ಸಚಿವ ಜಮೀರ್ ಕಾರಿನ ಗ್ಲಾಸ್ ಪುಡಿ ಪುಡಿ
ಶಿಗ್ಗಾವಿ-ಸವಣೂರು ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಪಠಾಣ್ ಹಾಗೂ ಖಾದ್ರಿ ಬೆಂಬಲಿಗರ ನಡುವೆ ಜಟಾಪಟಿ ಜೋರಾಗಿದೆ. ಈ ನಡುವೆ ಟಿಕೆಟ್ ವಂಚಿತ ಅಜ್ಜಂಪೀರ್ ಖಾದ್ರಿ ಬೆಂಬಲಿಗರಿಂದ ಸಜಿವ ಜಮೀರ್ ಅಹಮದ್ ಖಾನ್ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಹಾವೇರಿ: ರಾಜ್ಯದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿ ಅಭ್ಯರ್ಥಿಗಳ ಹೆಸರನ್ನೂ ಕೂಡ ಘೋಷಣೆ ಮಾಡಲಾಗಿದೆ. ಆದ್ರೆ, ಶಿಗ್ಗಾವಿ ಕಾಂಗ್ರೆಸ್ ಟಿಕೆಟ್ ಅನ್ನು ಈಗಾಗಲೇ ಯಾಸಿರ್ ಅಹ್ಮದ್ ಖಾನ್ ಪಠಾಣ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಆ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಮಾತ್ರವಲ್ಲ ಇಂದು ಹುಲುಗೂರು ಗ್ರಾಮಕ್ಕೆ ಆಗಮಿಸಿದ ಸಚಿವ ಜಮೀರ್ ಅಹಮದ್ ಖಾನ್ ಕಾರಿನ ಮೇಲೆ ಖಾದ್ರಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ.
ಟಿಕೆಟ್ ವಂಚಿತ ಅಜ್ಜಂಪೀರ್ ಖಾದ್ರಿ ಮನವೊಲಿಕೆಗೆ ಜಮೀರ್ ಅಹ್ಮದ್ ಖಾನ್ ಅವರು ಅಜ್ಜಂಪೀರ್ ಅವರ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಖಾದ್ರಿ ಬೆಂಬಲಿಗರು ಜಮೀರ್ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಜಮೀರ್ ಕಾರಿನ ಹಿಂಬದಿಯ ಕಾರಿನ ಗ್ಲಾಸ್ ನಜ್ಜುಗುಜ್ಜಾಗಿದೆ. KA 27 N 8960 ಹೆಸರಿನ ಕಾರಿನ ಗ್ಲಾಸ್ ಒಡೆದಿರುವ ಖಾದ್ರಿ ಬೆಂಬಲಿಗರು. ಕಾರು ಅಡ್ಡ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಸಾವಿರಾರು ಖಾದ್ರಿ ಅಭಿಮಾನಿಗಳು.ಇನ್ನೊಂದೆಡೆ ಅಜ್ಜಂಪೀರ್ ಖಾದ್ರಿ ಅವರು ಕೊನೇ ಕ್ಷಣದಲ್ಲಿ ಬೈಕಿನಲ್ಲಿ ಬಂದು ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಶಿಗ್ಗಾವಿಯ ತಹಶೀಲ್ದಾರ್ ಕಚೇರಿಗೆ ಓಡೋಡಿ ಬಂದ ಖಾದ್ರಿ ಅವರು ಓಡುತ್ತಲೇ ಒಳಗೆ ಹೋಗಿ ಪಕ್ಷೇತರ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಸಿದ್ದಾರೆ.