ಚಿನ್ನ, ಬೆಳ್ಳಿ ಬೆಲೆ ಸತತ ಏರಿಕೆ
ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ಮುಂದುವರಿದಿದೆ. ಅಪರಂಜಿ ಚಿನ್ನದ ಬೆಲೆ 13,000 ರೂ ಗಡಿ ದಾಟಿದೆ. ಆಭರಣ ಚಿನ್ನದ ಬೆಲೆ 12,000 ರೂ ಗಡಿ ಸಮೀಪ ಇದೆ.
ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ಮುಂದುವರಿದಿದೆ. ಅಪರಂಜಿ ಚಿನ್ನದ ಬೆಲೆ 13,000 ರೂ ಗಡಿ ದಾಟಿದೆ. ಆಭರಣ ಚಿನ್ನದ ಬೆಲೆ 12,000 ರೂ ಗಡಿ ಸಮೀಪ ಇದೆ. ಚೆನ್ನೈನಲ್ಲಿ ಇದರ ಬೆಲೆ 12,000 ರೂ ಗಡಿಯನ್ನೂ ದಾಟಿದೆ. ಇಂದು ಸೋಮವಾರ ಚಿನ್ನದ ಬೆಲೆ ಗ್ರಾಮ್ಗೆ 60 ರೂ ಹೆಚ್ಚಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಯಥಾಸ್ಥಿತಿ ಇದೆ. ಇನ್ನು, ಬೆಳ್ಳಿ ಬೆಲೆಯ ಭರ್ಜರಿ ಏರಿಕೆಯ ಓಟ ಮುಂದುವರಿದಿದೆ. ಇಂದು ಗ್ರಾಮ್ಗೆ 3 ರೂ ಹೆಚ್ಚಿದೆ. ಇದರೊಂದಿಗೆ ಬೆಳ್ಳಿ ಬೆಲೆ 185 ರೂನಿಂದ 188 ರೂ ಮುಟ್ಟಿದೆ.
ಚೆನ್ನೈ ಮೊದಲಾದ ಕಡೆ ಇದರ ಬೆಲೆ 4 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,19,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,30,480 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 18,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,19,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 18,800 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 19,600 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿ.1ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,048 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,960 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,786 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 188 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,048 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,960 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 188 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 11,960 ರೂ
- ಚೆನ್ನೈ: 12,070 ರೂ
- ಮುಂಬೈ: 11,960 ರೂ
- ದೆಹಲಿ: 11,975 ರೂ
- ಕೋಲ್ಕತಾ: 11,960 ರೂ
- ಕೇರಳ: 11,960 ರೂ
- ಅಹ್ಮದಾಬಾದ್: 11,965 ರೂ
- ಜೈಪುರ್: 11,975 ರೂ
- ಲಕ್ನೋ: 11,975 ರೂ
- ಭುವನೇಶ್ವರ್: 11,960 ರೂ


