ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 3
1.ಮೇಷ:
ಪೂರ್ಣವಿರಾಮದಿಂದಾಗಿ ಆಲಸ್ಯ ಸಹಜ. ಉದ್ಯಮಿಗಳಿಗೆ ಆರಾಮದ ಪರಿಸ್ಥಿತಿ. ವಸ್ತ್ರ, ಸಿದ್ಧ ಉಡುಪು, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಅದೃಷ್ಟ. ಮಹಿಳಾ ಉದ್ಯಮಿಗಳಿಗೆ ಸಮಾಧಾನದ ಸ್ಥಿತಿ. ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ. ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಆದಿತ್ಯ ಹೃದಯ ಓದಿ.
2.ವೃಷಭ:
ಸಂಭ್ರಮದ ಷಷ್ಟಿಯ ಬಳಿಕ ವಾರದ ವಿರಾಮ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ಲೇವಾದೇವಿ ವ್ಯವಹಾರಕ್ಕೆ ಪ್ರತಿಕೂಲ ಪರಿಸ್ಥಿತಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅನುಕೂಲ. ಪೂಜೆ, ಉತ್ಸವಗಳಲ್ಲಿ ಭಾಗಿ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
3.ಮಿಥುನ:
ನಾಳೆಯ ಕೆಲಸ, ಕಾರ್ಯಗಳಿಗೆ ಸಿದ್ಧತೆ. ಉದ್ಯೋಗಸ್ಥರಿಗೆ ದೀರ್ಘ ವಿರಾಮ.ಯೋಗ್ಯರಿಗೆ ಮಾತ್ರ ಸಲಹೆ ನೀಡಿರಿ. ಕೆಲವು ವರ್ಗದ ವ್ಯಾಪಾರಿಗಳಿಗೆ ಹೇರಳ ಲಾಭ. ಹಳೆಯ ಒಡನಾಡಿಗಳ ಮರು ಸಂಪರ್ಕ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
4.ಕರ್ಕಾಟಕ:
ಮನೆಯೊಳಗಿನ ವ್ಯವಸ್ಥೆಗಳಿಗೆ ಗಮನ..ಧಾರ್ಮಿಕ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳು. ಸರಕಾರಿ ಸೌಲಭ್ಯಗಳ ಸುಧಾರಣೆಗೆ ರಾಜಕಾರಣಿಗಳ ನಿರ್ಲಕ್ಷ್ಯ. ಚಾರಿತ್ರ್ಯವಂತರ ಹೆಸರು ಕೆಡಿಸಲು ಸಂಚು. ಮಹಿಳೆಯರ ಸ್ವೋದ್ಯೋಗ ಉತ್ಪನ್ನಗಳಿಗೆ ಕೀರ್ತಿ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
5.ಸಿಂಹ:
ಉದ್ಯೋಗಸ್ಥರಿಗೆ ವಿರಾಮವಾದೆಊ ಸಂಸಾರ ತಾಪತ್ರಯಗಳು. ತುಂಬಿದ ಮನೆಗಳಲ್ಲಿ ಮಕ್ಕಳ ಕಲರವ. ರಜೆಯಲ್ಲಿ ಬಂದ ಮಕ್ಕಳೊಂದಿಗೆ ತಿರುಗಾಟ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಉತ್ತಮ ಆರೋಗ್ಮ. ವ್ಯವಹಾರ ನಿಮಿತ್ತ ತುರ್ತು ಪ್ರಯಾಣ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ ,ಗುರುಸ್ತೋತ್ರ ಓದಿ.
6.ಕನ್ಯಾ:
ಉದ್ಯೋಗ, ವ್ಯವಹಾರಗಳಿಗೆ ವಿರಾಮ. ಕೃಷ್ಯುತ್ಪನ್ನಗಳ ಮಾರಾಟಕ್ಕೆ ಸಿದ್ದತೆ. ಪಾಲುದಾರಿಕೆ ಉದ್ಯಮ ಮುನ್ನಡೆ. ವಿವಾಹಾಸಕ್ತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ.ಕುಟುಂಬದ ಹಿರಿಯ ಹಿತೈಷಿ ಆಗಮನ. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಆಂಜನೇಯ ಸ್ತೋತ್ರ ಓದಿ.
7.ತುಲಾ:
ವಿರಾಮದ ಸದುಪಯೋಗಕ್ಕೆ ವಿವಿಧ ಕ್ರಮಗಳು. ಹಿತಶತ್ರುಗಳ ಕಾಟದಿಂದ ಮುಕ್ತಿ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಮಾರ್ಗದರ್ಶನ. ಲೇವಾದೇವಿ ವ್ಯವಹಾರಲ್ಲಿ ಕಹಿ ಅನುಭವ. ಸಾರ್ವಜನಿಕ ವ್ಯಕ್ತಿಗಳಿಗೆ ಮುಖಭಂಗ. ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.
8.ವೃಶ್ಚಿಕ:
ಸರ್ವವಿಧದಲ್ಲೂ ಉತ್ತಮವಾಗಿರುವ ಪರಿಸ್ಥಿತಿ. ಹಬ್ಬದ ಬಳಿಕ ಕಾರ್ಯ ಸುಧಾರಣೆಗೆ ಚಿಂತನೆ. ಸರಕಾರಿ ಅಧಿಕಾರಿಗಳಿಗೆ ಕೆಲಸದ ಹೊರೆಯ ಚಿಂತೆ. ರಾಜಕಾರಣಿಗಳಿಗೆ ಕೊಂಚ ಇಕ್ಕಟ್ಟಿನ ಪರಿಸ್ಥಿತಿ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ನರಸಿಂಹ ಕವಚ, ಆಂಜನೇಯ ಸ್ತೋತ್ರ ಓದಿ.
9. ಧನು:
ವಿರಾಮದ ನಡುವೆ ಘಟಕದ ಕಾರ್ಯ ಸುಧಾರಣೆಗೆ ಸಿದ್ಧತೆ. ಉದ್ಯಮದ ವೈವಿಧ್ಯೀಕರಣ ಕ್ರಮ ಮುನ್ನಡೆ. ಹಿರಿಯರ ಜೊತೆಗೂಡಿ ದೇವಾಲಯ ದರ್ಶನ. ಮಕ್ಕಳ ಅಧ್ಯಯನಾಸಕ್ತಿ ಬೆಳೆಸಲು ಪ್ರಯತ್ನ. ವ್ಯವಹಾರದ ನಿಮಿತ್ತ ಪ್ರಯಾಣ ಮುಂದಕ್ಕೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
10.ಮಕರ:
ಕೆಲವರಿಗೆ ವಿರಾಮದಲ್ಲೂ ಪೂರ್ಣ ಪ್ರಮಾಣದ ಕೆಲಸ. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಸಾಧ್ಯತೆ. ಬಂಧುಗಳ ಭೇಟಿಗೆ ಪೂರ್ವಕ್ಕೆ ಪ್ರಯಾಣ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ.ದೀರ್ಘಾವಧಿ ಹೂಡಿಕೆಯಲ್ಲಿ ಲಾಭ.ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.
11.ಕುಂಭ:
ಉದ್ಯೋಗಸ್ಥರಿಗೆ ವಿರಾಮ, ಆಲಸ್ಯದ ಅನುಭವ. ಸರಕಾರಿ ನೌಕರರಿಗೆ ವರ್ಗಾವಣೆಯ ಶಂಕೆ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತಸ. ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕವಚ, ಹನುಮಾನ್ ಚಾಲೀಸಾ ಓದಿ.
12.ಮೀನ:
ಮನೆಮಂದಿಯೊಂದಿಗೆ ಗುರು, ಇಷ್ಟದೇವರ ದರ್ಶನ. ಸೇವಾ ರೂಪದ ಕಾರ್ಯಗಳು ಇಲಾಖೆಯವರ ಸಹಕಾರದಿಂದ ಯಶಸ್ವಿ. ಪುನರಾರಂಭಗೊಂಡ ಉದ್ಯಮ ಮುನ್ನಡೆ. ದೂರದಲ್ಲಿರುವ ಬಂಧುಗಳಿಂದ ಶುಭಸಂದೇಶ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.