ದಿನ ಭವಿಷ್ಯ
23-07-2025
 
                                
               ಜ್ಯೋತಿರ್ಮಯ.
       
ಅದೃಷ್ಟ ಸಂಖ್ಯೆ 5            
೧.ಮೇಷ:
  ಎಲ್ಲವೂ ಎಣಿಸಿದಂತೆ  ಆಗದು. ಅನಾರೋಗ್ಯದ ಕಾಟದಿಂದ ಬಿಡುಗಡೆ. ಹಿರಿಯರಿಗೆ ನೆಮ್ಮದಿಯ ವಾತಾವರಣ. ಉದ್ಯೋಗಸ್ಥರಿಗೆ ಪದೋನ್ನತಿಯ ಸೂಚನೆ. ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆಓದಿ.
೨. ವೃಷಭ:
ಒಳ್ಳೆಯ ಕೆಲಸಗಳಿಗೆ ದೈವಾನುಗ್ರಹ. ಉದ್ಯೋಗ ರಂಗದಲ್ಲಿ ಖಾತೆ ಬದಲಾವಣೆ. ವ್ಯವಹಾರ ಕ್ಷೇತ್ರದಲ್ಲಿ ತಗ್ಗಿದ  ಪೈಪೋಟಿ. ನಿರೀಕ್ಷಿತ ಲಾಭ ಕೈಸೇರಿ ಹರ್ಷ. ಕೃಷಿ ಸಾಧನಗಳು, ರಸಗೊಬ್ಬರ ಮೊದಲಾದವುಗಳ  ವ್ಯಾಪಾರಿಗಳಿಗೆ ಶುಭ ಸೂಚನೆ.ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.            
೩.ಮಿಥುನ:
ಒಂದೊಮ್ಮೆಗೆ ಹಾಯೆನಿಸುವ ಅನುಭವ. ಪುಟ್ಟ ಸಮಸ್ಯೆಗಳಿಗೆ ಹೆದರುವುದು ಬೇಡ. ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ. ನಿರೀಕ್ಷಿತ ಆರ್ಥಿಕ ನೆರವು ಕೈಸೇರಿ ಸಮಾಧಾನ. ಬೌದ್ಧಿಕ ಕೆಲಸಗಾರರಿಗೆ ಕಿರಿಕಿರಿ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಕವಚ, ನವಗ್ರಹ ಮಂಗಲಾಷ್ಟಕ ಓದಿ.
೪.ಕರ್ಕಾಟಕ:
ಆಯೋಜಿತ ಕಾರ್ಯಗಳಿಗೆ ಚಾಲನೆ.ನಿರೀಕ್ಷಿತ ನೆರವು ವಿಳಂಬ. ಗೃಹಿಣಿಯರ ಉದ್ಯಮಗಳಿಗೆ ಉತ್ತೇಜನ. ಹಿರಿಯರಿಗೆ ಸ್ಥಾನ ಗೌರವದಿಂದ ಸಮಾಧಾನ. ತಾಂತ್ರಿಕ ದುಡಿಮೆಗಾರರಿಗೆ ಶುಭ ಸಮಾಚಾರ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
೫.ಸಿಂಹ:
 ಅನುಕರಣೀಯ ಸಾಧನೆಗಳಿಂದ ಜನಾದರ ಪ್ರಾಪ್ತಿ.  ಹೊಸ ಕ್ಷೇತ್ರಕ್ಕೆ ಕಾಲಿಡುವ ಸಿದ್ಧತೆ. ಉತ್ತರ ದಿಕ್ಕಿನಿಂದ ಶುಭ ಸಮಾಚಾರ. ಹಿರಿಯರಲ್ಲಿ ಹಿಗ್ಗಿದ ಜೀವನೋತ್ಸಾಹ. ಆಸ್ತಿ ವಿವಾದ ಮಾತುಕತೆಯಲ್ಲಿ ಪರಿಹರಿಸಲು ಸಹಾಯ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಕವಚ ಓದಿ.
೬. ಕನ್ಯಾ:
ಸತ್ಕಾರ್ಯಕ್ಕೆ ನೆರವಾಗುವ ಅವಕಾಶ. ಪಾಲುದಾರರೊಂದಿಗೆ ಪ್ರಯಾಣ. ಗುರು ಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ನೈಸರ್ಗಿಕ ಕೃಷಿಯಲ್ಲಿ ಆಸಕ್ತರಿಗೆ ಸಂತೋಷದ ಸುದ್ದಿ. ಬಡಮಕ್ಕಳ ವಿದ್ಯಾರ್ಜನೆಗೆ ಸಹಾಯ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೭.ತುಲಾ:
ಯಾವುದೇ ಕಾರಣಕ್ಕೂ ಭಯಪಡುವ ಸನ್ನಿವೇಶ ಇಲ್ಲ. ಭಗವತ್ ಕೈಂಕರ್ಯದಿಂದ ಜೀವನ ಯಾತ್ರೆ ಸುಗಮ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಬಂಧುವರ್ಗದಲ್ಲಿ ವಿವಾಹ ನಿಶ್ಚಯ..ಹೊಲಿಗೆ ಕೆಲಸ ಬಲ್ಲವರಿಗೆ ವಿಶೇಷ ಅವಕಾಶ. ಗಣೇಶ ಕವಚ, ರಾಮ ಭುಜಂಗಪ್ರಯಾತ ಸ್ತೋತ್ರ, ಶನಿಸ್ತೋತ್ರ ಓದಿ.
೮.ವೃಶ್ಚಿಕ:
ಕುಟುಂಬದ ಸಂತೋಷ ಕೂಟದಲ್ಲಿ ಭಾಗಿ. ಸ್ವತಂತ್ರ ವ್ಯವಹಾರಸ್ಥರಿಗೆ ಉತ್ತೇಜನದ ಕ್ರಮ. ಬಂಧುವರ್ಗದಲ್ಲಿ ಶುಭಕಾರ್ಯಕ್ಕೆ ಸಹಾಯ. ವಸ್ತ್ರ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ವ್ಯವಹಾರದ ಸಂಬಂಧ ಉತ್ತರಕ್ಕೆ ಪ್ರಯಾಣ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೯. ಧನು:
ಉಪಕಾರ ನಿರೀಕ್ಷಿಸುವವರಿಗೆ ಸಹಾಯ.ಸಾಕುಪ್ರಾಣಿಗಳಿಂದ ತೊಂದರೆಯ ಸಾಧ್ಯತೆ. ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿ. ವಾಹನ ಚಾಲನೆಯಲ್ಲಿ ಎಚ್ಚರ. ಮನೆಯಲ್ಲಿ ಆಭರಣ ತಯಾರಿಸುವವರಿಗೆ ಬೇಡಿಕೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.
೧೦.ಮಕರ:
  ಸಾಂಸಾರಿಕ, ಉದ್ಯೋಗ ಕ್ಷೇತ್ರಗಳಲ್ಲಿ ತೃಪ್ತಿ. ಅನುಭವ ಇರುವ ಕೆಲಸವೊಂದನ್ನು ನಿರ್ವಹಿಸಲು ಕರೆ. ವಾಹನ ದುರಸ್ತಿ ಕೆಲಸಗಾರರಿಗೆ, ಔಷಧ ವ್ಯಾಪಾರಿಗಳಿಗೆ ಲಾಭ. ಪ್ರಾಚೀನ ಪದ್ಧತಿಯಿಂದ ದೇಹಾರೋಗ್ಯ ವೃದ್ಧಿ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಸ್ತೋತ್ರ  ಓದಿ.
೧೧. ಕುಂಭ:
ಒಮ್ಮೊಮ್ಮೆ ಏನು ಮಾಡಿದರೂ ಪ್ರತಿಕೂಲ ಪರಿಣಾಮ. ಹಿರಿಯರ ಆರೋಗ್ಯದಲ್ಲಿ ಎಚ್ಚರ. ಕಮಿಶನ್ ಏಜೆಂಟರಿಗೆ, ಲೈನ್ ಸೇಲ್ಸ್ ಮಾಡುವವರಿಗೆ ಪೈಪೋಟಿ. ದಸ್ತಾವೇಜು ಬರಹಗಾರರ ವ್ಯವಹಾರ ವೃದ್ಧಿ. ಅನಿರೀಕ್ಷಿತ ಅತಿಥ ಸತ್ಕಾರ ಯೋಗ. ಗಣೇಶ ಕವಚ, ಸುಬ್ರಹ್ಮಣ್ಯ ಕವಚ, ಶನಿಮಹಾತ್ಮೆ ಓದಿ.
೧೨.ಮೀನ:
ಉದ್ಯೋಗಸ್ಥರಿಗೆ ಹೊಸ ವಿಭಾಗದ ಹೊಣೆಗಾರಿಕೆ. ಸಾಮಾಜಿಕ ರಂಗದಿಂದ ಒತ್ತಡ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅನುಕೂಲದ ದಿನ. ಸಂಸಾರದಲ್ಲಿ ಪ್ರೀತಿ, ಅನುರಾಗ, ವಿಶ್ವಾಸ ವೃದ್ಧಿ. ಸರಕಾರಿ ಇಲಾಖೆಗಳಿಂದ ಸಹಾಯ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
 
 
 
 
 
 
 
 
 
 
 
 
 
 
 
 
 
 
 
 
 
 
 
 




 
                                                                                                                                                     
                                                                                                                                                     
                                                                                                                                                     
                                             
                                             
                                             
                                             
                                             
                                             
                                             
                                             
                                             
                                            