ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 3
1.ಮೇಷ:
ಇಂದು ಅದೃಷ್ಟದ ದಿನ ಎನ್ನಬಹುದು. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯಗಳು ಶೀಘ್ರವಾಗಿ ಮುಕ್ತಾಯ. ಉದ್ಯಮದ ನೌಕರರಿಗೆ ವಿಶೇಷ ಅನುಕೂಲತೆಗಳು. ಮಹಿಳೆಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಆದಾಯ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಕವಚ ಓದಿ.
2.ವೃಷಭ:
ಉದ್ಯೋಗ, ವ್ಯವಹಾರಗಳಲ್ಲಿ ಸುಧಾರಣೆ. ಕೃಷಿ ಕ್ಷೇತ್ರದ ಪ್ರಯೋಗಗಳು ಯಶಸ್ವಿ. ಸರಕಾರಿ ಯೋಜನೆಗಳ ಸೌಲಭ್ಯಗಳ ಬದಲು ಸ್ವಾವಲಂಬನೆಗೆ ನಿರ್ಧಾರ. ಸತ್ಯ ನುಡಿದು ನಿಷ್ಠುರಕ್ಕೆ ಗುರಿಯಾಗುವ ಭೀತಿ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
3.ಮಿಥುನ:
ಉದ್ಯಮ ಅಭಿವೃದ್ಧಿಗೆ ಸಾಂಸ್ಥಿಕ ನೆರವು ಪ್ರಾಪ್ತಿ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ. ವ್ಯಾಪಾರಿಗಳ ಮನೆಯಲ್ಲಿ ಸಂತೋಷದ ವಾತಾವರಣ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ. ಧೈರ್ಯವೇ ಎಲ್ಲದಕ್ಕೂ ಸಾಧನ ಎಂಬುದು ನೆನಪಿರಲಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
4.ಕರ್ಕಾಟಕ:
ಸಮಗ್ರ ಪ್ರಗತಿಯತ್ತ ದಾಪುಗಾಲು. ಉದ್ಯೋಗದಲ್ಲಿ ಕ್ರಮಶಃ ಉನ್ನತಿ. ಅಕಸ್ಮಾತ್ ಧನಾಗಮ ಯೋಗ. ಕೃಷ್ಯುತ್ಪನ್ನ ಮಾರಾಟದಿಂದ ಉತ್ತಮ ಲಾಭ. ಪುತ್ರನಿಗೋಸ್ಕರ ಕನ್ಯಾನ್ವೇಷಣೆ ಯಶಸ್ವಿ. ಗಣಪತಿ ಅಥರ್ವ ಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
5.ಸಿಂಹ:
ಅತ್ತಿತ್ತ ನೋಡದೆ ಮುನ್ನಡೆದರೆ ಜಯ ನಿಶ್ಚಿತ. ಉದ್ಯೋಗ ಕ್ಷೇತ್ರದಲ್ಲಿ ಪ್ರತಿಷ್ಠೆಯ ಸ್ಥಾನ. ಉದ್ಯಮಕ್ಕೆ ಸರ್ವತೋಮುಖ ಪ್ರಗತಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಲಾಭ. ಕೃಷಿ ಕಾರ್ಮಿಕರಿಗೆ ಅನುಕೂಲದ ವಾತಾವರಣ. ಗಣೇಶ ಅಷ್ಟಕ, ಲಕ್ಷ್ಮೀನರಸಿಂಹ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.
6.ಕನ್ಯಾ:
ಸ್ಥಿರ ಉದ್ಯೋಗದ ಯೋಗ. ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಗಣ್ಯ ವ್ಯಕ್ತಿಯ ಭೇಟಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
7.ತುಲಾ:
ಉದ್ಯೋಗ ಸ್ಥಾನದಲ್ಲಿ ಯೋಗ್ಯತೆಗೆ ಸರಿಯಾದ ಗೌರವ. ಗುರುಸಮಾನ ಹಿರಿಯರಿಂದ ಮಾರ್ಗದರ್ಶನ. ಹಿತಶತ್ರುಗಳ ಪರಾಭವ. ಸಂಸಾರದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ದೇವತಾ ಸಾನ್ನಿಧ್ಯಕ್ಕೆ ಪ್ರಯಾಣ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಕವಚ ಓದಿ.
8.ವೃಶ್ಚಿಕ:
ಸರಕಾರಿ ನೌಕರರಿಗೆ ವರ್ಗಾವಣೆ ಸಂಭವ. ಸಹಕಾರಿ ಸಂಸ್ಥೆಗಳ ಸ್ಥಿತಿ ಸುಧಾರಣೆ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳಿಗೆ ಯಶಸ್ಸು. ಮಕ್ಕಳ ಹೊಸ ಉದ್ಯಮ ಯೋಜನೆ ಸಾಕಾರ. ಆರೋಗ್ಯ ಸಾಧನಗಳ ವ್ಯಾಪಾರಿಗಳಿಗೆ ಲಾಭ. ಗಣೇಶ ಕವಚ, ನರಸಿಂಹ ಸ್ತೋತ್ರ, ಗುರುಸ್ತೋತ್ರ ಓದಿ.
9.ಧನು:
ಕಠಿನ ಮಾರ್ಗದಲ್ಲಿ ಸಂಪಾದನೆ ವೃದ್ಧಿ. ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ. ಸಣ್ಣ ಉದ್ಯಮ ಘಟಕಕ್ಕೆ ಸಮರ್ಥರ ನೇಮಕ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ದ್ರವಪದಾರ್ಥ ವ್ಯಾಪಾರಿಗಳಿಗೆ ದೊಡ್ಡ ಲಾಭ. ಗಣೇಶ ಸ್ತೋತ್ರ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
10.ಮಕರ:
ಉದ್ಯೋಗ ಸ್ಥಾನ ನವೀಕರಣ ಮುಕ್ತಾಯ. ಉದ್ಯಮ ಉತ್ಪನ್ನಗಳ ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ವರಮಾನ ವೃದ್ಧಿ. ಪ್ರಾಪ್ತ ವಯಸ್ಕ ಕನ್ಯೆಯರಿಗೆ ವಿವಾಹ ಯೋಗ. ಅರ್ಹತೆಗೆ ಸರಿಯಾದ ಉದ್ಯೋಗ ಅನ್ವೇಷಣೆ. ಗಣಪತಿ ಅಥರ್ವಶೀರ್ಷ, ರಾಮ ಭುಜಂಗಪ್ರಯಾತ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
11. ಕುಂಭ:
ಕುಗ್ಗದ ಹುರುಪಿನೊಂದಿಗೆ ದಿನದ ಕಾರ್ಯಾರಂಭ. ನಿಗದಿತ ಕಾರ್ಯಗಳು ಶೀಘ್ರ ಮುಕ್ತಾಯ. ಉದ್ಯಮದ ಉತ್ಪನ್ನಗಳಿಗೆ ನಿರೀಕ್ಷೆ ಮೀರಿದ ಬೇಡಿಕೆ. ಮುದ್ರಣ ಸಾಮಗ್ರಿ, ಸ್ಟೇಶನರಿ ವಿತರಕರಿಗೆ ಹೊಸಬರ ಸಂಪರ್ಕ. ಸಮಾಜಸೇವಾ ಕಾರ್ಯಗಳಿಗೆ ಹೊಸ ಆಯಾಮ. ಗಣೇಶ ಕವಚ, ಶಿವನವಚ, ಶನಿಸ್ತೋತ್ರ ಓದಿ.
12. ಮೀನ:
ಸಪ್ತಾಹದ ನಡುವಿನಲ್ಲಿ ಇನ್ನಷ್ಟು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳಿಂದ ಕೆಲಸಕ್ಕೆ ಆಹ್ವಾನ. ಸರಕಾರಿ ಇಲಾಖೆಗಳವರಿಂದ ಸಹಕಾರ. ಉಪಕೃತ ಸಾರ್ವಜನಿಕರಿಂದ ಪ್ರಶಂಸೆ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು. ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ, ಶನಿ ಸ್ತೋತ್ರ ಓದಿ.