ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ
ಅದೃಷ್ಟ ಸಂಖ್ಯೆ 9
1.ಮೇಷ:
ರಜೆಯ ಸೌಖ್ಯವನ್ನು ಅನುಭವಿಸಿದ ಬಳಿಕ ಸಪ್ತಾಹದ ಆರಂಭ..ಉದ್ಯೋಗ, ವ್ಯವಹಾರಗಳಲ್ಲಿ ಗುರಿಮುಟ್ಟಿದ ಸಮಾಧಾನ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಾಮಾನ್ಯ ತೃಪ್ತಿ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.ಸಣ್ಣ ವ್ಯಾಪಾರಸ್ಥರಿಗೆ ಶುಭದಿನ.ಗಣಪತಿ ಅಥರ್ವಶೀರ್ಷ, ಶಿವಸಹಸ್ರನಾಮ, ನವಗ್ರಹ ಕವಚ ಓದಿ.
2.ವೃಷಭ:
ದೈವಾನುಗ್ರಹದಿಂದ ಜೀವನ ಸುಲಭ. ಅನೇಕ ಮಂದಿ ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ. ಸರಕಾರಿ ನೌಕರರಿಗೆ ಸಪ್ತಾಹ ಆರಂಭವಾಗಿದ್ದರೂ ಆರಾಮದ ಭಾವ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಹಿರಿಯರು, ಗೃಹಿಣಿಯರು,, ಮಕ್ಕಳಿಗೆ ನಿಶ್ಚಿಂತೆ.ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
3.ಮಿಥುನ:
ವಾರದ ಮೊದಲ ದಿನ ಫಲಗಳು ಉತ್ತಮ ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ. ಉದ್ಯೋಗಸ್ಥರ ಕಾರ್ಯ ನಿರ್ವಹಣೆ ನಿರಾತಂಕ. ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ. ಅಪರೂಪದ ವ್ಯಕ್ತಿಯೊಂದಿಗೆ ಭೇಟಿ. ಗಣೇಶ ಪಂಚರತ್ನ. ಶಿವಕವಚ. ನವಗ್ರಹ ಮಂಗಲಾಷ್ಟಕ ಓದಿ.
4.ಕರ್ಕಾಟಕ:
ನಿಯೋಜಿತ ಕಾರ್ಯಗಳು ಮುಗಿದ ಸಂತೃಪ್ತಿ. ಪಾಲುದಾರಿಕೆ ವ್ಯವಹಾರ ಸುಧಾರಣೆ. ಕಟ್ಟಡ ನಿರ್ಮಾಣ-ಮಾರಾಟ ವ್ಯವಹಾರಸ್ಥರಿಗೆ ಉತ್ತಮ ಲಾಭ. ಅಧ್ಯಾಪಕ ವರ್ಗದವರಿಗೆ ಮಕ್ಕಳ ಸಾಧನೆಯಿಂದ ಹರ್ಷ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟವಾಗುವ ಭೀತಿ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
5.ಸಿಂಹ:
ದಿನದ ಆರಂಭದಲ್ಲಿ ಮಂದಗತಿ, ಉತ್ತರಾರ್ಧದಲ್ಲಿ ವೇಗದ ಓಟ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಭೂವ್ಯವಹಾರ ಸಂಬಂಧ ಮಾತುಕತೆ ಕೊನೆಯ ಹಂತಕ್ಕೆ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
6.ಕನ್ಯಾ:
ಉದ್ಯೋಗಸ್ಥರಿಗೆ ಮೇಲಿನವರಿಂದ ಉತ್ತೇಜನ. ವ್ಯವಹಾರಸ್ಥರಿಗೆ ಹೊಸ ಅವಕಾಶಗಳು ಲಭ್ಯ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.ಔಷಧರಹಿತ ಚಿಕಿತ್ಸಕರಿಂದ ಸಹಾಯ. ಗಣೇಶ ಕವಚ, ನರಸಿಂಹ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
7.ತುಲಾ:
ಕಳೆದ ವಾರ ಕಾಡುತ್ತಿದ್ದ ಅನಾರೋಗ್ಯ ಪರಿಹಾರ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚುವರಿ ಜವಾಬ್ದಾರಿ. ಆಹಾರಪದಾರ್ಥ ವ್ಯಾಪಾರದಲ್ಲಿ ಪ್ರಗತಿ.ಕೃಷಿ ಉತ್ಪನ್ನಗಳಿಂದ ಆದಾಯ ವೃದ್ಧಿ. ಗೃಹಿಣಿಯರಿಗೆ ಉಲ್ಲಾಸದ ವಾತಾವರಣ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
8.ವೃಶ್ಚಿಕ:
ವ್ಯವಹಾರಗಳು ನಿರೀಕ್ಷೆಯಂತೆ ನಡೆದು ಸಮಾಧಾನ. ಮಾಲಿಕ- ನೌಕರರ ಬಾಂಧವ್ಯ ಸುಧಾರಣೆ.ಆಸ್ತಿ ಖರೀದಿ, ಮಾರಾಟ ಮಾತುಕತೆ ಫಲಪ್ರದ. ಲೇವಾದೇವಿ ವ್ಯವಹಾರಸ್ಥರಿಗೆ ಸ್ವಲ್ಪಮಟ್ಟಿನ ಲಾಭ. ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ಉತ್ತಮ ಲಾಭ.ಗಣೇಶ ಕವಚ, ಮಹಿಷಮರ್ದಿನಿ ಸ್ತೋತ್ರ, ನವಗ್ರಹ ಕವಚ, ಓದಿ.
೯.ಧನು:
ದೈವಾನುಗ್ರಹ, ಕಾರ್ಯನಿಷ್ಠೆ ಜೊತೆಗೂಡಿ ಯಶಸ್ಸು. ಸಹೋದ್ಯೋಗಿಗಳ ಅಸೂಯೆಗೆ ಗುರಿಯಾಗದಿರಿ. ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ವ್ಯವಹಾರ ಸಂಬಂಧ ಪ್ರಯಾಣ ಸಂಭವ. ಸಂಗಾತಿಯ ಆರೋಗ್ಯದ ಕಡೆಗೆ ಗಮನವಿರಲಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.
10.ಮಕರ:
ಉದ್ಯೋಗ ಸ್ಥಾನದಲ್ಲಿ ಸಮಾಧಾನ. ಕೆಲವರಿಗೆ ಅಯಾಚಿತ ಧನಪ್ರಾಪ್ತಿ. ಪಾಲುದಾರಿಕೆ ವ್ಯವಹಾರಸ್ಥರಿಗೆ ಸಾಮಾನ್ಯ ಲಾಭ. ಕೆಲವು ವರ್ಗಗಳ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ. ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ. ಗಣೇಶ ಕವಚ, ಶಿವಕವಚ, ಶನಿಸ್ತೋತ್ರ ಓದಿ.
11.ಕುಂಭ:
ಸಾಮಾಜಿಕ ಚಟುವಟಿಕೆಗಳ ಒತ್ತಡ. ಉದ್ಯೋಗ ರಂಗದಲ್ಲಿ ಪ್ರಶಂಸೆಯ ಯೋಗ. ದಿನವಿಡೀ ಬಿಡುವಿಲ್ಲದ ಚಟುವಟಿಕೆಗಳು. ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಶನಿಸ್ತೋತ್ರ ಓದಿ
12.ಮೀನ:
ಸಪ್ತಾಹದ ನಿರ್ದಿಷ್ಟ ಕಾರ್ಯಗಳು ಮುಕ್ತಾಯದ ಹಂತಕ್ಕೆ. ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ಸ್ಪಂದನ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಸಮಾನ ಆಸಕ್ತಿಯುಳ್ಳವರಿಂದ ಸಹಕಾರ. ಗೃಹಾಲಂಕಾರ ಸಾಮಗ್ರಿ ಖರೀದಿ.ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಸ್ತೋತ್ರ ಓದಿ.