ದಿನ ಭವಿಷ್ಯ
27-07-2025
 
                                
                   ಜ್ಯೋತಿರ್ಮಯ            
ಅದೃಷ್ಟ ಸಂಖ್ಯೆ 9
೧. ಮೇಷ:
  ರಜೆಯನ್ನು ಪೂರ್ಣ ಅನುಭವಿಸುವ ಪ್ರಯತ್ನ.!   ಅನಿವಾರ್ಯ ವ್ಯವಹಾರಗಳ ಒತ್ತಡ. ಆಪ್ತ ವಲಯಗಳ ಸಂಪರ್ಕ. ಹಿರಿಯ ನಾಗರಿಕರಿಗೆ ನೆಮ್ಮದಿ. ಸಂಸಾರ ಸಹಿತ ದೇವಾಲಯ ಭೇಟಿ. ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಗೃಹಿಣಿಯರಿಗೆ ನೆಮ್ಮದಿ. ಗಣೇಶ ಕವಚ, ಆದಿತ್ಯ ಹೃದಯ, ಶನಿಮಹಾತ್ಮೆ ಓದಿ.            
೨.ವೃಷಭ:
ಸಮಾಜದ ಸಮಗ್ರ ಏಳಿಗೆ ಚಿಂತನೆಯಲ್ಲಿ ಭಾಗಿ. ಹಿರಿಯರಿಗೆ ಮತ್ತು ಮಕ್ಕಳಿಗೆ ಲವಲವಿಕೆ. ವಿರಾಮ ಇಲ್ಲದ ವ್ಯಾಪಾರಿಗಳು ಮತ್ತು ವೃತ್ತಿಪರರು. ಗೃಹಿಣಿಯರ ಸ್ವಾವಲಂಬನೆ ಆದಾಯ ವೃದ್ಧಿ. ಒಟ್ಟಿನಲ್ಲಿ ಶುಭಫಲಗಳ ದಿನ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೩ಮಿಥುನ:
ಉಲ್ಲಾಸದೊಂದಿಗೆ ದಿನಾರಂಭ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಅಪರೂಪದ ವ್ಯಕ್ತಿಗಳ ಭೇಟಿ. ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಪಂಚರತ್ನ, ಶಿವಕವಚ, ನವಗ್ರಹ ಸ್ತೋತ್ರ ಓದಿ.
೪. ಕರ್ಕಾಟಕ:
ಅಯಾಚಿತ ಅವಕಾಶಗಳ ಸದುಪಯೋಗ. ಹಿರಿಯರ ಯೋಗಕ್ಷೇಮ ವಿಚಾರಣೆ. ಮನೆಯಲ್ಲಿ ಅತಿಥಿ ಸತ್ಕಾರ ಯೋಗ. ಅಮೂಲ್ಯ ಅವಕಾಶವೊಂದರ ಪ್ರಾಪ್ತಿ. ಅವಿವಾಹಿತರಿಗೆ ತಕ್ಕ ಜೋಡಿ ಸಿಗುವ ಸಾಧ್ಯತೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ವಿರಾಮದ ಸಂದರ್ಭ ಧಾರ್ಮಿಕ ಚಿಂತನೆ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೫.ಸಿಂಹ:
 ಎಲ್ಲ ರಂಗಗಳಲ್ಲೂ ಶುಭಫಲಗಳ ನಿರೀಕ್ಷೆ. ಹಳೆಯ ಋಣಗಳನ್ನು ತೀರಿಸುವ ಅವಕಾಶ. ಸಕಾಲಿಕ ಪ್ರಯತ್ನದಿಂದ  ಕಾರ್ಯಗಳು ಶೀಘ್ರ ಮುಕ್ತಾಯ. ಪಾಲುದಾರಿಕೆ ವ್ಯವಹಾರ ಮಾತುಕತೆ. ದಾಂಪತ್ಯ ಸುಖ ಉತ್ತಮ. ಅನಾಥಾಶ್ರಮಕ್ಕೆ ಭೇಟಿ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೬.ಕನ್ಯಾ:
ಸಮಾಜಸೇವಾ ಕಾರ್ಯಗಳಲ್ಲಿ ಭಾಗಿ. ಬೇರೆಬೇರೆ ಸ್ಥಳಗಳಿಗೆ ಭೇಟಿ ಸಂಭವ. ಭವಿಷ್ಯದ ಭದ್ರತೆಗಾಗಿ ದೀರ್ಘಾವಧಿ ಹೂಡಿಕೆ. ಸಂಸಾರದಲ್ಲಿ ಸದ್ಭಾವನೆ, ಸಾಮರಸ್ಯ ವೃದ್ಧಿ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಹಣ್ಣು ನೀಡಿ ಸಾಂತ್ವನ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೭. ತುಲಾ:
ಪರಿಸರ ಸ್ವಚ್ಛತೆ ಚಟುವಟಿಕೆಗಳಲ್ಲಿ ಆಸಕ್ತಿ. ಜೇನು ವ್ಯವಸಾಯ, ತೋಟಗಾರಿಕೆಯಲ್ಲಿ ಆಸಕ್ತರಿಗೆ ಸಂತೋಷದ ಸಂದರ್ಭ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ.ಪತ್ನಿಯ ಕುಟುಂಬದಲ್ಲಿ ಶುಭಕಾರ್ಯ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮದ ದಿನ.ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೮.ವೃಶ್ಚಿಕ:
. ವಸ್ತ್ರಾಭರಣ ಖರೀದಿ ಸಂಭವ.ಗೃಹಾಲಂಕಾರದಲ್ಲಿ ಆಸಕ್ತಿ.ಕಟ್ಟಡ ನಿರ್ಮಾಪಕರಿಗೆ ಸಾಮಾನ್ಯ ಲಾಭ. ಮಕ್ಕಳ ಪರೀಕ್ಷಾ ಸಿದ್ಧತೆಗೆ ಉತ್ತೇಜನ.. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ವಾತಾವರಣ. ಆಸ್ಪತ್ರೆಗೆ ಭೇಟಿ, ರೋಗಿಗಳಿಗೆ ಹಣ್ಣು ನೀಡಿಕೆ..ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.
೯.ಧನು:
ಉದ್ಯೋಗಸ್ಥರಿಗೆ ಬಿಡುವಿನ ಆನಂದ.. ಉಳಿತಾಯ ಯೋಜನೆಗಳ ಏಜೆಂಟರಿಗೆ ಆದಾಯ ವೃದ್ಧಿ ಯೋಗ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳ ದಾಪುಗಾಲು. ಹಿತಶತ್ರುಗಳ ಕುರಿತು ಎಚ್ಚರ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ ಪ್ರಾಪ್ತಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಮಹಿಷಮರ್ದಿನಿ ಸ್ತೋತ್ರ ಓದಿ.
೧೦.ಮಕರ:
ಸಾಂಸಾರಿಕ ವ್ಯವಹಾರಗಳಿಗೆ ಸಮಯ. ಮಕ್ಕಳಿಗೆ ಅಧ್ಯಯನದಲ್ಲಿ ಮಾರ್ಗದರ್ಶನ. ಸಂಗೀತ ಶ್ರವಣ, ಸತ್ಸಂಗದಿಂದ ಮನಸ್ಸಿಗೆ ನೆಮ್ಮದಿ. ಶಸ್ತ್ರವೈದ್ಯರಿಗೆ ಕೀರ್ತಿ. ಔಷಧ ವ್ಯಾಪಾರಿಗಳಿಗೆ ಉತ್ತಮ ಲಾಭ. ಮನೆಯಲ್ಲಿ ಹರ್ಷದ ವಾತಾವರಣ. ಗಣೇಶ ಪಂಚರತ್ನ, ಹನುಮಾನ್ ಚಾಲೀಸಾ, ಶನಿಸ್ತೋತ್ರ ಓದಿ.
೧೧. ಕುಂಭ:
ಬಂಧು ಬಳಗದವರಿಂದ ವಿಶೇಷ ಪ್ರೇಮ ಪ್ರಕಟ. ನೂತನ ಆಸ್ತಿಯಲ್ಲಿ ಅಭಿವೃದ್ಧಿ ಕಾರ್ಯ. ವೃದ್ಧಾಶ್ರಮ, ಅನಾಥಾಲಯಗಳಿಗೆ ಭೇಟಿ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವಿಕೆ. ಅತಿಥಿ ಸತ್ಕಾರ ಯೋಗ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೧೨. ಮೀನ:
ಸತ್ಕಾರ್ಯಗಳ ನೇತೃತ್ವದಿಂದ ಆನಂದ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ. ಮನೆಮಂದಿಯಿಂದ ಒಳ್ಳೆಯ ಸಹಕಾರ, ಸೌಜನ್ಯದ ವಾತಾವರಣ. ಎಲ್ಲರ ಆರೋಗ್ಯ ಉತ್ತಮ. ಪರಿಣತರೊಬ್ಬರ ಸಕಾಲಿಕ ಭೇಟಿಯಿಂದ ಲಾಭ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
 
 
 
 
 
 
 
 
 
 
 
 
 
 
 
 
 
 
 
 
 
 
 
 




 
                                                                                                                                                     
                                             
                                             
                                             
                                             
                                             
                                             
                                             
                                             
                                             
                                            