ದಿನ ಭವಿಷ್ಯ
25-09-2025

ಅದೃಷ್ಟ ಸಂಖ್ಯೆ 7
೧.ಮೇಷ:
ದೇವಿಯ ಅನುಗ್ರಹದಿಂದ ದುರಿತ ನಿವಾರಣೆ. ಹಿರಿಯರಿಗೆ ನೆಮ್ಮದಿಯ ವಾತಾವರಣ. ಉದ್ಯೋಗಸ್ಥರಿಗೆ ಪದೋನ್ನತಿಯ ಸೂಚನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ವಿಶೇಷ ಲಾಭ. ಬಂಧುಗಳ ಮನೆಯ ಪೂಜೆಯಲ್ಲಿ ಭಾಗಿ. ಗಣೇಶ ಪಂಚರತ್ನ, ದೇವೀಸ್ತೋತ್ರ, ಶನಿ ಮಹಾತ್ಮೆ ಓದಿ.
೨. ವೃಷಭ:
ಒಳ್ಳೆಯ ಕೆಲಸಗಳನ್ನು ಮಾಡಲು ಇನ್ನಷ್ಟು ಅವಕಾಶ. ಉದ್ಯೋಗ ರಂಗದಲ್ಲಿ ಹೊಸ ಹೊಣೆಗಾರಿಕೆಗಳು. ವ್ಯವಹಾರ ಕ್ಷೇತ್ರದಲ್ಲಿ ತೀವ್ರ ಪೈಪೋಟಿ. ನಿರೀಕ್ಷಿತ ಲಾಭ ಕೈಸೇರಿ ಹರ್ಷ. ಕೃಷಿ ಸಾಧನಗಳು, ರಸಗೊಬ್ಬರ ಮೊದಲಾದ ವಸ್ತುಗಳ ವ್ಯಾಪಾರಿಗಳಿಗೆ ಶುಭ ಸೂಚನೆ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೩.ಮಿಥುನ:
ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ. ಕ್ಷಣಿಕ ಅನಾರೋಗ್ಯಕ್ಕೆ ಹೆದರುವುದು ಬೇಡ. ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ. ಭೌತಿಕ, ಆಧ್ಯಾತ್ಮಿಕ ಉನ್ನತಿಗೆ ಸಾಧನೆ. ಗೃಹಿಣಿಯರು, ಹಿರಿಯರು, ಮಕ್ಕಳಿಗೆ ಸಂಭ್ರಮದ ವಾತಾವರಣ. ಗಣಪತಿ ಅಥರ್ವಶೀರ್ಷ, ವೆಂಕಟೇಶ್ವರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೪.ಕರ್ಕಾಟಕ:
ವ್ಯವಹಾರದಲ್ಲಿ ತ್ವರಿತವಾಗಿ ಕಾರ್ಯ ಸಾಧಿಸುವ ಹಂಬಲ. ನಿರೀಕ್ಷಿತ ನೆರವು ವಿಳಂಬವಾದರೂ ಮುನ್ನಡೆ ಅಬಾಧಿತ. ಗೃಹಿಣಿಯರ ಆರ್ಥಿಕ ಸ್ವಾವಲಂಬನೆ ಪ್ರಯತ್ನದಲ್ಲಿ ಮುನ್ನಡೆ. ಹಿರಿಯರಿಗೆ ಸ್ಥಾನ ಗೌರವದಿಂದ ಸಮಾಧಾನ. ಸಂಸಾರಸಹಿತ ದೇವಾಲಯಕ್ಕೆ ಸಂದರ್ಶನ. ಗಣೇಶ ದ್ವಾದಶನಾಮ ಸ್ತೋತ್ರ, ವಿಶ್ವನಾಥಾಷ್ಟಕ, ಆದಿತ್ಯ ಹೃದಯ ಓದಿ.
೫.ಸಿಂಹ:
ಕಾರ್ಯಸಾಧನೆಯಲ್ಲಿ ಅನೂಹ್ಯ ಮುನ್ನಡೆ. ಕಾರ್ಯಕ್ಷೇತ್ರದ ವಿಸ್ತರಣೆಗೆ ಒತ್ತಾಯ. ಗುರುಸಮಾನರಿಂದ ವಿಶೇಷ ಸಂದೇಶ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರಿಗೆ ಹೆಚ್ಚು ಜೀವನೋತ್ಸಾಹ. ಗಣೇಶ ಕವಚ, ಶಿವ ಕವಚ, ಲಕ್ಷ್ಮೀಸ್ತೋತ್ರ ಓದಿ.
೬. ಕನ್ಯಾ:
ಕುಲದೇವರ ದರ್ಶನದಿಂದ ದೀರ್ಘಕಾಲೀನ ಸಮಸ್ಯೆ ನಿವಾರಣೆ. ಸಣ್ಣ ಪ್ರವಾಸ ಸಂಭವ. ನೈಸರ್ಗಿಕ ಕೃಷಿಯಲ್ಲಿ ಆಸಕ್ತರಿಗೆ ಸಂತೋಷದ ಸುದ್ದಿ. ಹೊಮಿಯೋಪೆತಿ ಚಿಕಿತ್ಸೆಯಿಂದ ಆರೋಗ್ಯ ಪ್ರಾಪ್ತಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವ ಮಹಿಮ್ನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೭.ತುಲಾ:
ಸಾಂಸಾರಿಕ ಸುಖ ವೃದ್ಧಿ. ಭಗವತ್ ಕೈಂಕರ್ಯದಿಂದ ಜೀವನ ಯಾತ್ರೆ ಸುಗಮ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಬಂಧುವರ್ಗದಲ್ಲಿ ವಿವಾಹ ನಿಶ್ಚಯ. ದೂರದಲ್ಲಿರುವ ಮಿತ್ರರಿಂದ ಅಮೂಲ್ಯ ಸಲಹೆ. ಗಣಪತಿ ಅಥರ್ವಶೀರ್ಷ, ದಾರಿದ್ರ್ಯದಹನ ಶಿವ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
೮.ವೃಶ್ಚಿಕ:
ವಿಶಿಷ್ಟ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ. ಸ್ವತಂತ್ರ ವ್ಯವಹಾರಸ್ಥರಿಗೆ ಅನುಕೂಲದ ವಿದ್ಯಮಾನ. ಬಂಧುವರ್ಗದಲ್ಲಿ ಶುಭಕಾರ್ಯಕ್ಕೆ ಸಹಾಯ. ವಿದೇಶದಲ್ಲಿರುವ ಪುತ್ರನಿಗೆ ಪದೋನ್ನತಿ. ವಸ್ತ್ರ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೯. ಧನು:
ಧಾರ್ಮಿಕ ಕ್ಷೇತ್ರದಲ್ಲಿ ಗೌರವ. ಪರಿಸರ ನೈರ್ಮಲ್ಯ ಕಾರ್ಯಕ್ರಮಕ್ಕೆ ಉತ್ತೇಜನ. ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿ. ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಆದಾಯ. ಕುಟುಂಬದೊಳಗೆ ಪ್ರೀತಿ, ವಿಶ್ವಾಸ ವೃದ್ಧಿ. ಗಣಪತಿ ಅಥರ್ವಶೀರ್ಷ, ಶಿವ ಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೧೦.ಮಕರ:
ಸಾಂಸಾರಿಕ ಕ್ಷೇತ್ರದಲ್ಲಿ ಹರ್ಷದ ವಾತಾವರಣ. ಅನುಭವ ಇರುವ ಕೆಲಸವೊಂದನ್ನು ವಹಿಸಿಕೊಳ್ಳಲು ಆಹ್ವಾನ. ವಾಹನ ದುರಸ್ತಿ ಕೆಲಸಗಾರರಿಗೆ, ದ್ರವಪದಾರ್ಥ ವ್ಯಾಪಾರಿಗಳಿಗೆ ಲಾಭ.ತಾಯಿಯ ಆರೋಗ್ಯ ಸುಧಾರಣೆ. ಸೋದರಿಯ ಮನೆಯಲ್ಲಿ ಪೂಜಾಕಾರ್ಯ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ನವರಾತ್ರಿಯ ಕಾರಣದಿಂದ ಕೊಂಚ ನೆಮ್ಮದಿ. ಹಿರಿಯರ ಆರೋಗ್ಯದಲ್ಲಿ ಎಚ್ಚರ. ಆಯ್ದ ವ್ಯಾಪಾರಿಗಳಿಗೆ ಬೇಡಿಕೆಗೆ ಸ್ಪಂದಿಸುವ ಸವಾಲು. ದೂರದಲ್ಲಿರುವ ಬಂಧುಗಳ ಆಗಮನ. ಆಪ್ತವರ್ಗದಲ್ಲಿ ಶುಭಕಾರ್ಯಕ್ಕೆ ನೆರವು. ಗಣೇಶ ಕವಚ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.
೧೨.ಮೀನ:
ಉದ್ಯೋಗಸ್ಥರಿಗೆ ಹೊಸ ವಿಭಾಗದ ಹೊಣೆಗಾರಿಕೆ. ಸಾಮಾಜಿಕ ರಂಗದಿಂದ ಒತ್ತಡ. ಹಳೆಯ ಪಾಲುದಾರರ ಪುನರ್ಮಿಲನ. ಹೊಸ ವ್ಯವಹಾರ ಪ್ರಗತಿ ಪಥದಲ್ಲಿ. ಸಂಸಾರದಲ್ಲಿ ಪ್ರೀತಿ, ಅನುರಾಗ, ವಿಶ್ವಾಸ ವೃದ್ಧಿ. ಗಣೇಶ ಕವಚ ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.