ದಿನ ಭವಿಷ್ಯ

22-09-2025

Sep 22, 2025 - 16:30
ದಿನ ಭವಿಷ್ಯ

               ಜ್ಯೋತಿರ್ಮಯ.
ಅದೃಷ್ಟ ಸಂಖ್ಯೆ  4

೧. ಮೇಷ: 
 ನವರಾತ್ರಿಯ ಮಂಗಲ ಪರ್ವ ಆರಂಭ.ಉದ್ಯೋಗ ಸ್ಥಾನದಲ್ಲಿ   ಅಪಾರ ನೆಮ್ಮದಿ. ಉದ್ಯಮದ  ಉತ್ಪನ್ನಗಳಿಗೆ ಅಧಿಕ‌ ಬೇಡಿಕೆ. ಹಣದ ಬೆಳೆಗಳ ಫಸಲು ಉತ್ತಮ. ವಸ್ತ್ರ, ಆಭರಣ ಖರೀದಿಗೆ ಧನವ್ಯಯ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ. ಗಣಪತಿ ಅಥರ್ವಶೀರ್ಷ, ಶಿವಸಹಸ್ರನಾಮ, ಶನಿಮಹಾತ್ಮೆ  ಓದಿ.


೨. ವೃಷಭ:
 ಹೊಸಬರ ಪರಿಚಯದಿಂದ ವಿಶೇಷ ಲಾಭ. ಉದ್ಯೋಗ ಸ್ಥಾನದಲ್ಲಿ ಹೊಸ ವಿಭಾಗದ ಜವಾಬ್ದಾರಿ. ಅಸಹಾಯಕ ವೃದ್ಧರಿಗೆ ನೆರವು. ದೇವಿಯ ಆಲಯಕ್ಕೆ ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತೋಷದ ಅನುಭವ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.


೩.ಮಿಥುನ:
 ನಿಮ್ಮ ಪ್ರತಿಭೆ ಅನಾವರಣಗೊಳ್ಳುವ ಸಂದರ್ಭ. ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ಮೆಚ್ಚುಗೆ. ಮನೋಬಲದಿಂದ ಕಾರ್ಯಸಿದ್ದಿ.ವಾಹನ ದುರಸ್ತಿಗೆ ಹಣ ಖರ್ಚು. ವಸ್ತ್ರ, ಉಡುಪು ವ್ಯಾಪಾರಿಗಳಿಗೆ ಲಾಭ. ಹಿರಿಯರಿಗೆ, ಗೃಹಿಣಿಯರಿಗೆ ನೆಮ್ಮದಿ, ಮಕ್ಕಳಿಗೆ ಸಂತೋಷ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ದೇವೀಸ್ತೋತ್ರ ಓದಿ.

೪.ಕರ್ಕಾಟಕ:
  ಪರಿಣಾಮ ಏನಿದ್ದರೂ ಒಳ್ಳೆಯದೇ. ಉದ್ಯೋಗದಲ್ಲಿ ಆನಂದ. ದೂರದಲ್ಲಿರುವ ಹಿತೈಷಿಗಳಿಂದ  ಸಹಾಯ. ವ್ಯವಹಾರ ಸಂಬಂಧ  ಸಂವಾದ  ಫಲಪ್ರದ. ಆಭರಣ, ಯಂತ್ರೋಪಕರಣ ವ್ಯಾಪಾರಿಗಳಿಗೆ ಶುಭಯೋಗ. ದಿನವಿಡೀ ಶುಭಫಲಗಳ ಅನುಭವ. ಗಣೇಶ ಪಂಚರತ್ನ, ನರಸಿಂಹ ಕವಚ, ದುರ್ಗಾಸ್ತೋತ್ರ ಓದಿ.


೫.ಸಿಂಹ:
 ಸಂದರ್ಭಕ್ಕೆ ಸರಿಯಾಗಿ ಸ್ಪಂದಿಸಿ‌ದರೆ ಲಾಭ. ಉದ್ಯೋಗದಲ್ಲಿ ನಿರೀಕ್ಷೆ ಮೀರಿ   ಪ್ರಗತಿ.   ಕಟ್ಟಡ ನಿರ್ಮಾಪಕರಿಗೆ ಕೆಲಸ ಮುಗಿಸುವ ಒತ್ತಡ. ಪತ್ರಕರ್ತರಿಗೆ, ಮಾಧ್ಯಮದವರಿಗೆ ಸತ್ತ್ವಪರೀಕ್ಷೆ. ಹಿರಿಯರ‌ ಆರೋಗ್ಯ ಸುಧಾರಣೆ.
ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ ನವಗ್ರಹ ಸ್ತೋತ್ರ ಓದಿ.


೬. ಕನ್ಯಾ:
 ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ‌. ಹೊಲಿಗೆ, ಮರದ ಕೆಲಸ ಪರಿಣತರಿಗೆ  ಉದ್ಯೋಗಾವಕಾಶ.  ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ. ಗೃಹಿಣಿಯರ ಸ್ವೋದ್ಯೋಗ ಯೋಜನೆ ಪ್ರಗತಿ. ಹಿರಿಯರ,ಮಕ್ಕಳ ಆರೋಗ್ಯ ಸುಧಾರಣೆ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೭. ತುಲಾ:
 ತಮೋಗುಣದ ಎದುರು ಸೋಲಬೇಡಿ.  ಉದ್ಯೋಗ ಸ್ಥಾನದಲ್ಲಿ ಜಾಡ್ಯದ ವಾತಾವರಣ. ಉತ್ಪನ್ನಗಳ ಗುಣಮಟ್ಟ ಸುಧಾರಣೆ‌.  ಮಕ್ಕಳ ವಿದ್ಯಾರ್ಜನೆಗೆ ಸಹಾಯ‌. ಕೃಷಿ, ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಆಸಕ್ತಿ. ವ್ಯವಹಾರದ ಸಂಬಂಧ ತುರ್ತು ಪ್ರಯಾಣ ಸಂಭವ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
 

೮.ವೃಶ್ಚಿಕ:

  ಸಹನೆ, ಸಮಾಧಾನದಿಂದ ಯಶಸ್ಸು. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ  ಗಣನಾರ್ಹ ಸುಧಾರಣೆ‌. ಜನಸೇವಾ ಕಾರ್ಯಗಳಲ್ಲಿ ಆಸಕ್ತಿ. ಹಿರಿಯರ ಆರೋಗ್ಯ ಪ್ರಕೃತಿ ಚಿಕಿತ್ಸೆಯಿಂದ  ಸುಧಾರಣೆ. ನೆರೆಯವರೊಡನೆ ಸದ್ಭಾವನಾ ಸಂಬಂಧ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

೯.ಧನು:
 ಭಗವಂತನ ಸಂಕಲ್ಪಕ್ಕೆ ಮೀರಿದ್ದು ಯಾವುದೂ ಇಲ್ಲ. ಹಿತೈಷಿಗಳ  ಸಹಾಯದಿಂದ ಸಮಸ್ಯೆ ಪರಿಹಾರ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ  ವೃದ್ಧಿ. ‌ಕುಶಲಕರ್ಮಿಗಳಿಗೆ   ಶೀಘ್ರ ಉದ್ಯೋಗ ಪ್ರಾಪ್ತಿ. ಹೈನುಗಾರಿಕೆ, ತೋಟಗಾರಿಕೆ ಅಭಿವೃದ್ಧಿಗೆ ಪ್ರಯತ್ನ. ಹಿರಿಯರು,ಗೃಹಿಣಿಯರು, ಮಕ್ಕಳಿಗೆ ಸಂತಸ..ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಮಹಿಷಮರ್ದಿನಿ ಸ್ತೋತ್ರ ಓದಿ.

೧೦.ಮಕರ:

 
  ಒಳ್ಳೆಯ ಕಾಲದ ನಿರೀಕ್ಷೆಯಲ್ಲಿ ಆದಷ್ಟು ಶಾಂತವಾಗಿರಿ. ಸಣ್ಣ ಉದ್ಯಮಿಗಳ ಆದಾಯ ಹೆಚ್ಚಳ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಪ್ರಮಾಣದ ಲಾಭ. ಮಹಿಳೆಯರ ಗೃಹೋದ್ಯಮ ಯೋಜನೆಗೆ ಪ್ರಚಂಡ  ಯಶಸ್ಸು. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಗಣೇಶ ಕವಚ, ಕನಕಧಾರಾ ಸ್ತೋತ್ರ, ಶನಿಸ್ತೋತ್ರ ಓದಿ.


೧೧. ಕುಂಭ:

ಅರ್ಹರಿಗೆ   ಸಹಾಯ ಮಾಡಿದ ಸಾರ್ಥಕ ಭಾವ. ಕಿರಿಯರಿಗೆ ಮಾರ್ಗದರ್ಶನ, ಹಿರಿಯರಿಗೆ ಸಂದರ್ಭೋಚಿತ  ಸಲಹೆ. ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಗೌರವ ಮತ್ತು ಜನಪ್ರಿಯತೆ ವೃದ್ಧಿ.  ವೃತ್ತಿಪರರಿಗೆ ಸರ್ವತ್ರ  ಶ್ಲಾಘನೆ. ಹೊಸಬರೊಂದಿಗೆ ಮೈತ್ರಿ ಸಂಪಾದನೆ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

೧೨. ಮೀನ: ‌
 
ಉದ್ಯೋಗದಲ್ಲಿ   ಸಾಧನೆಯ ತೃಪ್ತಿ. ವ್ಯವಹಾರದಲ್ಲಿ ಅಪರಿಮಿತ  ಮುನ್ನಡೆ..ಹಣಕಾಸು ವ್ಯವಹಾರ ಸುಧಾರಣೆ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ಬಾಕಿ ಕೆಲಸಗಳನ್ನು ಶೀಘ್ರ ಮುಗಿಸುವ ಪ್ರಯತ್ನ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ,  ಓದಿ.