ದಿನ ಭವಿಷ್ಯ

28-10-2025

Oct 29, 2025 - 10:58
ದಿನ ಭವಿಷ್ಯ

                  ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  1

೧. ಮೇಷ:
   ಉದ್ಯೋಗ ಸ್ಥಾನದಲ್ಲಿ ಮರುಕಳಿಸಿದ ಉತ್ಸಾಹ. ಉದ್ಯಮಿಗಳ ವ್ಯವಹಾರ ವಿಸ್ತರಣೆ.   ಅವಿವಾಹಿತ ಹುಡುಗರಿಗೆ ವಿವಾಹ ಯೋಗ. ವ್ಯವಹಾರ ಸಂಬಂಧ ತಿರುಗಾಟ. ಗೃಹಿಣಿಯರಿಗೆ ಕೊಂಚ ಆಲಸ್ಯ.ಗಣಪತಿ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

೨.ವೃಷಭ:

 ಉದ್ಯೋಗ ಅರಸುತ್ತಿರುವವರಿಗೆ ಸದವಕಾಶ. ಹಿರಿಯರ ಆರೋಗ್ಯ ಕ್ಷಿಪ್ರ ಸುಧಾರಣೆ. ಸಿವಿಲ್ಎಂಜಿನಿಯರರ  ಕ್ಷೇತ್ರ ವಿಸ್ತರಣೆ. ಗೃಹಿಣಿಯರ ಉದ್ಯಮಗಳ ಆದಾಯ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅಧಿಕ ಲಾಭ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೩ಮಿಥುನ:

  ಸ್ವತಂತ್ರ  ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ. ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ. ಕುಟುಂಬಸಹಿತ ತೀರ್ಥಯಾತ್ರೆಯ ಯೋಚನೆ. ಜಾಹೀರಾತು ಸಂಸ್ಥೆ ನಿರ್ವಾಹಕರಿಗೆ ತೊಂದರೆ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.

೪. ಕರ್ಕಾಟಕ:
   ಶಿಕ್ಷಿತರ ನಿರುದ್ಯೋಗ ಸಮಸ್ಯೆ ನಿವಾರಣೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಉದ್ಯೋಗ, ಉದ್ಯಮ ಕ್ಷೇತ್ರಗಳಲ್ಲಿ ಅನುಕೂಲ ವಾತಾವರಣ. ಕೃಷಿಭೂಮಿ ಖರೀದಿಗೆ  ಮಾತುಕತೆ. ಹಿತಶತ್ರುಗಳ ಜಾಲಕ್ಕೆ ಸಿಲುಕದಿರಿ‌. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.


೫.ಸಿಂಹ:
 ಯಾವ ಕ್ಷೇತ್ರಕ್ಕೆ ಕಾಲಿಟ್ಟರೂ ಯಶಸ್ಸು.  ಶೇರು  ವ್ಯವಹಾರದಲ್ಲಿ ಉತ್ತಮ ಲಾಭ. ಇಲಾಖೆಗಳ ಸಕಾಲಿಕ ಸ್ಪಂದನದಿಂದ  ಕಾರ್ಯಗಳು ಶೀಘ್ರ ಮುಕ್ತಾಯ. ಯಂತ್ರೋಪಕರಣ ವ್ಯಾಪಾರಿಗಳಿಗೆ ಹೆಚ್ವಿನ‌ ಲಾಭ‌. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೬.ಕನ್ಯಾ:

 ಸಮಾಜದಲ್ಲಿ ಗೌರವ ವೃದ್ಧಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ  ಮುನ್ನಡೆ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ದೀರ್ಘಾವಧಿ ಹೂಡಿಕೆಗಳಲ್ಲಿ ಲಾಭ. ಲೇಖನ ವ್ಯವಸಾಯ, ಸ್ವಾಧ್ಯಾಯದಲ್ಲಿ ಹೆಚ್ಚು ಆಸಕ್ತಿ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.

೭. ತುಲಾ:

 ಉದ್ಯೋಗ ಅರಸುವವರಿಗೆ ಮಾರ್ಗದರ್ಶನ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ‌ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಮಾಧಾನದ ದಿನ. ಇಷ್ಟದೇವರ ಆಲಯಕ್ಕೆ ಭೇಟಿ. ವ್ಯವಹಾರ ಸಂಬಂಧ  ಗೆಳೆಯರ ಜೊತೆಯಲ್ಲಿ  ಪ್ರಯಾಣ. ಗಣೇಶ ಅಷ್ಟಕ, ರಾಮ ಭುಜಂಗಪ್ರಯಾತ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

೮.ವೃಶ್ಚಿಕ:

  ವಸ್ತ್ರ, ಅಲಂಕಾರ ಸಾಮಗ್ರಿ ಖರೀದಿ ಸಂಭವ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ.  ಹಿರಿಯರ  ಆರೋಗ್ಯ ಸುಧಾರಣೆ. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ದಿನ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿಗೆ ಅನುಕೂಲ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.


೯.ಧನು:

  ಉಳಿತಾಯ  ಯೋಜನೆಗಳ‌ ಏಜೆಂಟರಿಗೆ ಆದಾಯ  ವೃದ್ಧಿ. ಹಿರಿಯ ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯ‌. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಯಿಂದ ಲಾಭ. ಗೃಹಿಣಿಯರ ಸ್ವೋದ್ಯೋಗ  ಯೋಜನೆಗಳಿಗೆ ಶುಭಕಾಲ. ಕುಟುಂಬದೊಳಗೆ ಸದ್ಭಾವನೆ, ಸಹಕಾರ ವೃದ್ಧಿ. ಗಣೇಶ ಕವಚ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೧೦.ಮಕರ:

  ಕಾರ್ಯರಂಗದಲ್ಲಿಹೆಚ್ಚಿನ ಗೌರವ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಶಸ್ತ್ರವೈದ್ಯರಿಗೆ ಕೀರ್ತಿ. ದ್ರವಪದಾರ್ಥ ವ್ಯಾಪಾರಿಗಳಿಗೆ ಉತ್ತಮ ಲಾಭ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

 

೧೧. ಕುಂಭ:

  ಕಾರ್ಯನಿರ್ವಹಣೆಗೆ ವರಿಷ್ಠರ ಮೆಚ್ಚುಗೆ.  ಸಮಾಜ ಸೇವೆಯಿಂದ  ಜನಪ್ರಿಯತೆ ವೃದ್ಧಿ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಲಾಭ. ವಾಸದ ಕಟ್ಟಡ ನವೀಕರಣ ಆರಂಭ‌. ವ್ಯವಹಾರ ಸಂಬಂಧ ಉತ್ತರಕ್ಕೆ ಪ್ರಯಾಣ. ಗಣೇಶ ಕವಚ, ಶಿವಮಹಿಮ್ನ ಸ್ತೋತ್ರ, ಶನಿಸ್ತೋತ್ರ ಓದಿ.


೧೨. ಮೀನ:

 ಪ್ರಮುಖ ಕಾರ್ಯವೊಂದರ ನೇತೃತ್ವ. ಕಳೆದುಹೋದ ಅವಕಾಶ ಮರಳಿ ಬರುವ ಸಾಧ್ಯತೆ. ಕಾರ್ಯ ಯಶಸ್ಸಿಗೆ ಸಂಬಂಧಪಟ್ಟವರ ಸಹಕಾರ. ದ್ರವ ವ್ಯಾಪಾರಿಗಳಿಗೆ ಶುಭಕಾಲ.ಗುರು, ಹಿರಿಯರ ದರ್ಶನದಿಂದ ಶುಭ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.