ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ
ಜ್ಯೋತಿರ್ಮಯ.
ಅದೃಷ್ಟ ಸಂಖ್ಯೆ 3
1. ಮೇಷ:
ಉದ್ಯೋಗ ಸ್ಥಾನದಲ್ಲಿ ನೆಮ್ಮದಿ.. ಉತ್ಪನ್ನಗಳ ಮಾರಾಟ ಜಾಲದಲ್ಲಿ ಸುವ್ಯವಸ್ಥೆ. ಸಕಾಲದಲ್ಲಿ ಆಪ್ತರ ನೆರವು ಲಭ್ಯ.ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ. ಊರಿನ ದೇವಾಲಯಕ್ಕೆ ಭೇಟಿ.ಗೃಹಿಣಿಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.
2.ವೃಷಭ:
ದಿನದ ಆರಂಭದಲ್ಲ ಅನಾಸಕ್ತಿಯ ಭಾವ. ದಿನದ ಉತ್ತರಾರ್ಧದಲ್ಲಿ ಚೇತರಿಕೆ. ಒಂದೇ ಉದ್ಯಮದ ಮೇಲೆ ಗಮನ ಹರಿಸಿದರೆ ಜಯ. ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ಲೇವಾದೇವಿ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಮನೆಯಲ್ಲಿ ಎಲ್ಲರಿಗೂ ಆರೋಗ್ಯ ವೃದ್ಧಿ, ನೆಮ್ಮದಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
3.ಮಿಥುನ:
ಕ್ರಿಯಾಶೀಲರಿಗೆ ಹೊಸ ಅವಕಾಶಗಳು. ಉದ್ಯಮದಲ್ಲಿ ನೌಕರರ ಸಮಸ್ಯೆ ಪರಿಹಾರ. ಗೃಹೋದ್ಯಮದ ಉತ್ಪನ್ನಗಳಿಗೆ ಗ್ರಾಹಕರ ಸಂಖ್ಯೆ ವೃದ್ಧಿ. ಕೃಷಿ ಕ್ಷೇತ್ರಕ್ಕೆ ಪ್ರವೇಶದಿಂದ ಅನುಕೂಲ.ಮನೆಯಲ್ಲಿ ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ.ಗಣೇಶ ಪಂಚರತ್ನ, ಶಿವ ಸಹಸ್ರನಾಮ, ಅನ್ನಪೂರ್ಣಾ ಸ್ತೋತ್ರ ಓದಿ.
4.ಕರ್ಕಾಟಕ:
ಭಾರೀ ಲವಲವಿಕೆಯಲ್ಲಿ ದಿನಾರಂಭ. ಸಹೋದ್ಯೋಗಿಗಳಿಗೆ ಹರ್ಷ. ಸ್ವಂತ ಉದ್ಯಮ ವಿಸ್ತರಣೆ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿಗಳು, ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂಭ್ರಮ. ಗಣೇಶ ಕವಚ, ನರಸಿಂಹ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
5.ಸಿಂಹ:
ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಭೂ ವ್ಯವಹಾರದಲ್ಲಿ ಲಾಭ. ಸರಕಾರಿ ಕಾರ್ಯಾಲಯದ ಕೆಲಸ ಸುಗಮ. ದೇವಾಲಯ ದರ್ಶನ. ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ. ಎಲ್ಲರಿಗೂ ಉತ್ತಮ ಆರೋಗ್ಯ.ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ದೇವೀಸ್ತೋತ್ರ ಓದಿ.
6.ಕನ್ಯಾ:
ಉದ್ಯೋಗದಲ್ಲಿ ಸ್ಥಿರತೆ ಸ್ಥಾಪನೆ. ಸಾರ್ವಜನಿಕ ಸಂಪರ್ಕದಲ್ಲಿ ಒಳ್ಳೆಯ ಹೆಸರು. ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ಜಾಲ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆಗಿಂತ ಅಧಿಕ ಲಾಭ. ಕುಶಲಕರ್ಮಿಗಳಿಗೆ ವಿಪುಲ ಉದ್ಯೋಗಾವಕಾಶ.ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.
7.ತುಲಾ:
ಪೂರ್ಣ ದೈವಾನುಗ್ರಹದ ದಿನ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆಗೆ ಗೌರವ. ಸರಕಾರಿ ನೌಕರರಿಗೆ ಹೆಚ್ಚು ಕೆಲಸದ ಹೊರೆ. ಅಧ್ಯಾಪಕ ವೃತ್ತಿಯವರಿಗೆ ಹೆಚ್ಚಿನ ಜವಾಬ್ದಾರಿ.ಸಣ್ಣ ವ್ಯಾಪಾರಿಗಳಿಗೆ ನಿರೀಕ್ಷೆಯಂತೆ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಮಧ್ಯಮ ಲಾಭ. ಗಣೇಶ ಸ್ತೋತ್ರ,ಮಹಿಷಮರ್ದಿನಿ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.
8.ವೃಶ್ಚಿಕ:
ಪ್ರಾಪಂಚಿಕ ಸುಖದಲ್ಲಿ ಕೊರತೆ ಇಲ್ಲ.ಉದ್ಯೋಗದಲ್ಲಿ ಆನಂದ.ಉದ್ಯಮಿಗಳಿಗೆ ನೌಕರವರ್ಗದ ಸಹಕಾರ.ನ್ಯಾಯಾಲಯದಲ್ಲಿ ಜಯ. ಮನೆಯಲ್ಲಿ ಸಮಾಧಾನದ ವಾತಾವರಣ.ಗಣೇಶ ಕವಚ, ವಿಷ್ಣು ಸಹಸ್ರನಾಮ ಹನುಮಾನ್ ಚಾಲೀಸಾ ಓದಿ.
9.ಧನು:
ಈಗಿಂದೀಗ ಲಾಭದ ಆಶೆ ಬೇಡ. ಸಣ್ಣ ಉಳಿತಾಯ ಯೋಜನೆಯಲ್ಲಿ ಲಾಭ.ಉದ್ಯಮ ಕ್ಷೇತ್ರದಲ್ಲಿ ಪೈಪೋಟಿ.ಸರಕಾರಿ ಕಚೇರಿಗಳಲ್ಲಿ ಸಕಾರಾತ್ಮಕ ಸ್ಪಂದನ. ಆಸ್ತಿ ಖರೀದಿ ಮಾರಾಟದಲ್ಲಿ ಲಾಭ. ಸಂಸಾರದಲ್ಲಿ ಸಾಮರಸ್ಯದ ವಾತಾವರಣ.ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
10.ಮಕರ:
ಅನಿರೀಕ್ಷಿತ ಧನಲಾಭ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ. ಹಿರಿಯರ ಆವಶ್ಯಕತೆಗಳನ್ನು ಗಮನಿಸಿ.ದೇವತಾರ್ಚನೆಯಲ್ಲಿ ಆಸಕ್ತಿ. ಸಂಗೀತ ಶ್ರವಣದಿಂದ ಮನಸ್ಸಿಗೆ ನೆಮ್ಮದಿ. ಮಹಿಳೆಯರ ಸ್ವೋದ್ಯೋಗ ಯೋಜನೆ ಮುನ್ನಡೆ. ಎಲ್ಲರ ಆರೋಗ್ಯ ಉತ್ತಮ.ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
11.ಕುಂಭ:
ಕಿರಿಯರಿಗೆ ಮಾರ್ಗದರ್ಶನ. ಉದ್ಯಮದಲ್ಲಿ ಪ್ರಚಂಡ ಮುನ್ನಡೆ.ಮುದ್ರಣ ಸಾಮಗ್ರಿ, ಸ್ಟೇಶನರಿ, ವಸ್ತ್ರ, ಆಭರಣ, ಯಂತ್ರೋಪಕರಣಗಳು, ವಿದ್ಯುತ್ ಉಪಕರಣಗಳು, ಇಲೆಕ್ಟ್ರಾನಿಕ್ಸ್ ಸಾಧನಗಳು ಮೊದಲಾದ ಸಾಮಗ್ರಿಗಳಿಗೆ ಅಧಿಕ ಬೇಡಿಕೆ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.
12.ಮೀನ:
ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಸರಕಾರಿ ಅಧಿಕಾರಿಗಳು ಮತ್ತು ನೌಕರರಿಂದ ಸಹಕಾರ..ಸೇವಾ ಮಾದರಿಯ ಉದ್ಯೋಗಸ್ಥರಿಗೆ ಅಧಿಕ ಯಶಸ್ಸು. ಸಂಗಾತಿ ಮತ್ತು ಮಕ್ಕಳ ಪೂರ್ಣ ಸಹಕಾರ.ಸಮಾಜದಲ್ಲಿ ಗೌರವ ವೃದ್ಧಿ ಮನೆಯಲ್ಲಿ ನೆಮ್ಮದಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ದೇವೀಕವಚ ಓದಿ.