ದಿನ ಭವಿಷ್ಯ

10-10-2025

Sep 10, 2025 - 14:27
ದಿನ ಭವಿಷ್ಯ

                   ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ  1

೧. ಮೇಷ:
  ಸಮಗ್ರ ಸುಧಾರಣೆಯ ಬಗ್ಗೆ ಸಹಚಿಂತನೆ. ಉದ್ಯೋಗ ಸ್ಥಾನದಲ್ಲಿ ಆಹ್ಲಾದದ ಅನುಭವ. ಪೂರ್ವಜರ ಋಣ ತೀರಿಸುವ ಕಾರ್ಯಕ್ರಮ.  ವ್ಯವಹಾರ ಸಂಬಂಧ ತಿರುಗಾಟ. ಹಿರಿಯರು ಮತ್ತು ಗೃಹಿಣಿಯರಿಗೆ ಉಲ್ಲಾಸ. ಗಣೇಶ ಕವಚ, ನರಸಿಂಹ ಸ್ತೋತ್ರ, ಶನಿಮಹಾತ್ಮೆ ಓದಿ.

೨.ವೃಷಭ:

   ಹಿರಿಯರ  ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ. ಸಿವಿಲ್, ಎಂಜಿನಿಯರ್, ಲೆಕ್ಕ ಪರಿಶೋಧಕರು ಮೊದಲಾದ  ವೃತ್ತಿಪರರಿಗೆ  ಕೆಲಸ ಮುಗಿಸುವ ತರಾತುರಿ. ಕುಟುಂಬಸ್ಥರ ಮನೆಯಲ್ಲಿ ಪಿತೃಕಾರ್ಯ. ಗೃಹಿಣಿಯರ ಉದ್ಯಮಗಳಿಗೆ ಆದಾಯ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅಧಿಕ ಲಾಭ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಸೂರ್ಯಮಂಡಲ ಸ್ತೋತ್ರ ಓದಿ.

೩ಮಿಥುನ:
 ಖಾಸಗಿ  ಉದ್ಯೋಗಿಗಳಿಗೆ ಖಾತೆ ಬದಲಾವಣೆ ಸಂಭವ. ಸ್ವತಂತ್ರ  ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ. ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.

೪. ಕರ್ಕಾಟಕ:
  ಶುಭಫಲಗಳೇ ಅಧಿಕ. ಹಿರಿಯರ ಯೋಗಕ್ಷೇಮ ವಿಚಾರಿಸುತ್ತಿರಿ. ಮನೆಯಲ್ಲಿ ಉಳಿದಂತೆ ಆನಂದದ ವಾತಾವರಣ. ಮಕ್ಕಳ ಪರೀಕ್ಷಾ ಸಿದ್ಧತೆಗೆ ಸಹಕಾರ. ಉದ್ಯೋಗಾನ್ವೇಷಿಗಳಿಗೆ ಶುಭಸೂಚನೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣೇಶ ಕವಚ, ಶಿವನಾಮಾವಲ್ಯಷ್ಟಕ, ನವಗ್ರಹ ಸ್ತೋತ್ರ ಓದಿ.. 


೫.ಸಿಂಹ:
 ಇದುವರೆಗಿನ ಶ್ರಮ ಫಲಿಸುವ ದಿನ. ಶೇರು  ವ್ಯವಹಾರದಲ್ಲಿ ಉತ್ತಮ ಲಾಭ. ಅಧಿಕಾರಿಗಳ ಸಕಾಲಿಕ ಸ್ಪಂದನದಿಂದ  ಕಾರ್ಯಗಳು ಶೀಘ್ರವಾಗಿ ಮುಕ್ತಾಯ. ಯಂತ್ರೋಪಕರಣ ವ್ಯಾಪಾರಿಗಳಿಗೆ ಹೆಚ್ವಿನ‌ ಲಾಭ‌. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೬.ಕನ್ಯಾ:

   ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ಪರೋಪಕಾರಕ್ಕೆ ತಕ್ಕ ಪ್ರತಿಫಲ. ಸಂಸಾರ ಸುಖ ತೃಪ್ತಿಕರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಗುರುಸಮಾನರ ದರ್ಶನದ ಅವಕಾಶ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.

೭. ತುಲಾ:

 ಊರಿನ  ಪರಿಸರದಲ್ಲಿ ಲವಲವಿಕೆಯ ವಾತಾವರಣ. ಧಾರ್ಮಿಕ ಕ್ರಿಯೆಗಳನ್ನು ದರ್ಶಿಸುವ ಅವಕಾಶ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ‌ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮದ ದಿನ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಕಾಲಿಕಾ ಸ್ತೋತ್ರ ಓದಿ.

೮.ವೃಶ್ಚಿಕ:

 ಸಾಂತ್ವನ, ಸಮಾಧಾನದ ಮಾತುಗಳಿಂದ  ಸಮಾಧಾನ. ವಸ್ತ, ಅಲಂಕಾರ ಸಾಮಗ್ರಿ ಖರೀದಿ ಸಂಭವ. ಗಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಹಿರಿಯರ ಆರೋಗ್ಯ ಸುಧಾರಣೆ. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ದಿನ. ಗಣೇಶ ಕವಚ, ವಿಷ್ಣು ಸಹಸ್ರನಾಮ ಗುರುಸ್ತೋತ್ರ ಓದಿ.


೯.ಧನು:

  ಉಳಿತಾಯ  ಯೋಜನೆಗಳ‌ ಏಜೆಂಟರಿಗೆ ಆದಾಯ  ವೃದ್ಧಿ. ಪರೋಪಕಾರದಿಂದ  ಜನಪ್ರಿಯತೆ, ಜನಾದರ ವೃದ್ಧಿ. ಪಾರದರ್ಶಕ ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಗೃಹಿಣಿಯರ ಸ್ವೋದ್ಯೋಗ  ಯೋಜನೆಗಳು ಕ್ಷಿಪ್ರಗತಿಯಲ್ಲಿ ಮುನ್ನಡೆ. ಭೂವ್ಯವಹಾರ ಸಂಬಂಭ  ಪ್ರಯಾಣ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೧೦.ಮಕರ:

ಅನಿರೀಕ್ಷಿತ ಮೂಲದಿಂದ ಧನಾಗಮ.ತಾಳ್ಮೆ, ಮೃದುಮಾತಿನಿಂದ ಕಾರ್ಯಸಿದ್ಧಿ. ಮಕ್ಕಳ ಪರೀಕ್ಷಾ ತಯಾರುಗೆ ಮಾರ್ಗದರ್ಶನ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಶಸ್ತ್ರವೈದ್ಯರಿಗೆ ಕೀರ್ತಿ. ಔಷಧ ವ್ಯಾಪಾರಿಗಳಿಗೆ ಉತ್ತಮ ಲಾಭ. ಗಣೇಶ ಕವಚ, ಮಹಾಲಕ್ಷ್ಮಿ ಅಷ್ಟಕ, ಶನಿಸ್ತೋತ್ರ ಓದಿ.

 

೧೧. ಕುಂಭ:

  ಉದ್ಯೋಗದಲ್ಲಿ ಪದೋನ್ನತಿ ಅಥವಾ ವೇತನ ಏರಿಕೆಯ ಸಾಧ್ಯತೆ. ಸಮಾಜ ಸೇವೆಯ ಕಾರಣದಿಂದ ಜನಪ್ರಿಯತೆ ವರ್ಧನೆ. ಸ್ಥಿರಾಸ್ತಿ ಖರೀದಿ ಪ್ರಯತ್ನ ಫಲಪ್ರದ. ಸ್ಟೇಶನರಿ ವ್ಯಾಪಾರಿಗಳಿಗೆ ಲಾಭ. ಮನೆಯಲ್ಲಿ ದೇವತಾ ಕಾರ್ಯ ಆಯೋಜನೆ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.


೧೨. ಮೀನ:

 ಸತ್ಕಾರ್ಯಗಳಲ್ಲಿ ಪಾಲುಗೊಳ್ಳುವ ಅವಕಾಶ. ಕಳೆದುಹೋದ ಸುಸಂದರ್ಭ ಮರಳಿ ಬರುವ ಸಾಧ್ಯತೆ. ಕಾರ್ಯ ಯಶಸ್ಸಿಗೆ ಸಂಬಂಧಪಟ್ಟವರ ಸಹಕಾರ. ಧಾರ್ಮಿಕ ಸಂಸ್ಥೆಯ ಹೊಣೆಗಾರಿಕೆ  ಮರಳಿ ಬರುವ ನಿರೀಕ್ಷೆ. ದ್ರವ ವ್ಯಾಪಾರಿಗಳಿಗೆ ಶುಭಕಾಲ. ಗಣೇಶ ಕವಚ, ವಿಷ್ಷು ಸಹಸ್ರನಾಮ, ದೇವೀ ಸ್ತೋತ್ರ, ಶನಿಮಹಾತ್ಮೆ.ಓದಿ.