ಈ ವರ್ಷ 1ನೇ ತರಗತಿ ಅಡ್ಮಿಷನ್‌ನಲ್ಲಿ ಮಹತ್ವದ ಬದಲಾವಣೆ

ಈ ವರ್ಷ 1ನೇ ತರಗತಿಯ ಶಾಲಾ ವಯೋಮಿತಿಯನ್ನು ರಾಜ್ಯ ಶಿಕ್ಷಣ ಇಲಾಖೆ ಸಡಿಲಗೊಳಿಸಿದೆ. 6 ವರ್ಷದ ಬದಲು 5 ವರ್ಷ 5 ತಿಂಗಳ ವಯೋಮಿತಿ ಫಿಕ್ಸ್ ಮಾಡಲಾಗಿದೆ. ಅಂದ್ರೆ ಮಕ್ಕಳು 1ನೇ ತರಗತಿ ಸೇರ್ಪಡೆಗೆ ಜೂನ್ 1ಕ್ಕೆ 5 ವರ್ಷ 5 ತಿಂಗಳು ಆಗಿದ್ರೆ ಸಾಕು. ನೀವು ನಿಮ್ಮ ಮಕ್ಕಳನ್ನು 1ನೇ ತರಗತಿ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ.

Apr 16, 2025 - 16:40
ಈ ವರ್ಷ 1ನೇ ತರಗತಿ ಅಡ್ಮಿಷನ್‌ನಲ್ಲಿ ಮಹತ್ವದ ಬದಲಾವಣೆ

ಜೂನ್ 1ಕ್ಕೆ 6 ವರ್ಷ ಕಡ್ಡಾಯ ಇದ್ರೆ ಮಾತ್ರ ಮಕ್ಕಳಿಗೆ 1ನೇ ತರಗತಿಯ ಅಡ್ಮಿಷನ್. ರಾಜ್ಯ ಸರ್ಕಾರದ ಈ ನಿಯಮ ರಾಜ್ಯದಲ್ಲಿ ಲಕ್ಷಾಂತರ ಪೋಷಕರು ಆತಂಕ ಹಾಗೂ ಚಿಂತಿಸುವಂತೆ ಮಾಡಿತ್ತು. ಮಕ್ಕಳ ಈ ವಯೋಮಿತಿ ಗೊಂದಲಕ್ಕೆ ಸದ್ಯ ಫುಲ್ ಸ್ಟಾಪ್ ಹಾಕಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪೋಷಕರ ಆತಂಕವನ್ನು ದೂರ ಮಾಡಿದ್ದು, ಮಹತ್ವದ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೋಡಿ ಮಕ್ಕಳನ್ನು ಮೆಷಿನ್ ತರ ಓದಿಸಬೇಡಿ. ಸದ್ಯ ಯುಕೆಜಿ ಪಾಸ್ ಆಗಿರುವ ಮಕ್ಕಳು ನಮ್ಮ ರೂಲ್ಸ್ ಪ್ರಕಾರ 2 ತಿಂಗಳು ರಿಲ್ಯಾಕ್ಸ್ ಆಗಿರಬಹುದು. ಯಾಕಂದ್ರೆ ಈ ವರ್ಷ ಯುಕೆಜಿ ಪಾಸ್ ಆಗಿರುವ ಮಕ್ಕಳಿಗೆ ಜೂನ್ 1ಕ್ಕೆ 5 ವರ್ಷ 5 ತಿಂಗಳು ಆಗಿದ್ರೂ 1ನೇ ತರಗತಿಗೆ ದಾಖಲು ಮಾಡಬಹುದು ಎಂದಿದ್ದಾರೆ.

ಈ ವರ್ಷ 1ನೇ ತರಗತಿಯ ಶಾಲಾ ವಯೋಮಿತಿಯನ್ನು ರಾಜ್ಯ ಶಿಕ್ಷಣ ಇಲಾಖೆ ಸಡಿಲಗೊಳಿಸಿದೆ. 6 ವರ್ಷದ ಬದಲು 5 ವರ್ಷ 5 ತಿಂಗಳ ವಯೋಮಿತಿ ಫಿಕ್ಸ್ ಮಾಡಲಾಗಿದೆ. ಅಂದ್ರೆ ಮಕ್ಕಳು 1ನೇ ತರಗತಿ ಸೇರ್ಪಡೆಗೆ ಜೂನ್ 1ಕ್ಕೆ 5 ವರ್ಷ 5 ತಿಂಗಳು ಆಗಿದ್ರೆ ಸಾಕು. ನೀವು ನಿಮ್ಮ ಮಕ್ಕಳನ್ನು 1ನೇ ತರಗತಿ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ.

ಈ ವರ್ಷ 5 ವರ್ಷ 5 ತಿಂಗಳು ಕಂಪ್ಲೀಟ್ ಆಗಿರೋ ಮಗು 1ನೇ ತರಗತಿಗೆ ಅರ್ಹತೆ ಪಡೆಯಬಹುದು. ಮುಂದಿನ ವರ್ಷಕ್ಕೆ ಇದು ಅನ್ವಯ ಆಗೋದಿಲ್ಲ. SEP (ಸ್ಟೇಟ್ ಎಜುಕೇಶನ್ ಪಾಲಿಸಿ) ನಿಯಮದ ಪ್ರಕಾರ 1ನೇ ಕ್ಲಾಸ್ ಸೇರಬೇಕು ಅಂದ್ರೆ 5.5 ವರ್ಷ ಆಗಿರಲೇಬೇಕು. ಖಾಸಗಿ ಶಾಲೆಯಲ್ಲಿ ಮಕ್ಕಳು ಓದುತ್ತಿದ್ದರೆ ಎಲ್‌ಕೆಜಿ, ಯುಕೆಜಿ‌ ಆಗಿರಲೇಬೇಕು. ಮಗು ಸರ್ಕಾರಿ ಶಾಲೆಯಲ್ಲಿ ಓದಿದ್ರೆ ಅಂಗನವಾಡಿ ಮುಗಿಸಿರಬೇಕು. 1ನೇ ತರಗತಿಯ ಅಡ್ಮಿಷನ್ ಜೊತೆಗೆ LKG ಪ್ರವೇಶ ಪಡೆಯುವ ಮಕ್ಕಳಿಗೆ 4 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.