕ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಸಾಕಷ್ಟು  ಲಾಭ. ಗಣೇಶ ಕವಚ, ಶಿವ ಕವಚ, ಅನ್ನಪೂರ್ಣಾ ಸ್ತೋತ್ರ ಓದಿ.

೮.ವೃಶ್ಚಿಕ:

 ಪಾಲಿಗೆ ಬಂದಿರುವುದನ್ನು  ಸಂತೋಷದಿಂದ ಸ್ವೀಕರಿಸಿ. ಪ್ರಾಪಂಚಿಕ ಸುಖದಲ್ಲಿ ಕೊರತೆ ಇಲ್ಲ. ರಜಾದಿನದ ಆನಂದಾನುಭವ. ಉದ್ಯಮದ ನೌಕರರ ಪೂರ್ಣ ಸಹಕಾರ. ನ್ಯಾಯಾಲಯದಲ್ಲಿ ಜಯ. ಮನೆಯಲ್ಲಿ ಸಮಾಧಾನದ ವಾತಾವರಣ.
ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೯.ಧನು:

 ದೀರ್ಘಕಾಲ ಕಾಯುವಿಕೆಯಿಂದ ಮಹತ್ತರ ಲಾಭ. ಸಣ್ಣ ಉಳಿತಾಯ ಯೋಜನೆಯಲ್ಲಿ ಲಾಭ. ಉದ್ಯಮ ಕ್ಷೇತ್ರದಲ್ಲಿ ಪೈಪೋಟಿ. ಎಲ್ಲ ರಂಗಗಳಲ್ಲಿ ಸಕಾರಾತ್ಮಕ ಸ್ಪಂದನ. ಕೃಷ್ಯುತ್ಪಾದನೆ‌ ಮಾರಾಟದಲ್ಲಿ ಲಾಭ. ಸಂಸಾರದಲ್ಲಿ ಸಾಮರಸ್ಯ.
ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೧೦.ಮಕರ:

 ವಿರಾಮದ ದಿನ ಅತಿಥಿ ಸತ್ಕಾರ ಯೋಗ. ಹಿರಿಯರ ಆವಶ್ಯಕತೆಗಳನ್ನು ಗಮನಿಸಿ. ದೇವತಾರ್ಚನೆಯಲ್ಲಿ ಆಸಕ್ತಿ. ಸಂಗೀತ ಶ್ರವಣದಿಂದ‌ ಮನಸ್ಸಿಗೆ ನೆಮ್ಮದಿ. ಮಹಿಳೆಯರ ಸ್ವೋದ್ಯೋಗ ಯೋಜನೆ ಮುನ್ನಡೆ.  
ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.

 
೧೧. ಕುಂಭ:

ಸಂತೃಪ್ತ ಮನೋಭಾವದಲ್ಲಿ ದಿನಾರಂಭ ಉದ್ಯಮದಲ್ಲಿ ಪ್ರಚಂಡ ಮುನ್ನಡೆ. ಮುದ್ರಣ ಸಾಮಗ್ರಿ, ಸ್ಟೇಶನರಿ, ವಸ್ತ್ರ, ಆಭರಣ, ಯಂತ್ರೋಪಕರಣಗಳು, ವಿದ್ಯುತ್ ಉಪಕರಣಗಳು, ಇಲೆಕ್ಟ್ರಾನಿಕ್ಸ್ ಸಾಧನಗಳು ಮೊದಲಾದ ಸಾಮಗ್ರಿಗಳಿಗೆ ಅಧಿಕ ಬೇಡಿಕೆ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.


೧೨. ಮೀನ:

 ವ್ಯವಹಾರಗಳಲ್ಲಿ ಸ್ಥಿರವಾದ ಪ್ರಗತಿ. ಉದ್ಯೋಗಕ್ಕೆ ವಿರಾಮವಾಗಿ  ನೆಮ್ಮದಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ. ಸರಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಆನಂದ. ಸೇವಾ‌ಕಾರ್ಯಗಳಲ್ಲಿ ಮಗ್ನತೆ. ಮನೆಯಲ್ಲಿ ಸಂಪೂರ್ಣ ನೆಮ್ಮದಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ  ಓದಿ.