ಸಿಎಂ ಕಾರಿಗೆ ಅಡ್ಡಿ: ಜನಾರ್ದನ ರೆಡ್ಡಿ ರೇಂಜ್ರೋವರ್ ಕಾರು ಜಪ್ತಿ
ಅ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಮಾರ್ಗವಾಗಿ ರಾಯಚೂರಿನಿಂದ ಜಿಂದಾಲ್ ಏರ್ಪೋರ್ಟ್ಗೆ ತೆರಳುತ್ತಿದ್ದರು.
ಕೊಪ್ಪಳ; ಅ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಮಾರ್ಗವಾಗಿ ರಾಯಚೂರಿನಿಂದ ಜಿಂದಾಲ್ ಏರ್ಪೋರ್ಟ್ಗೆ ತೆರಳುತ್ತಿದ್ದರು. ಈ ವೇಳೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಕಾರು ಚಾಲಕ ಸಿಎಂ ಕಾನ್ವೆಗೆ ಎದುರಾಗಿ ಚಾಲನೆ ಮಾಡಿದ್ದ. ಈ ಹಿನ್ನಲೆ ರೆಡ್ಡಿ ಬಳಸುವ ರೇಂಜ್ ರೋವರ್, ಸ್ಕಾರ್ಪಿಯೊ ಹಾಗೂ ಫಾರ್ಚೂನರ್ ಸೇರಿ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ.ಮುಖ್ಯಮಂತ್ರಿಗಳ ಕಾನ್ವೆ ರೂಲ್ಸ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿ ಗೆ ಸೇರಿದ್ದ ರೇಂಜ್ ರೋವರ್ ಕಾರನ್ನು ಸಂಚಾರಿ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ. ಇಂದು(ಮಂಗಳವಾರ) ಬೆಂಗಳೂರಿನಲ್ಲಿ ಕಾರು ಜಪ್ತಿ ಮಾಡಿದ ಪೊಲೀಸರು ಗಂಗಾವತಿಗೆ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನಕ್ಕೆ ಎದರಾಗಿ ಕಾರು ಚಾಲನೆ ಮಾಡಿದ್ದರು. ಈ ಹಿನ್ನಲೇ ಕರ್ತವ್ಯದಲ್ಲಿದ್ದ ಪೊಲೀಸರು ಚಾಲಕನ ವಿರುದ್ಧ ದೂರು ನೀಡಿದ್ದರು.
ಇದೇ ಅ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಮಾರ್ಗವಾಗಿ ರಾಯಚೂರಿನಿಂದ ಜಿಂದಾಲ್ ಏರ್ಪೋರ್ಟ್ಗೆ ತೆರಳುತ್ತಿದ್ದರು. ಈ ವೇಳೆ ರೆಡ್ಡಿ ಕಾರು ಚಾಲಕ ಸಿಎಂ ಕಾನ್ವೆಗೆ ಎದುರಾಗಿ ಚಾಲನೆ ಮಾಡಿದ್ದ. ರೂಲ್ಸ್ ಬ್ರೇಕ್ ಹಿನ್ನೆಲೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಬಳಸುವ ರೇಂಜ್ ರೋವರ್, ಸ್ಕಾರ್ಪಿಯೊ ಹಾಗೂ ಫಾರ್ಚೂನರ್ ಸೇರಿ ಮೂರು ಕಾರಗಳ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಅದರಂತೆ ಇಂದು ಬೆಂಗಳೂರಿನಲ್ಲಿ ಸೀಜ್ ಮಾಡಲಾಗಿದೆ.ಅಂದು ಸಿಎಂ ಸಂಚಾರ ಹಿನ್ನಲೆ ಗಂಗಾವತಿಯಲ್ಲಿ 20ಕ್ಕೂ ಹೆಚ್ಚು ನಿಮಿಷಗಳ ಕಾಲ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಗಂಗಾವತಿ ನಗರದ ಸಿಬಿಎಸ್ ಸರ್ಕಲ್ನಲ್ಲಿ ಶಾಸಕ ಜನಾರ್ದನ ರೆಡ್ಡಿ ಕೂಡ ಸಿಲುಕ್ಕಿದ್ದರು. ಬಹಳ ಸಮಯವಾದರೂ ವಾಹನ ಸಂಚಾರಕ್ಕೆ ಅವಕಾಶ ನೀಡದ ಹಿನ್ನಲೆ ರೋಡ್ನ ಡಿವೈಡರ್ ಮೂಲಕ ಜನಾರ್ದನ್ ರೆಡ್ಡಿ ಕಾರು ಚಾಲಕ, ಕಾನ್ವೇ ವಿರುದ್ದ ದಿಕ್ಕಿನಲ್ಲಿ ಕಾರು ಚಲಾಯಿಸಿಕೊಂಡು ಹೋಗಿದ್ದರು. ಬಳಿಕ ರೆಡ್ಡಿ ಕಾರು ಚಾಲಕ ರೂಲ್ಸ್ ಬ್ರೇಕ್ ಹಿನ್ನಲೆ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು.