ದಿನ ಭವಿಷ್ಯ

27-09-2025

Sep 27, 2025 - 12:50
ದಿನ ಭವಿಷ್ಯ


                    ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  9


೧. ಮೇಷ:
ಹಗ್ಗ ಜಗ್ಗಾಟದಲ್ಲಿ ನಿಮಗೇ ಗೆಲುವು. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಸಮಯದೊಂದಿಗೆ ಸೆಣಸಾಟ. ಹವಾಮಾನದ ಪ್ರಭಾವದಿಂದ ಆರೋಗ್ಯದಲ್ಲಿ ವ್ಯತ್ಯಾಸ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಆಗಮನ. ಕೆಲವು ಬಗೆಯ ಉದ್ಯಮಗಳಿಗೆ ಲಾಭ.   ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.


೨.ವೃಷಭ:
 ಉದ್ಯೋಗ ಸ್ಥಾನದ ಪರಿಸ್ಥಿತಿಯಲ್ಲಿ ಬದಲಾವಣೆ ಇಲ್ಲ. ಸರಕಾರಿ ನೌಕರರಿಗೆ ಕೆಲಸದ ಒತ್ತಡ. ವಿದೇಶಗಳಲ್ಲಿ ನೌಕರಿಯಲ್ಲಿರುವ ಬಂಧುಗಳಿಂದ ಕರೆ. ಮುದ್ರಣ ಕ್ಷೇತ್ರದವರಿಗೆ  ಕೆಲಸದ ಒತ್ತಡ. ಗೃಹಿಣಿಯರ ಸ್ವಾವಲಂಬನೆ  ಉದ್ಯಮದಲ್ಲಿ ಪ್ರಗತಿ. ಗಣೇಶ ಕವಚ, ಆದಿತ್ಯ ಹೃದಯ, ನವಗ್ರಹ ಸ್ತೋತ್ರ ಓದಿ.


೩ಮಿಥುನ:

  ಉದ್ಯೋಗಸ್ಥರಿಗೆ ಹೆಚ್ಚುವರಿ ಜವಾಬ್ದಾರಿಗಳು. ಪತ್ರಕರ್ತರಿಗೆ ರಾಜಕಾರಣಿಗಳ ಒತ್ತಡ. ವ್ಯಾಪಾರಿ ವರ್ಗಕ್ಕೆ ತೃಪ್ತಿಕರ ಲಾಭ. ಮನೆಯಲ್ಲಿ ದೇವತಾರ್ಚನೆ ಹಾಗೂ ಮಂಗಲ ಕಾರ್ಯದ ಸಿದ್ಧತೆ. ಹವಾಮಾನ ವೈಪರೀತ್ಯದಿಂದ‌ ಆರೋಗ್ಯದ ಮೇಲೆ ಪರಿಣಾಮ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ

೪. ಕರ್ಕಾಟಕ:

  ಉದ್ಯೋಗ ಕ್ಷೇತ್ರದಲ್ಲಿ‌  ಒಂದೇಬಗೆಯ ವಾತಾವರಣ. ತಾಂತ್ರಿಕ ವಿಭಾಗಗಳಲ್ಲಿ ದುಡಿಯುವವರಿಗೆ  ಕೆಲಸದ ಒತ್ತಡ.  ಸ್ವಂತ ವ್ಯವಹಾರಸ್ಥರಿಗೆ  ಸಮಯದೊಂದಿಗೆ ಸ್ಪರ್ಧೆ.  ಮನೆಯಲ್ಲಿ ದೇವತಾರ್ಚನೆಯ ಸಡಗರ‌. ಕೆಲವು ವ್ಯವಹಾರಗಳಿಗೆ ಪ್ರತಿಕೂಲ ವಾತಾವರಣ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವನಾಮಾವಲ್ಯಷ್ಟಕ, ನವಗ್ರಹ ಮಂಗಲಾಷ್ಟಕ ಓದಿ.


೫.ಸಿಂಹ:

 ಆದಾಯಕ್ಕೆ ಸರಿಯಾಗಿ ವೆಚ್ಚವೂ ಏರಿಕೆ. ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ.  ಸಮಾಜದಲ್ಲಿ ಸ್ಥಾನಮಾನ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸಂಸಾರ ಸುಖ ಉತ್ತಮ. ಉದ್ಯೋಗಾಸಕ್ತರಿಗೆ ಶುಭಸೂಚನೆ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ನೆಮ್ಮದಿ. ಗಣೇಶ ಪಂಚರತ್ನ, ನರಸಿಂಹ ಸ್ತೋತ್ರ, ರವಿಸ್ತೋತ್ರ ಓದಿ.


 


೬.ಕನ್ಯಾ:

ದೇವಾಲಯ ದರ್ಶನದಿಂದ ಅನುಕೂಲ. ಸಹೋದ್ಯೋಗಿಯ ಸಹಾಯ‌ದಿಂದ ಕಾರ್ಯ ಶೀಘ್ರ ಮುಕ್ತಾಯ.  ಅಪರೂಪದ ಗೆಳೆಯರ ಆಗಮನ. ವಿದೇಶದಿಂದ ಶುಭ ವಾರ್ತೆ. ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಗೋಚರ. ಮನೆಯಲ್ಲಿ ಉಲ್ಲಾಸದ ವಾತಾವರಣ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೭. ತುಲಾ:

ದೇವಿಯ ಅನುಗ್ರಹಕ್ಕಾಗಿ ವಿಶೇಷ ಪ್ರಾರ್ಥನೆ. ಸ್ವಂತ ವ್ಯವಹಾರಸ್ಥರಿಗೆ ಅನಿರೀಕ್ಷಿತ ಯಶಸ್ಸು. ಮಹಾಪುರುಷರ ದರ್ಶನ ಯೋಗ.  ಮಕ್ಕಳ ಭವಿಷ್ಯದ ಚಿಂತನೆ. ಪರಿಸರ ಅಭಿವೃದ್ಧಿಯಲ್ಲಿ ಆಸಕ್ತಿ. ಅಪರೂಪದ ಗೆಳೆಯರ ಭೇಟಿ. ಗೃಹಿಣಿಯರಿಗೆ ನೆಮ್ಮದಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕವಚ, ದೇವೀಸ್ತೋತ್ರ ಓದಿ.

೮.ವೃಶ್ಚಿಕ:
 ಮನೆಯಲ್ಲಿ ಆಹ್ಲಾದದ  ವಾತಾವರಣ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಮರದ ಸಾಮಗ್ರಿಗಳ ನಿರ್ಮಾಪಕರಿಗೆ  ಉತ್ತಮ ಬೇಡಿಕೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ದೇವಾಲಯಕ್ಕೆ ಭೇಟಿ. ಹಿರಿಯರ ಆರೋಗ್ಯ  ಉತ್ತಮ. ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೯.ಧನು:

ಅನಿರೀಕ್ಷಿತ ಧನಪ್ರಾಪ್ತಿ. ವ್ಯಾಪಾರ ವಿಸ್ತರಣೆಗೆ ಚಿಂತನೆ. ವಸ್ತ್ರ, ಆಭರಣ, ಕಟ್ಟಡ ನಿರ್ಮಾಣ ಸಾಮಗ್ರಿಗಳ ವ್ಯಾಪಾರಿಗಳಿಗೆ  ನಿರೀಕ್ಷೆ ಮೀರಿದ ಲಾಭ. ಕೈ ಕಸಬುದಾರರಿಗೆ  ಕೈತುಂಬಾ ಕೆಲಸ. ಬೌದ್ಧಿಕ ಕಾರ್ಯಗಳಲ್ಲಿ ತೊಡಗಿರುವವರ ಮೇಲೆ ಬಹುವಿಧ  ಒತ್ತಡ. ಮನೆಯಲ್ಲಿ ಭಜನೆ, ಪಾರಾಯಣದ ವ್ಯವಸ್ಥೆ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.


೧೦.ಮಕರ:

.ಸಹಚರರಿಂದ  ಹಿತಕರ ವರ್ತನೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ರೂಪದರ್ಶಿಗಳ ವ್ಯವಹಾರದಲ್ಲಿ ಹಿನ್ನಡೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ.  ಫ್ಯಾಶನ್ ಡಿಸೈನಿಂಗ್‌ ಪರಿಣತರಿಗೆ ಉದ್ಯೋಗಾವಕಾಶ. ಬಂಧುವರ್ಗದಿಂದ ಶುಭ ಸಮಾಚಾರ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

 
೧೧. ಕುಂಭ:

ಹೊಸ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಆಸಕ್ತಿ.ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು. ಸರಕಾರಿ ನೌಕರರಿಗೆ  ಶುಭ ಸಮಾಚಾರ. ಹಿರಿಯ ಅಧಿಕಾರಿಗಳಿಗೆ ರಾಜಕಾರಣಿಗಳ ಕಾಟ. ಮುದ್ರಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ ಮಧ್ಯಮ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿ ಮಹಾತ್ಮೆ ಓದಿ.

೧೨. ಮೀನ:

ನಿತ್ಯದ ವ್ಯವಹಾರಗಳು ಸುಗಮ. ಉದ್ಯೋಗಸ್ಥರಿಗೆ ನಿರಾತಂಕವಾದ ವಾತಾವರಣ. ಸರಕಾರಿ ಅಧಿಕಾರಿಗಳಿಂದ ಮತ್ತು ನೌಕರರಿಂದ ಉತ್ತಮ ಸ್ಪಂದನ. ಕೆಲವು ವರ್ಗಗಳ ವ್ಯವಹಾರಸ್ಥರಿಗೆ ಅನಿರೀಕ್ಷಿತ ಪ್ರಗತಿ. ವ್ಯವಹಾರ ನಿರ್ವಹಣೆಗೆ ಎಲ್ಲರ ಸಹಕಾರ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ.ಓದಿ.