ಬೆಂಗಳೂರು ಕಂಪನಿಯಿಂದ ದೇಶದ ಮೊದಲ AI ಆಟೋಪೈಲಟ್ ಕಾರು ಅಭಿವೃದ್ಧಿ

ಸಾಮಾನ್ಯ ವಾಹನಗಳನ್ನು ಚಲಾಯಿಸುವುದೇ ಸವಾಲಾಗಿರುವ ಬೆಂಗಳೂರಿನಲ್ಲಿ ಭಾರತದ ಮೊದಲ ಆಟೋಪೈಲಟ್ ವ್ಯವಸ್ಥೆಯ ಕಾರನ್ನು ಮೈನಸ್ ಝೀರೋ ತಂಡ ಪರೀಕ್ಷಿಸಿ ಯಶಸ್ವಿಯಾಗಿದೆ.

May 23, 2025 - 12:30
May 23, 2025 - 18:00
ಬೆಂಗಳೂರು ಕಂಪನಿಯಿಂದ ದೇಶದ ಮೊದಲ AI ಆಟೋಪೈಲಟ್ ಕಾರು ಅಭಿವೃದ್ಧಿ

ಬೆಂಗಳೂರು:  ಮೈನಸ್ ಝೀರೋ ಎಂಬ ಸ್ಟಾರ್ಟಪ್ ಕಂಪನಿಯು ದೇಶದ ಮೊದಲ AI ಆಧಾರಿತ ಸ್ವಯಂಚಾಲಿತ ಕಾರನ್ನು ಅಭಿವೃದ್ಧಿಪಡಿಸಿದೆ. ಸಾಮಾನ್ಯ ವಾಹನಗಳನ್ನು ಚಲಾಯಿಸುವುದೇ ಸವಾಲಾಗಿರುವ ಬೆಂಗಳೂರಿನಲ್ಲಿ ಭಾರತದ ಮೊದಲ ಆಟೋಪೈಲಟ್ ವ್ಯವಸ್ಥೆಯ ಕಾರನ್ನು ಮೈನಸ್ ಝೀರೋ ತಂಡ ಪರೀಕ್ಷಿಸಿ ಯಶಸ್ವಿಯಾಗಿದೆ.

ಮೈನಸ್ ಝೀರೋ ಕಂಪನಿಯ ಸಹ ಸಂಸ್ಥಾಪಕ ಗುರುಸಿಮ್ರನ್ ಕಲ್ರಾ X ಖಾತೆಯಲ್ಲಿ AI ಆಧಾರಿತ ಸ್ವಯಂಚಾಲಿತ ಕಾರಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 3 ನಿಮಿಷ 27 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಡಿವೈಡರ್ ಇಲ್ಲದೇ ಇರುವ ರಸ್ತೆಯಲ್ಲೂ ಸಹ ಮುಂದೆ ಇರುವ ವಾಹನ, ಎದುರುಗಡೆ ಇಂದ ಬರುವ ವಾಹನಗಳನ್ನು ಗುರುತಿಸಿವುದನ್ನು ಕಾಣಬಹುದು. ಎದುರಿಗಿರುವ ಕಾರು ಬ್ರೇಕ್ ಹಾಕಿ ವೇಗವನ್ನು ತಗ್ಗಿಸಿದಾಗ, ಈ ಕಾರ್ ಕೂಡ ತನ್ನ ಸ್ಪೀಡ್ ಕಡಿಮೆಗೊಳಿಸುತ್ತಾ ಮುಂದೆ ಸಾಗುತ್ತದೆ. ಅಕ್ಕಪಕ್ಕ ಬರುವ ವಾಹನಗಳನ್ನು ಕೂಡ ಗುರುತಿಸಿ ಕಾರು ಚಾಲನೆ ಆಗುತ್ತಿರುವುದನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಹಸು, ಆಟೋಗಳು, ಗೂಡ್ಸ್ ವಾಹನ, ತಳ್ಳುವ ಗಾಡಿ, ಡೆಡ್ ಎಂಡ್ ರೋಡ್ ಹೀಗೆ ತನಗೆ ಎದುರಾದ ಎಲ್ಲಾ ಸವಾಲುಗಳನ್ನು ಈ ಸ್ವಯಂಚಾಲಿತ ಕಾರು ಯಶಸ್ವಿಯಾಗಿ ಎದುರಿಸಿದೆ.  

ಹೈ-ಡೆಫಿನೆಷನ್ ನಕ್ಷೆ ಅಥವಾ ಈಗಾಗಲೇ ಲಭ್ಯವಿರುವ ಡೇಟಾ ಸಹಾಯವಿಲ್ಲದೆ, ಸ್ವಯಂ-ಮೇಲ್ವಿಚಾರಣೆ ರೀತಿಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಅಳವಡಿಸಲಾಗಿದೆ. ಭಾರತದಲ್ಲಿ ಸದ್ಯAdvanced driver-assistance system ಲೆವೆಲ್ 1 ಮತ್ತು ಲೆವೆಲ್ 2 ಹಂತದಲ್ಲಿ ಮಾತ್ರ ಇದೆ. ಲೆವೆಲ್ 2+, ಲೆವೆಲ್ 2++ ಮತ್ತು ಲೆವೆಲ್ 3 ತಂತ್ರಜ್ಞಾನದತ್ತ ಮುಂದುವರಿಯಲು ಇದು ಸಕಾಲ ಏನು ಮೈನಸ್ ಝೀರೊ ಕಂಪನಿ ತಿಳಿಸಿದೆ.

90% ರಷ್ಷು ADAS ಸಿಸ್ಟಮ್ ಕೆಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾತ್ರ ಉಪಯೋಗಿಸಲಾಗುತ್ತಿದೆ. ವಿಶ್ವದ 85% ರಸ್ತೆ ಅಪಘಾತಗಳು ಅಭಿವೃದ್ಧಿ ಕಾಣುತ್ತಿರುವ ದೇಶಗಳಲ್ಲಿ ಆಗುತ್ತಿವೆ ಎಂದು ವರದಿಗಳು ಹೇಳುತ್ತವೆ. ಇಂತಹ ದೇಶಗಳಲ್ಲಿ ADASನಂತಹ ಸುಧಾರಿತ ಚಾಲನಾ ಸಹಾಯ ವ್ಯವಸ್ಥೆಗಳ ಅಗತ್ಯ ಹೆಚ್ಚಾಗಿದೆ ಎಂದು ಸಂಸ್ಥೆ ಹೇಳಿದೆ.