ದಿನ ಭವಿಷ್ಯ

02-10-2025

Oct 2, 2025 - 16:33
Oct 1, 2025 - 16:16
ದಿನ ಭವಿಷ್ಯ


            
ಅದೃಷ್ಟ ಸಂಖ್ಯೆ2

೧.ಮೇಷ:

ವಿಜಯ ದಶಮಿಯ ಪೂಜೆ, ಪುರಸ್ಕಾರಗಳ ಸಂಭ್ರಮ. ಹೆಚ್ಚಿನ ಉದ್ಯೋಗಸ್ಥರಿಗೆ ವಿರಾಮ. ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ. ಕೆಲವು ಬಗೆಯ ವ್ಯಾಪಾರಿಗಳಿಗೆ ಬಿಡುವಿನ ಅಭಾವ. ಬಂಧು, ಮಿತ್ರರೊಡನೆ ಹಬ್ಬ ಆಚರಣೆ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿ ಮಹಾತ್ಮೆ ಓದಿ.

  
 

೨.ವೃಷಭ:

  ಹೊಸ ಉದ್ಯಮದ ಶುಭಾರಂಭ. ಖಾದಿ, ಗ್ರಾಮೋದ್ಯೋಗ ಯೋಜನೆಗಳಿಗೆ ಶುಭಕಾಲ. ರಂಗೋಲಿ, ಕಸೂತಿ ಕಲೆಗಳಲ್ಲಿ ಪರಿಣತ ಮಹಿಳೆಯರಿಗೆ ಸಂಭ್ರಮ. ಅಲ್ಪತನ ತೋರುವ ನಾಯಕ ವರ್ಗಕ್ಕೆ ಮುಖಭಂಗ. ಸಾಮೂಹಿಕ, ಪೂಜೆ, ಪ್ರಾರ್ಥನೆಗಳಲ್ಲಿ ಭಾಗಿ. ಗಣಪತಿ ಅಥರ್ವಶೀರ್ಷ, ಶಿವಸಹಸ್ತನಾಮ, ನವಗ್ರಹ ಸ್ತೋತ್ರ ಓದಿ.
 


೩ಮಿಥುನ:

 ವಿಶಿಷ್ಟ ಕಾರ್ಯವೊಂದರ ಶುಭಾರಂಭ. ಔದ್ಯೋಗಿಕ  ಪ್ರತಿಭೆ ವೃದ್ಧಿಗೆ ಅವಕಾಶ. ವಸ್ತ್ರ ,  ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಮನೆಯಲ್ಲಿ ಆನಂದದ ವಾತಾವರಣ. ಅವಿವಾಹಿತ ಸೋದರನಿಗೆ ವಿವಾಹ ಯೋಗ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೪. ಕರ್ಕಾಟಕ:

  ಸಾರ್ವಜನಿಕ ರಂಗದಲ್ಲಿರುವವರಿಗೆ ಕೀರ್ತಿ. ಉದ್ಯಮಿಗಳಿಗೆ ವಿಶೇಷ ಸಂತೃಪ್ತಿಯ ಸಂದರ್ಭ. ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಮಕ್ಕಳ ಪ್ರತಿಭಾ ಪ್ರದರ್ಶನದಿಂದ ಹರ್ಷ. ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯ ಪ್ರಾಪ್ತಿ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಲಕ್ಷ್ಮೀ ಸ್ತೋತ್ರ ಓದಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೫.ಸಿಂಹ:.

 ನಿಮ್ಮ ನಾಯಕತ್ವದ ಯೋಜನೆಗೆ ಸರ್ವರ ಸಹಕಾರ. ಉದ್ಯಮದಲ್ಲಿ  ನೌಕರರ ಹಿತ ಕಾಯುವ ಕ್ರಮಗಳು. ಸಮಾಜದಲ್ಲಿ ಗೌರವ ವೃದ್ಧಿ.  ರಾಜಕಾರಣಿಗಳು ನಡೆನುಡಿಗಳಲ್ಲಿ ಎಚ್ಚರ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

೬.ಕನ್ಯಾ:

 ಇಂದಿನಿಂದ ಶುಭ ಕಾಲ ಆರಂಭ. ಉದ್ಯೋಗ ಸ್ಥಾನದಲ್ಲಿ ಎಲ್ಲರಿಂದ  ಗೌರವ.  ಕೃಷಿ ಆಸಕ್ತಿ ವೃದ್ಧಿಗೆ ಪೂರಕ ಸನ್ನಿವೇಶ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಉತ್ಸಾಹದ ದಿನ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಮಹಿಷಮರ್ದಿನಿ ಸ್ತೋತ್ರ ಓದಿ.


೭. ತುಲಾ:

ಸಂಸಾರದಲ್ಲಿ ವಿಶೇಷ ಪ್ರೀತ್ಯಾದರ ಸಂಪಾದನೆ. ಉದ್ಯೋಗ, ವ್ಯವಹಾರಗಳಲ್ಲಿ ಗೌರವ. ಮಾರ್ಗದರ್ಶಕರ ಭೇಟಿಯಿಂದ ಧೈರ್ಯವೃದ್ಧಿ. ಊರಿನ ದೇವಿ ಆಲಯಕ್ಕೆ ಭೇಟಿ. ಗುರುಸಮಾನ ಹಿರಿಯರ ಅಕಸ್ಮಾತ್ ಆಗಮನ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ವಿಶ್ವನಾಥಾಷ್ಟಕ, ಹನುಮಾನ್ ಚಾಲೀಸಾ ಓದು.

೮.ವೃಶ್ಚಿಕ:

ಸಮಸ್ಯೆಗಳನ್ನು ಕಲ್ಪಿಸಿಕೊಳ್ಳದಿರಿ. ಉದ್ಯೋಗ ಸ್ಥಾನದಲ್ಲಿ ಸಂಭ್ರಮ. ಅಧಿಕಾರಿಗಳಿಗೆ ರಾಜಕಾರಣಿಗಳ ಪೀಡೆ. ಸಹಕಾರಿ ಸಂಸ್ಥೆಗಳ ಆರ್ಥಿಕ ಚೇತರಿಕೆ. ಹಣ್ಣು, ಹೂವು,  ತರಕಾರಿಗಳಿಗೆ ಬೇಡಿಕೆ, ಆದಾಯ ವೃದ್ಧಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದು.


೯.ಧನು:

 ಅಚ್ಚುಕಟ್ಟಾದ ಯೋಜನೆಯೊಂದಿಗೆ ಮುಂದುವರಿಯಿರಿ. ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಲೇವಾದೇವಿ ವ್ಯವಹಾರದಿಂದ ಕೇಡು.  ವ್ಯವಹಾರಾರ್ಥ ಪ್ರಯಾಣ ಮುಂದೂಡಿಕೆ.
ಗಣೇಶ ಕವಚ, ವೇದಸಾರ ಶಿವಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.


೧೦.ಮಕರ:

  ಮನಸ್ಸಿನ ಸಮತೋಲನದಿಂದ ಕಾರ್ಯಸಿದ್ಧಿ. ಉದ್ಯೋಗ ಸ್ಥಾನದಲ್ಲಿ ಹೊಸ ಕಾರ್ಯದ ಹೊಣೆಗಾರಿಕೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ  ವರಮಾನ ವೃದ್ಧಿ. ಕೇಟರಿಂಗ್ ವೃತ್ತಿಯವರಿಗೆ ಅನುಕೂಲ. ಮನೆಯಲ್ಲಿ ಪೂಜೆ ಆಯೋಜನೆ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

 
೧೧. ಕುಂಭ:.

  ಕಾರ್ಯಗಳ ಒತ್ತಡದ ನಡುವೆ ಧನಲಾಭ. ಸಾಮಾಜಿಕ‌ ವಲಯದ  ಆಪ್ತರಿಂದ ಸಹಾಯದ ಕೊಡುಗೆ. ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ರಾಜಕೀಯ ನಾಯಕರಿಗೆ ದ್ವಂದ್ವ ನೀತಿಯಿಂದ ಸೋಲು. ಸಂಜೆ ದೇವಿಯ ಆಲಯಕ್ಕೆ ಭೇಟಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ. 


೧೨. ಮೀನ:

 ಭಂಡ ರಾಜಕಾರಣಿಗಳ ಬಂಡವಾಳ ಬಯಲು ಸರಕಾರಿ ಅಧಿಕಾರಿಗಳ ಸಕಾರಾತ್ಮಕ ಸ್ಪಂದನ.  ಕೃಷಿ ಆಧಾರಿತ ಉದ್ಯಮಗಳು ಪ್ರಗತಿಯಲ್ಲಿ. ವಿವಾಹ ಅಪೇಕ್ಷಿಗಳಿಗೆ  ಸಮರ್ಪಕ ಜೋಡಿ ಲಭ್ಯ. ಮನೆಯಲ್ಲಿ ಪೂಜೆ, ಪಾರಾಯಣ ಆಯೋಜನೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.