ದಿನ ಭವಿಷ್ಯ
10-07-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 1
೧.,ಮೇಷ:
ಉದ್ಯೋಗದಲ್ಲಿ ಆನಂದಾನುಭವ. ಬಹುಪಾಲು ಉದ್ಯಮಿಗಳಿಗೆ ನಿರೀಕ್ಷೆಗಿಂತ ಅಧಿಕ ಲಾಭ.ವ್ಯವಹಾರ ವಿಸ್ತರಣೆಯಿಂದ ಅನುಕೂಲ. ಶೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ. ಸಣ್ಣ ಪ್ರಯಾಣದ ಸಾಧ್ಯತೆ. ಸಂಸಾರದಲ್ಲಿ ಸಾಮರಸ್ಯ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೨. ವೃಷಭ:
ಉದ್ಯೋಗಸ್ಥರಿಗೆ ಶೀಘ್ರ ಕಾರ್ಯ ಮುಗಿಸಲು ಒತ್ತಡ. ವಸ್ತ್ರ, ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ. ವ್ಯವಹಾರಾರ್ಥ ಸಣ್ಣ ಪ್ರಯಾಣದ ಸಾಧ್ಯತೆ. ಎಲ್ಲರ ಆರೋಗ್ಯ ಉತ್ತಮ ಸಂಸಾರದಲ್ಲಿ, ಪ್ರೀತಿ, ವಿಶ್ವಾಸ , ಸಾಮರಸ್ಯ ವೃದ್ಧಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.
೩. ಮಿಥುನ:
ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫಲ.ನ್ಯಾಯಾಲಯ ವ್ಯವಹಾರದಲ್ಲಿ ಜಯ. ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಗಮನ ಅವಶ್ಯ. ಧಾರ್ಮಿಕ ಸಾಹಿತ್ಯ ಅಧ್ಯಯನ. ದಾಂಪತ್ಯಸುಖ,ಸಾಮರಸ್ಯ ವೃದ್ಧಿ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೪. ಕರ್ಕಾಟಕ:
ಉದ್ಯೋಗದಲ್ಲಿ ಹೊಸ ವಿಭಾಗದ ಜವಾಬ್ದಾರಿ. ಮಾಲಿಕರು ಮತ್ತು ನೌಕರರ ನಡುವೆ ಉತ್ತಮ ಸಹಕಾರ. ವಸ್ತ್ರ,, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ. ಪ್ರಾಪ್ತ ವಯಸ್ಕರಿಗೆ ಶೀಘ್ರ ವಿವಾಹ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ ಸಂಭವ. ಗಣೇಶ ಕವಚ, ಶಿವಸಹಸ್ರನಾಮ, ಅನ್ನಪೂರ್ಣಾ ಸ್ತೋತ್ರ ಓದಿ.
೫. ಸಿಂಹ:
ಎಲ್ಲ ವಿಭಾಗಗಳಲ್ಲೂ ಯಶಸ್ಸು ಪ್ರಾಪ್ತಿ. ಸರಕಾರಿ ನೌಕರರಿಗೆ ಆತಂಕದ ಭಾವ. ಸ್ವೋದ್ಯೋಗಿ ಮಹಿಳೆಯರಿಗೆ ಸರ್ವವಿಧದಲ್ಲೂ ಯಶಸ್ಸು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಹತ್ತಿರದ ಶಿವ ದೇವಾಲಯಕ್ಕೆ ಸಂದರ್ಶನ. ಗಣೇಶ ಅಷ್ಟಕ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೬. ಕನ್ಯಾ:
ಎಲ್ಲ ನಿಯೋಜಿತ ಕಾರ್ಯಗಳು ಸಕಾಲದಲ್ಲಿ ಮುಕ್ತಾಯ. ಉದ್ಯೋಗದಲ್ಲಿ ನಿಯತ್ತಿನ ದುಡಿಮೆಗೆ ಗೌರವ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ಪಂಚರತ್ನ, ನರಸಿಂಹ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೭. ತುಲಾ:
ಅನಾರೋಗ್ಯದಿಂದ ಮುಕ್ತಿ. ಅನಾಯಾಸವಾಗಿ ಉದ್ಯೋಗ ನಿರ್ವಹಣೆ. ಸಣ್ಣ ಉದ್ಯಮ ಘಟಕಗಳಿಗೆ ಏಳಿಗೆಯ ಕಾಲ. ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಯೋಗ. ಹಿರಿಯರ, ಮಹಿಳೆಯರ,ಮಕ್ಕಳ ಆರೋಗ್ಯ ಉತ್ತಮ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಮಹಿಮ್ನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೮.ವೃಶ್ಚಿಕ:
ನೀವೇ ಹೆಚ್ಚು ಭಾಗ್ಯವಂತರೆಂಬ ಸಮಾಧಾನವಿರಲಿ. ವೈಯಕ್ತಿಕ ಬದುಕಿನಲ್ಲಿ ಸಂಪೂರ್ಣ ಸಂತೃಪ್ತಿ. ಉದ್ಯೋಗ, ವ್ಯವಹಾರ, ಎರಡರಲ್ಲೂ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ. ಹಿರಿಯರ, ಗೃಹಿಣಿಯರ,ಮಕ್ಕಳ ಆರೋಗ್ಯ ಉತ್ತಮ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.
೯. ಧನು:
ಉದ್ಯೋಗ ಸ್ಥಾನದಲ್ಲಿ ಕಾರ್ಯಗಳು ನಿರ್ವಿಘ್ನವಾಗಿ ಮುಂದುವರಿಕೆ. ಕೃಷಿ ಕ್ಷೇತ್ರದಲ್ಲಿ ಸಾಧಾರಣ ಲಾಭ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಯಥೇಚ್ಛ ಆದಾಯ ಉತ್ತರದಲ್ಲಿರುವ ಆಪ್ತಮಿತ್ರನಿಂದ ವಿಶೇಷ ಸಮಾಚಾರ. ಕುಲದೇವರ ದರ್ಶನದಿಂದ ಸಮಾಧಾನ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೧೦. ಮಕರ:
ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯ ವಾತಾವರಣ. ಕಟ್ಟಡ ನಿರ್ಮಾಪಕರಿಗೆ ಕೊನೆಯ ಹಂತದ ಕಾರ್ಯ ಮುಗಿಸುವ ಒತ್ತಡ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ. ವಿದ್ಯುತ್ ಸಾಧನಗಳ ದುರಸ್ತಿಯವರಿಗೆ ಒಳ್ಳೆಯ ಆದಾಯ. ಬಂಧುಗಳ ಮನೆಯಲ್ಲಿ ದೇವತಾರ್ಚನೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ. ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಶೀಘ್ರ ಕಾರ್ಯ ಮುಗಿಸಲು ಅನುಕೂಲದ ವಾತಾವರಣ. ಉದ್ಯಮದ ಉತ್ಪನ್ನಗಳಿಗೆ ಎಲ್ಲೆಡೆಗಳಿಂದ ಬೇಡಿಕೆ.ಯಂತ್ರೋಪಕರಣ ಮತ್ತು ವಾಹನ ಬಿಡಿಭಾಗಗಳ ವ್ಯಾಪಾರಿಗಳಿಗೆ ಲಾಭ. ಗೃಹೋತ್ಪನ್ನಗಳ ಜನಪ್ರಿಯತೆ ವೃದ್ಧಿ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೧೨. ಮೀನ:
ದೇವರ ದಯದಿಂದ ಎಲ್ಲ ಕಾರ್ಯಗಳು ಅನಾಯಾಸವಾಗಿ ಮುಂದುವರಿಕೆ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ . ಸರಕಾರಿ ಕಾರ್ಯಾಲಯಗಳಲ್ಲಿ ಹಿತಾನುಭವ. ಸಮಯಕ್ಕೆ ಸರಿಯಾದ ಸೇವೆಯಿಂದ ಗ್ರಾಹಕರಿಗೆ ಹರ್ಷ. ಪೂರಕ ವೃತ್ತಿಯ ಆಯ್ಕೆಯಲ್ಲಿ ಗೊಂದಲ. ಗಣೇಶ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.