ದಿನ ಭವಿಷ್ಯ

13-09-2025

Sep 13, 2025 - 15:24
ದಿನ ಭವಿಷ್ಯ

             ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  4

೧.ಮೇಷ:
 ಉದ್ಯೋಗ ಸ್ಥಾನದಲ್ಲಿ  ಉತ್ಸಾಹ‌ ವರ್ಧನೆ.   ಉತ್ಪನ್ನಗಳ ಪ್ರಚಾರದಲ್ಲಿ  ಉದ್ಯಮಗಳ ಮೇಲಾಟ. ವಿಸ್ತರಣಾ  ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನ. ಹಳೆಯ ಪರಿಚಿತರ ಭೇಟಿ. ವ್ಯವಹಾರ ಸಂಬಂಧ ಗಣ್ಯ ವ್ಕಕ್ತಿಯ ಭೇಟಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿ ಮಹಾತ್ಮೆ ಓದಿ.

೨.ವೃಷಭ:

  ಕೆಲವರು  ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ನಿರೀಕ್ಷೆ. ಖಾಸಗಿ ರಂಗದ ಉತ್ಪಾದನೆ ಹೆಚ್ಚಳ. ದೀರ್ಘಾವಧಿ ಶೇರು ಹೂಡಿಕೆಯಲ್ಲಿ ಲಾಭ‌. ಪಿತೃಕಾರ್ಯದಲ್ಲಿ ಭಾಗಿ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ  ಉಲ್ಲಾಸ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.


೩. ಮಿಥುನ:

  ಹಿತಶತ್ರುಗಳು ಮತ್ತು ವಿಘ್ನಸಂತೋಷಿಗಳಿಂದ ತೊಂದರೆ. ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು.  ಸ್ವಂತ ಉದ್ಯಮದ ಪ್ರಗತಿ ತೃಪ್ತಿಕರ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ. ರಾತ್ರಿ ವಾಹನ ಚಾಲನೆಯಲ್ಲಿ ಎಚ್ಚರ. ಗಣಪತಿ ಅಥರ್ವಶೀರ್ಷ,  ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೪.ಕರ್ಕಾಟಕ:

  ಅನುಭವಸ್ಥರ ಮಾತಿಗೆ ಗೌರವ. ಉದ್ಯಮದ ಉತ್ಪಾದನೆಗಳ ಜನಪ್ರಿಯತೆ ವೃದ್ಧಿ.  ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ಹೆಚ್ಚಳ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ. ದೇವಿಯ ಆಲಯ ದರ್ಶನ ಸಂಭವ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೫_ಸಿಂಹ:

  ಉದ್ಯೋಗಸ್ಥರಿಗೆ ಅಧಿಕ ಸವಾಲುಗಳು. ಗ್ರಾಹಕರ ಪ್ರಚಾರದಿಂದ  ವ್ಯಾಪಾರಕ್ಕೆಪೋಷಣೆ. ಕಟ್ಟಡ ನಿರ್ಮಾಣ ಕಂಟ್ರಾಕ್ಟರರಿಗೆ ಕಾರ್ಮಿಕರ ಸಮಸ್ಯೆ. ಹೊಸ ನಿವೇಶನಕ್ಕಾಗಿ ಮುಂದುವರಿದ ಹುಡುಕಾಟ. ಮನೆಯಲ್ಲಿ ಪಿತೃಕಾರ್ಯದಿಂದ ಧನ್ಯತೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.


೬.ಕನ್ಯಾ:

 ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಸ್ವಂತ ಉದ್ಯಮದಲ್ಲಿ ಗಣನಾರ್ಹ ಪ್ರಗತಿ, ಹೊಸ ವಿಭಾಗದಲ್ಲಿ ಪ್ರಗತಿ. ಉದ್ಯೋಗಾಸಕ್ತರಿಗೆ  ಅವಕಾಶಗಳು ಲಭ್ಯ. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಮನೆಯಲ್ಲಿ ಎಲ್ಲರಿಗೂ  ಉತ್ತಮ ಆರೋಗ್ಯ. ಗಣಪತಿ ಅಥರ್ವಶೀರ್ಷ, ನರಸಿಂಹ ಕವಚ, ಲಕ್ಷ್ಮೀಸ್ತೋತ್ರ ಓದಿ.


೭ತುಲಾ:

 ಸಮಸ್ಯೆಗಳಿಗೆ ಸಮರ್ಪಕ  ಪರಿಹಾರ. ಎಣಿಸದ ಮೂಲದಿಂದ ಧನಪ್ರಾಪ್ತಿ.  ಉದ್ಯಮಿಗಳಿಗೆ ಅನಿರೀಕ್ಷಿತ ಸವಾಲು. ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಖರೀದಿ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.  ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯ ವೃದ್ಧಿ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ


೮.ವೃಶ್ಚಿಕ:

 ಉದ್ಯೋಗ ಸ್ಥಾನದಲ್ಲಿ  ವಿಶ್ವಾಸ ವೃದ್ಧಿ.  ಉದ್ಯಮ  ಭರದಲ್ಲಿ ಮುನ್ನಡೆ.  ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಗಣೇಶ ಕವಚ, ನರಸಿಂಹ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.


೯. ಧನು:

  ಉದ್ಯೋಗ ಸ್ಥಾನದಲ್ಲಿ ಸಜ್ಜನರ ಸದ್ಭಾವನೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ  ಉದ್ಯಮಗಳ ಅಭಿವೃದ್ಧಿ. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ.  ಹೈನುಗಾರಿಕೆ, ಜೇನು ವ್ಯವಸಾಯ ಮುನ್ನಡೆ. ಕುಟುಂಬದೊಳಗೆ ಸಾಮರಸ್ಯ ವೃದ್ಧಿ. ಗಣಪತಿ ಅಥರ್ವಶೀರ್ಷ, ಕಾರ್ತಿಕೇಯ ಸ್ತೋತ್ರ, ನವಗ್ರಹ ಪೀಡಾಪರಿಗಾರ ಸ್ತೋತ್ರ ಓದಿ.


೧೦. ಮಕರ:

  ಉದ್ಯೋಗ ಸ್ಥಾನದಲ್ಲಿ ಸಮಯದೊಂದಿಗೆ ಮೇಲಾಟ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಸಾಮಾನ್ಯಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಗಣೇಶ ಕವಚ, ಸುಬ್ರಹ್ಮಣ್ಯ ಕವಚ, ಶನಿಸ್ತೋತ್ರ ಓದಿ.

೧೧.ಕುಂಭ:

ಹಿರಿಯರ ಮನೆಯಲ್ಲಿ ಪಿತೃ ಕಾರ್ಯದ ಸಂದರ್ಭ. ಸರಕಾರಿ ನೌಕರರಿಗೆ ಅನುಕೂಲ. ಕೆಲವು ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ.  ಪ್ರಾಚೀನ ವಿದ್ಯೆಗಳನ್ನು ಕಲಿಯಲು ಆಸಕ್ತಿ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.
ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಶನಿಮಹಾತ್ಮೆ ಓದಿ.


೧೨.ಮೀನ:

  ಧರ್ಮ ಮಾರ್ಗದಲ್ಲಿ ನಡೆಯಲು ಆಸಕ್ತಿ.  ಉದ್ಯೋಗ ಸ್ಥಾನದಲ್ಲಿ ಅಜಾತಶತ್ರುತ್ವ.  ಸರಕಾರಿ ಇಲಾಖೆ ನೌಕರರಿಂದ ಸಹಕಾರ. ದೇವಾಲಯದ ಅಭಿವೃದ್ಧಿ ಕಾರ್ಯ ಮುಂದುವರಿಕೆ. ಅಗಲಿದ ಹಿರಿಯರ ಋಣ ತೀರಿಕೆಯಲ್ಲಿ ಭಾಗಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.