ಮಂಗಳೂರಿನ ವೊಲ್ಗ ಮೆಡಿಕಲ್ ಎಕ್ವಿಪ್‌ಮೆಂಟ್ ಅಂಡ್ ಸರ್ಜಿಕಲ್ ಸಂಸ್ಥೆಗೆ ಬೆಳ್ಳಿಹಬ್ಬದ ಸಂಭ್ರಮ ಅ.27ರಂದು ಹಂಪನಕಟ್ಟೆಯಲ್ಲಿ ರಜತಮಹೋತ್ಸವ ಸಮಾರಂಭ
ಅ.27ರಂದು ತನ್ನ ರಜತಮಹೋತ್ಸವ ಸಮಾರಂಭವನ್ನು ಆಯೋಜಿಸಿದೆ. ಆ ದಿನ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಬೆಳ್ಳಿಹಬ್ಬದ ಕಾರ್ಯಕ್ರಮದ ಹಿನ್ನಲೆಯಲ್ಲಿ ಪರಮ ಪೂಜ್ಯ ಜಗದ್ಗುರು ಅನಂತ ವಿಭೂಷಿತ ಕಾಳಹಸ್ತೇoದ್ರ ಸರಸ್ವತಿ ಮಹಾಸ್ವಾಮೀಜಿ ಅವರು ದೀಪ ಪ್ರಜ್ವಲನೆ ಮಾಡಿ ಬೆಳ್ಳಿಹಬ್ಬದ ಆಚರಣೆಗೆ ಚಾಲನೆ ನೀಡಲಿದ್ದಾರೆ. ನಂತರ ಹಂಪನಕಟ್ಟೆಯಲ್ಲಿರುವ ರಾಜ್ ಟವರ್ಸ್‌ನಲ್ಲಿ ಅರ್ಥಪೂರ್ಣವಾದ ಸಭಾ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು: ವೈದ್ಯಕೀಯ ಕ್ಷೇತ್ರದ ಸಲಕರಣೆಗಳ ಪೂರೈಕೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಮಂಗಳೂರಿನ ವೊಲ್ಗ ಮೆಡಿಕಲ್ ಎಕ್ವಿಪ್‌ಮೆಂಟ್ ಅಂಡ್ ಸರ್ಜಿಕಲ್ ಅತ್ಯಂತ ಜನಪ್ರಿಯತೆ ಹಾಗೂ ಗ್ರಾಹಕರ ವಿಶ್ವಾಸರ್ಹತೆಯನ್ನು ಪಡೆದುಕೊಂಡಿರುವ ಸಂಸ್ಥೆ. ಹಂಪನಕಟ್ಟೆಯ ಬ್ಯೂಟಿ ಪ್ಲಾಜದ ಕಟ್ಟಡದಲ್ಲಿರುವ ಈ ವೊಲ್ಗ ಮೆಡಿಕಲ್ ಎಕ್ವಿಪ್‌ಮೆಂಟ್ ಅಂಡ್ ಸರ್ಜಿಕಲ್ ಸಂಸ್ಥೆಯು ಇದೀಗ ತನ್ನ ಬೆಳ್ಳಿಹಬ್ಬದ ಸಂಭ್ರಮಾಚರಣೆಯಲ್ಲಿದೆ.
ವೊಲ್ಗ ಮೆಡಿಕಲ್ ಎಕ್ವಿಪ್‌ಮೆಂಟ್ ಅಂಡ್ ಸರ್ಜಿಕಲ್ ಸಂಸ್ಥೆಯು ತನ್ನ ಶೋರೂಂನಲ್ಲಿ ಅ.27ರಂದು ತನ್ನ ರಜತಮಹೋತ್ಸವ ಸಮಾರಂಭವನ್ನು ಆಯೋಜಿಸಿದೆ. ಆ ದಿನ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಬೆಳ್ಳಿಹಬ್ಬದ ಕಾರ್ಯಕ್ರಮದ ಹಿನ್ನಲೆಯಲ್ಲಿ ಪರಮ ಪೂಜ್ಯ ಜಗದ್ಗುರು ಅನಂತ ವಿಭೂಷಿತ ಕಾಳಹಸ್ತೇoದ್ರ ಸರಸ್ವತಿ ಮಹಾಸ್ವಾಮೀಜಿ ಅವರು ದೀಪ ಪ್ರಜ್ವಲನೆ ಮಾಡಿ ಬೆಳ್ಳಿಹಬ್ಬದ ಆಚರಣೆಗೆ ಚಾಲನೆ ನೀಡಲಿದ್ದಾರೆ. ನಂತರ ಹಂಪನಕಟ್ಟೆಯಲ್ಲಿರುವ ರಾಜ್ ಟವರ್ಸ್‌ನಲ್ಲಿ ಅರ್ಥಪೂರ್ಣವಾದ ಸಭಾ ಕಾರ್ಯಕ್ರಮ ನಡೆಯಲಿದೆ.
ಕಳೆದ 25 ವರ್ಷಗಳಲ್ಲಿ ವೊಲ್ಗ ಮೆಡಿಕಲ್ ಎಕ್ವಿಪ್‌ಮೆಂಟ್ ಅಂಡ್ ಸರ್ಜಿಕಲ್ ಸಂಸ್ಥೆಯನ್ನು ಯಶಸ್ವಿನ ಹಾದಿಯಲ್ಲಿ ಮುನ್ನಡೆಸುತ್ತ ಬಂದಿರುವವರು ಅದರ ಮಾಲೀಕರಾದ ಎ. ಲೋಕೇಶ್ ಆಚಾರ್ಯ. ಈ ಹಿನ್ನಲೆಯಲ್ಲಿ ವೊಲ್ಗ ಸಂಸ್ಥೆ ಬೆಳೆದು ಬಂದಿರುವ ಎರಡೂವರೆ ದಶಕದ ಪಯಣದ ಕುರಿತಂತೆ ಲೋಕೇಶ್ ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡದಲಿದ್ದಾರೆ. ಬಳಿಕ ಪರಮ ಪೂಜ್ಯ ಜಗದ್ಗುರು ಅನಂತ ವಿಭೂಷಿತ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಅವರಿಂದ ಆಶೀರ್ವಚನ ನಡೆಯಲಿದೆ.
ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿಗಳಾದ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ, ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯ ಸೀನಿಯರ್ ಫ್ಯಾಕಲ್ಟಿ ಮ್ಯಾನೇಜರ್ ಮಧುಕರ್, ವಿನಯ ಆಸ್ಪತ್ರೆ ಅಂಡ್ ರಿಸರ್ಚ್ ಸೆಂಟರ್ ನಿರ್ದೇಶಕರಾದ ಡಾ. ಹಂಸರಾಜ್ ಆಳ್ವ, ಎಸ್‌ಕೆಎಫ್ ಏಲಿಕ್ಸರ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಜಿ. ರಾಮಕೃಷ್ಣ ಆಚಾರ್, ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾದ ಡಾ.ಎಸ್.ಆರ್. ಆಚಾರ್ಯ, ಡಾ.ಮನೋಹರ್ ಆಚಾರ್ಯ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.