ದಿನ ಭವಿಷ್ಯ

20-09-2025

Sep 20, 2025 - 15:57
ದಿನ ಭವಿಷ್ಯ


                   ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  2.

೧. ಮೇಷ:
 ವಾರಾಂತ್ಯವಾದುದರಿಂದ ಸೀಮಿತ ವಲಯಗಳಲ್ಲಿ ಕಾರ್ಯ. ಆಪ್ತ ವಲಯಗಳ ಸಂಪರ್ಕ‌. ಹಿರಿಯ ನಾಗರಿಕರಿಗೆ ನೆಮ್ಮದಿ. ಏಳೂವರೆ ಶನಿಯಿಂದ ಸ್ವಲ್ಪ ತೊಂದರೆ. ಸಂಸಾರ ಸಹಿತ ದೇವಾಲಯ ಭೇಟಿ. ಬಂಧುಗಳ ಮನೆಯಲ್ಲಿ ಪಿತೃಕಾರ್ಯ ಆಚರಣೆ. ಗಣೇಶ ಕವಚ, ಆದಿತ್ಯ ಹೃದಯ,  ಶನಿಮಹಾತ್ಮೆ  ಓದಿ.

೨.ವೃಷಭ:

 ಸಮಾಜಮುಖಿ ಕಾರ್ಯಗಳಲ್ಲಿ ಭಾಗಿ.  ಹಿರಿಯರಿಗೆ ಮತ್ತು ಮಕ್ಕಳಿಗೆ ಲವಲವಿಕೆ. ವಿರಾಮ ಇಲ್ಲದ ವ್ಯಾಪಾರಿಗಳು ಮತ್ತು ವೃತ್ತಿಪರರು‌. ಗೃಹಿಣಿಯರ ಸ್ವಾವಲಂಬನೆ ಆದಾಯ ವೃದ್ಧಿ. ಒಟ್ಟಿನಲ್ಲಿ ಶುಭಫಲಗಳ ದಿನ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

೩ಮಿಥುನ:

 ಆಲಸ್ಯವನ್ನು ಗೆದ್ದ ವಿಜಯದ ಭಾವ. ಬಂಧುಗಳ ಮನೆಯಲ್ಲಿ   ಪಿತೃಕಾರ್ಯ. ಅಪರೂಪದ ಬಂಧುಗಳ ಸಮಾಗಮ. ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ.ಎಲ್ಲರ ಆರೋಗ್ಯ ಉತ್ತಮ. ಗಣೇಶ ಪಂಚರತ್ನ, ಶಿವಕವಚ, ನವಗ್ರಹ ಸ್ತೋತ್ರ ಓದಿ.

೪. ಕರ್ಕಾಟಕ:
ಅಯಾಚಿತವಾಗಿ ಬಂದಿರುವ ಅವಕಾಶ. ಹಿರಿಯರ ಯೋಗಕ್ಷೇಮ ವಿಚಾರಣೆ. ಮನೆಯಲ್ಲಿ ಅತಿಥಿ ಸತ್ಕಾರ ಯೋಗ. ಅಮೂಲ್ಯ ಅವಕಾಶದ ಸದುಪಯೋಗ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸೂಚನೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ.  ಧಾರ್ಮಿಕ ಚಿಂತನೆಗೆ ಸಮಯ ಮೀಸಲು. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೫.ಸಿಂಹ:
 ಸಾರ್ವತ್ರಿಕ ವಿಜಯದ ದಿನ  ಹಳೆಯ ಋಣಗಳನ್ನು ತೀರಿಸುವ ಅವಕಾಶ‌.  ಸಕಾಲಿಕ ಪ್ರಯತ್ನದಿಂದ  ಕಾರ್ಯಗಳು ಶೀಘ್ರ ಮುಕ್ತಾಯ. ಪಾಲುದಾರಿಕೆ ವ್ಯವಹಾರ ಮಾತುಕತೆ. ದಾಂಪತ್ಯ ಸುಖ ಉತ್ತಮ. ಅನಾಥಾಶ್ರಮಕ್ಕೆ ಭೇಟಿ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೬.ಕನ್ಯಾ:

 ಸಮಾಜಸೇವಾ ಕಾರ್ಯಗಳಲ್ಲಿ ಭಾಗಿ. ಉದ್ಯೋಗಸ್ಥರಲ್ಲಿ ಕೆಲವರಿಗೆ ವಾರಾಂತ್ಯದ ಒತ್ತಡ. ಭವಿಷ್ಯದ ಭದ್ರತೆಗಾಗಿ‌‌ ದೀರ್ಘಾವಧಿ ಹೂಡಿಕೆ. ಸಂಸಾರದಲ್ಲಿ ಸದ್ಭಾವನೆ, ಸಾಮರಸ್ಯ ವೃದ್ಧಿ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಹಣ್ಣು ನೀಡಿ ಸಾಂತ್ವನ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ,  ಆಂಜನೇಯ  ಸ್ತೋತ್ರ ಓದಿ.

೭. ತುಲಾ:

   ಕುಟುಂಬದ ಹಿರಿಮನೆಯಲ್ಲಿ ಪಿತೃಕಾರ್ಯ. ಜೇನು ವ್ಯವಸಾಯ, ತೋಟಗಾರಿಕೆಯಲ್ಲಿ ಆಸಕ್ತರಿಗೆ ಸಂತೋಷದ ಸಂದರ್ಭ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ‌ ಲಾಭ. ಹಿತಶತ್ರುಗಳ ಸಂಚು ವಿಫಲ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮದ ದಿನ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೮.ವೃಶ್ಚಿಕ:

  ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಮಕ್ಕಳ  ಪ್ರತಿಭಾ ವಿಕಸನ ಕಾರ್ಯದಲ್ಲಿ ಭಾಗಿ.  ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ವಾತಾವರಣ. ಕೆಲವರ ಮನೆಗಳಲ್ಲಿ ಪಿತೃಕಾರ್ಯ. ಆಸ್ಪತ್ರೆಗೆ ಭೇಟಿ, ರೋಗಿಗಳಿಗೆ ಹಣ್ಣು ನೀಡಿಕೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.


೯.ಧನು:

 ಸರಕಾರಿ ಉದ್ಯೋಗಸ್ಥರಿಗೆ ಬಿಡುವಿನ ಆನಂದ.  ಉಳಿತಾಯ  ಯೋಜನೆಗಳ‌ ಏಜೆಂಟರಿಗೆ ಆದಾಯ  ವೃದ್ಧಿ ಯೋಗ. ಗೃಹಿಣಿಯರ ಸ್ವೋದ್ಯೋಗ  ಯೋಜನೆಗಳ ದಾಪುಗಾಲು. ಹಿತಶತ್ರುಗಳ ಕುರಿತು ಎಚ್ಚರ‌. ಅನ್ನದಾನ ಮಾಡುವ ಅವಕಾಶ ಪ್ರಾಪ್ತಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಮಹಿಷಮರ್ದಿನಿ ಸ್ತೋತ್ರ ಓದಿ.


೧೦.ಮಕರ:

ವೃತ್ತಿಪರರಿಗೆ ಇನ್ನಷ್ಟು ಕೆಲಸಗಳ ಹೊರೆ. ಹೂಡಿಕೆಯಲ್ಲಿ ಎಳೆಯರಿಗೆ ಮಾರ್ಗದರ್ಶನ. ಸಂಗೀತ ಶ್ರವಣ, ಸತ್ಸಂಗದಿಂದ ಮನಸ್ಸಿಗೆ ನೆಮ್ಮದಿ. ವಿಶೇಷ ವ್ಯಕ್ತಿಯೊಬ್ಬರ ಪರಿಚಯದ ಸಾಧ್ಯತೆ. ಸದ್ಗ್ರಂಥ ಅಧ್ಯಯನಕ್ಕೆ ಅವಕಾಶ. ಮನೆಯಲ್ಲಿ ಹರ್ಷದ ವಾತಾವರಣ. ಗಣೇಶ ಪಂಚರತ್ನ, ಹನುಮಾನ್ ಚಾಲೀಸಾ, ನವಗ್ರಹ ಸ್ತೋತ್ರ ಓದಿ.

 

೧೧. ಕುಂಭ:

   ಬಂಧು‌ ಬಳಗದವರಿಂದ ವಿಶೇಷ ಪ್ರೇಮ ಪ್ರಕಟ. ನೂತನ ಆಸ್ತಿಯಲ್ಲಿ ಅಭಿವೃದ್ಧಿ ಕಾರ್ಯ. ವೃದ್ಧಾಶ್ರಮ,  ಅನಾಥಾಲಯಗಳಿಗೆ  ಭೇಟಿ.  ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವಿಕೆ. ಅತಿಥಿ ಸತ್ಕಾರ ಯೋಗ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.


೧೨. ಮೀನ:

 ಸತ್ಕಾರ್ಯಗಳ ನೇತೃತ್ವದಿಂದ ಆನಂದ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ. ಮನೆಮಂದಿಯಿಂದ  ಒಳ್ಳೆಯ ಸಹಕಾರ, ಸೌಜನ್ಯದ ವಾತಾವರಣ. ಎಲ್ಲರ ಆರೋಗ್ಯ ಉತ್ತಮ. ವ್ಯಾಪಾರ ವೃದ್ಧಿಗೆ ಪರಿಣತರ ಸಲಹೆ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆಓದಿ.