ಜ.11ರಂದು ಉಳ್ಳಾಲದಲ್ಲಿ ಲವಕುಶ ಜೋಡುಕೆರೆ ಕಂಬಳ: CM ಭಾಗಿ
ಉಳ್ಳಾಲದಲ್ಲಿ ಲವಕುಶ ಜೋಡುಕೆರೆ ಕಂಬಳ
ಮಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು ಮಂಗಳೂರು ಕ್ಷೇತ್ರ ಶಾಸಕ ಶ್ರೀ ಯು. ಟಿ ಖಾದರ್ ಅವರ ಮುಂದಾಳತ್ವ ಹಾಗೂ ಪೂರ್ಣ ಪ್ರಮಾಣದ ಸಹಕಾರದಲ್ಲಿ ಉಳ್ಳಾಲ ತಾಲೂಕಿನ ನಾರಿಂಗಾನ ಮೋರ್ಲ ಮೋಳದಲ್ಲಿ ಜನವರಿ 11ರಂದು ಶನಿವಾರ ಬೆಳಿಗ್ಗೆ 8:30 ರಿಂದ ವರ್ಷದ ಹೊನಲು ಬೆಳಕಿನ ಲವಕುಶ ಜೋಡುಕರೆ ನರಿಂಗಾನ ಕಂಬಳೋತ್ಸವ ಜರಗಲಿದೆ.ಈ ಕoಬಳಕ್ಕೆ ಈ ಬಾರಿ ವಿಶೇಷ ಆಕರ್ಷಣೆಯಾಗಿ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನರಿಂಗಾನ ಕಂಬಳ ಕೆಲವು ಎರಡು ವರ್ಷದಲ್ಲೇ ಜಿಲ್ಲೆಯಲ್ಲಿ ನಡೆದ ಸುಮಾರು 24 ಕಂಬಳಗಳ ಪೈಕಿ ಮೂರನೇ ಅತಿ ಹೆಚ್ಚಿನ ಸಂಖ್ಯೆಯು ಕೋಣಗಳು ಭಾಗವಹಿಸಿದ ದಾಖಲೆಗೆ ಪಾತ್ರವಾಗಿದೆ.ಹಾಗೆಯೇ ದೂರದ ಭಟ್ಕಳ ಬಾರಕೂರು ಒಳಭಾಗದಿಂದ ಕೋಣಗಳನ್ನು ಸ್ಪರ್ಧೆಗೆ ಕರೆ ತರಲಾಗಿತ್ತು ಸ್ಪರ್ಧೆಯಲ್ಲಿ ಎಲ್ಲ ವಿಭಾಗದಲ್ಲೂ ಪ್ರಥಮ ದ್ವಿತೀಯ ತೃತೀಯ ಹಾಗೂ ಚತುರ್ಥ ಬಹುಮಾನ ಚಿನ್ನದ ಪದಕ ಇದೆ.
ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ ಕೋಣದ ಯಜಮಾನರಿಗೆ ಬೆಳ್ಳಿಯ ಪದಕ ಹಾಗೂ ಟ್ರೋಫಿ ಕೊಟ್ಟು ಗೌರವಿಸಲಾಗುವುದು. ಸಭಾ ಕಾರ್ಯಕ್ರಮ ಸಂಜೆ 4:30ಕ್ಕೆ ಆರಂಭಗೊಳ್ಳಲಿದ್ದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳು ಶ್ರೀ.ಡಿ. ಕೆ ಶಿವಕುಮಾರ್, ಗೃಹ ಸಚಿವರು ಶ್ರೀ ಡಾ.ಜಿ ಪರಮೇಶ್ವರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ದಿನೇಶ್ ಗುಂಡುರಾವ್, ಮಾಜಿ ಸಚಿವರು, ಮಾಜಿ ಶಾಸಕರು, ಉದ್ಯಮಿಗಳು ಆಗಮಿಸಲಿದ್ದಾರೆ. ಸುನಿಲ್ ಶೆಟ್ಟಿ, ರೂಪೇಶ್ ಶೆಟ್ಟಿ, ಅರವಿಂದ್ ಬೋಳರ್, ಪ್ರದೀಪ್ ಆಳ್ವ ಕದ್ರಿ, ಮಂಜು ಎಮ್ ರೈ, ಭೋಜರಾಜ್ ವಾಮಂಜೂರು, ಸೂರಜ್ ಶೆಟ್ಟಿ ಸೇರಿದಂತೆ ಹಲವು ತಾರೆಯರು ಭಾಗವಹಿಸಲಿದ್ದಾರೆ. ಹಗ್ಗ ಜಗ್ಗಾಟ, ಪಾಸಿಂಗ್ ಬಾಲ್, ಬಾಕೆಟ್ ಒಳಗೆ ಗುರಿ ಇಟ್ಟು ಚೆಂಡು ಎಸೆತ, ಬಾಳೆಹಣ್ಣು ತಿನ್ನುವ ಸ್ಪರ್ಧೆ, ಕಂಬಳ ಕರೆಯಲ್ಲಿ ನಿಧಿ ಶೋಧನೆ ಸೇರಿದಂತೆ ಮಹಿಳೆಯ ಹಾಗೂ ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ.