ದಿನ ಭವಿಷ್ಯ
12-06-2025

ದಿನ ಭವಿಷ್ಯ
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 3
೧.ಮೇಷ:
ಅಪೇಕ್ಷೆ ಇಲ್ಲದಿದ್ದರೂ ದೊಡ್ಡ ಜವಾಬ್ದಾರಿ. ಉದ್ಯಮದ ನೌಕರರಿಗೆ ಹೆಚ್ಚು ಅನುಕೂಲ. ಮಹಿಳೆಯರ ಸ್ವೋದ್ಯೋಗ ಯೋಜನೆಯಲ್ಲಿ ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಗಣೇಶ ಸ್ತೋತ್ರ, ದೇವೀಸ್ತೋತ್ರ, ಶನಿಮಹಾತ್ಮೆ ಓದಿ.
೨.ವೃಷಭ:
ಎಣಿಸಿದ್ದಕ್ಕಿಂತ ವೇಗವಾಗಿ ಕಾರ್ಯ ಮುನ್ನಡೆ. ಉದ್ಯೋಗದಲ್ಲಿ ಸಾಮಾನ್ಯ ಸ್ಥಿತಿ. ಕೃಷಿ ಕ್ಷೇತ್ರದಲ್ಲಿ ಕೈಗೊಂಡ ಪ್ರಯೋಗಗಳ ಮುಂದುವರಿಕೆ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುವ ಪ್ರಯತ್ನ ವಿಫಲ. ಸತ್ಯ ಹೇಳಿ ನಿಷ್ಢುರಕ್ಕೆ ಗುರಿಯಾಗುವ ಸಾಧ್ಯತೆ. ವ್ಯವಹಾರ ನಿಮಿತ್ತ ಅಂತಾರಾಜ್ಯ ಪ್ರವಾಸ.ಗಣಪತಿ ಅಥರ್ವಶೀರ್ಷ, ಮಹಾಲಕ್ಷ್ಮಿ ಅಷ್ಟಕ, ನವಗ್ರಹ ಸ್ತೋತ್ರ ಓದಿ.
೩ಮಿಥುನ:
ಉದ್ಯಮ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ. ವಸ್ತ್ರ , ಸಿದ್ಧ ಉಡುಪು ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ವ್ಯಾಪಾರಿಗಳಿಗೆ ಪೈಪೋಟಿಯಿಂದ ಲಾಭ. ಮನೆಯಲ್ಲಿ ಸಂತೋಷದ ವಾತಾವರಣ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೪.ಕರ್ಕಾಟಕ:
ಶೀಘ್ರ ಉತ್ಕರ್ಷ ಹೊಂದುವ ಬಯಕೆಗೆ ಪೋಷಣೆ. ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ. ಅಕಸ್ಮಾತ್ ಧನಾಗಮ ಯೋಗ.ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಲಾಭ.ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಕನಕಧಾರಾ ಸ್ತೋತ್ರ ಓದಿ.
೫.ಸಿಂಹ:
ಉದ್ಯೋಗ ಕ್ಷೇತ್ರದಲ್ಲಿ ಅಗ್ರಪಂಕ್ತಿಯ ಸ್ಥಾನಮಾನ. ಎಲ್ಲೆಯಿಲ್ಲದ ಉದ್ಯಮದ ಪ್ರಗತಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಕೃಷಿ ಕಾರ್ಮಿಕರಿಗೆ ಅನುಕೂಲದ ವಾತಾವರಣ. ಹಿರಿಯರು, ಗೃಹಿಣಿಯರು ಮಕ್ಕಳಿಗೆ ಸಮಾಧಾನದ ಅನುಭವ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೬.ಕನ್ಯಾ:
ವೃತ್ತಿಗೌರವ ಕಾಪಾಡಿಕೊಳ್ಳುವ ಪ್ರಯತ್ನ. ಸಹೋದ್ಯೋಗಿಗಳಿಂದ ಸಹಕಾರ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಉದ್ಯೋಗ ಸಂಬಂಧ ಸಣ್ಣ ಪ್ರಯಾಣ ಸಂಭವ. ಗಣೇಶ ಕವಚ, ಶಿವನಾಮಾವಲ್ಯಷ್ಟಕ, ನವಗ್ರಹ ಸ್ತೋತ್ರ ಓದಿ.
೭. ತುಲಾ:
ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ. ಅಸಹಾಯಕರಿಗೆ ಸಹಾಯ ಮಾಡುವ ಅವಕಾಶ. ಕುಲಗುರುಗಳ ದರ್ಶನಕ್ಕೆ ಪ್ರಯಾಣ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಹರ್ಷ.ಸಂಸಾರದಲ್ಲಿ. ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.
೮.ವೃಶ್ಚಿಕ:
ದೈಹಿಕ, ಮಾನಸಿಕ ಆರೋಗ್ಯಪಾಲನೆ .ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. . ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ನಿವಾರಣೆ. ಸರಕಾರಿ ನೌಕರರಿಗೆ ವರ್ಗಾವಣೆಯ ಭೀತಿ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳು ಯಶಸ್ಸಿನ ಪಥದಲ್ಲಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಕವಚ ಓದಿ.
೯.ಧನು:
ಸಂಪಾದನೆಯ ಮಾರ್ಗದಲ್ಲಿ ಮುಂದುವರಿಕೆ.ಉದ್ಯೋಗ ಸ್ಥಾನದಲ್ಲಿ ಸಣ್ಷ ಬದಲಾವಣೆ. ಸಣ್ಣ ಉದ್ಯಮ ಘಟಕ ಲಾಭ ಗಳಿಕೆ. ಖಾದಿ ಉಡುಪು ಉತ್ಪಾದಕರಿಗೆ ಲಾಭ. ಮಹಿಳೆಯರ ಉಸ್ತುವಾರಿಯ ಖಾದ್ಯಪದಾರ್ಥಗಳ ಘಟಕಕ್ಕೆ ದೊಡ್ಡ ಲಾಭ. ಗಣೇಶ ಕವಚ, ಸರಸ್ವತಿ ಸ್ತೋತ್ರ, ಗುರುಸ್ತೋತ್ರ ಓದಿ.
೧೦.ಮಕರ:
ವೃತ್ತಿಯಲ್ಲಿ ಪರಿಣತಿ ಹೆಚ್ಚಿ ಆತ್ಮವಿಶ್ವಾಸ ವೃದ್ಧಿ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಕ್ತಾಯ. ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವರಮಾನ ವೃದ್ಧಿ. ಪ್ರಾಪ್ತ ವಯಸ್ಕ ಕನ್ಯೆಯರಿಗೆ ವಿವಾಹ ಯೋಗ. ಗಣೇಶ ಕವಚ, ದೇವೀಕವಚ, ಹನುಮಾನ್ ಚಾಲೀಸಾ ಓದಿ.
ಉಉದ್ಅಗಹ
೧೧. ಕುಂಭ:.
ಉದ್ಯೋಗ ಸ್ಥಾನದಲ್ಲಿ ಅರ್ಧವಾರ್ಷಿಕ ಗುರಿ ಬಹುಪಾಲು ಮುಕ್ತಾಯ. ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮುದ್ರಣಸಾಮಗ್ರಿ, ಸ್ಟೇಶನರಿ ವಿತರಕರ ಮಾರುಕಟ್ಟೆ ಜಾಲ ವಿಸ್ತರಣೆ. ಟೈಲರಿಂಗ್ ವೃತ್ತಿ ಬಲ್ಲವರಿಗೆ ಉದ್ಯೋಗಾವಕಾಶ. ಸಮಾಜ ಸೇವಾ ಕಾರ್ಯಗಳಲ್ಲಿ ಭಾಗಿ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಹಲವು ಸೇವಾ ಕ್ಷೇತ್ರಗಳಿಂದ ಕರೆ. ಸರಕಾರಿ ಇಲಾಖೆಗಳವರಿಂದ ಸಹಕಾರ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ. ಗಣೇಶ ಕವಚ, ದೇವೀಸ್ತೋತ್ರ, ಶನಿಮಹಾತ್ಮೆ ಓದಿ.