ದಿನ ಭವಿಷ್ಯ

14-06-2025

Jun 14, 2025 - 05:30
Jun 13, 2025 - 15:40
ದಿನ ಭವಿಷ್ಯ

ದಿನ ಭವಿಷ್ಯ
                  ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 5.


೧. ಮೇಷ:
 ಇಂದಿನ ಸ್ಥಿತಿಯಲ್ಲಿ ಯಾವುದನ್ನೂ ಹೀಗೆಯೇ ಆದೀತೆಂದು ಹೇಳುವಂತಿಲ್ಲ. ಉದ್ಯೋಗ ಸ್ಥಾನದಲ್ಲಿ  ಸಣ್ಣ ತಕರಾರು. ಉದ್ಯಮದ  ಉತ್ಪನ್ನಗಳ ಮಾರಾಟ ವ್ಯವಸ್ಥೆ ವಿಸ್ತರಣೆ. ಸಾಂಸಾರಿಕ ಜೀವನದಲ್ಲಿ ಸೌಖ್ಯ. ಗೃಹಿಣಿಯರ ಸ್ವೋದ್ಯೋಗಕ್ಕೆ ಶುಭದಿನ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.

 

೨.ವೃಷಭ:


  ಬತ್ತದ  ಉತ್ಸಾಹದ ಚಿಲುಮೆಯಾಗಿದ್ದೀರಿ. ಏಕಾಗ್ರಚಿತ್ತದ  ಪ್ರಯತ್ನಕ್ಕೆ  ಜಯ. ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ.  ಮನೆಯಲ್ಲಿ ಎಲ್ಲರಿಗೂ ಆರೋಗ್ಯ ವೃದ್ಧಿ, ನೆಮ್ಮದಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೩ಮಿಥುನ:

ಹಿಡಿದ ಕಾರ್ಯವನ್ನು ಮುಗಿಸಿಯೇ ಬಿಡುವ ಉತ್ಸಾಹ. ಗೃಹೋದ್ಯಮದ ಉತ್ಪನ್ನಗಳಿಗೆ ಗ್ರಾಹಕರ ಸಂಖ್ಯೆ ವೃದ್ಧಿ. ಕೃಷಿಯಲ್ಲಿ ವೈವಿಧ್ಯ ಕಾಯ್ದುಕೊಳ್ಳುವ ಪ್ರಯತ್ನ. ಹಿರಿಯರ, ಗೃಹಿಣಿಯರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ. ಆಧ್ಯಾತ್ಮಿಕ ಸಾಧನೆಯಲ್ಲಿ ಮುನ್ನಡೆ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಶಿವಕವಚ, ನವಗ್ರಹ ಮಂಗಲಾಷ್ಟಕ ಓದಿ.

೪. ಕರ್ಕಾಟಕ:

 ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ. ಉದ್ಯಮದ ಸರ್ವತೋಮುಖ ಅಭಿವೃದ್ಧಿ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿಗಳು, ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂಭ್ರಮ. ಬಂಧುಗಳ ಜೊತೆಯಲ್ಲಿ ದೇವದರ್ಶನ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಕವಚ, ಕನಕಧಾರಾ ಸ್ತೋತ್ರ ಓದಿ.


೫.ಸಿಂಹ:

ಉದ್ಯೋಗ ಸ್ಥಾನದ ವಾತಾವರಣದಲ್ಲಿ ವ್ಯತ್ಯಾಸ ಇಲ್ಲ. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ನಿರೀಕ್ಷೆ. ಭೂ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ಆಪ್ತ ಸಲಹೆಯಿಂದ ದಂಪತಿ ವಿರಸ ದೂರ. ಭೂವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ. ಸಂಕಷ್ಟನಾಶನ ಗಣೇಶ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೬.ಕನ್ಯಾ:

ಅಧಿಕಾರಿ ವೃಂದ ಹಾಗೂ ಸಹಚರರ ಪ್ರೋತ್ಸಾಹ.  ಸಾರ್ವಜನಿಕ ಸಂಪರ್ಕದಲ್ಲಿ ಒಳ್ಳೆಯ ಹೆಸರು. ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ಜಾಲ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ  ನಿರೀಕ್ಷೆಗಿಂತ ಅಧಿಕ ಲಾಭ. ಸುಶಿಕ್ಷಿತ
ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೭. ತುಲಾ:

ಇಷ್ಟದೇವರ ಪೂರ್ಣಾನುಗ್ರಹ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ಹೊಸಬರ ಆಗಮನ. ಅಧ್ಯಾಪಕ ವೃತ್ತಿಯವರಿಗೆ ಹೆಚ್ಚಿನ ಜವಾಬ್ದಾರಿ. ಸಣ್ಣ ವ್ಯಾಪಾರಿಗಳಿಗೆ ನಿರೀಕ್ಷೆಗೆ ತಕ್ಕ ಲಾಭ. ವಿವಾದದಲ್ಲಿ ಸಿಲುಕಿಸಲು ಹಿತಶತ್ರುಗಳ ಪ್ರಯತ್ನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

೮.ವೃಶ್ಚಿಕ:

ಯಾವುದೇ ಪರಿಸ್ಥಿತಿಯಲ್ಲಿ ಉದ್ವೇಗಕ್ಕೆ ಒಳಗಾಗಬೇಡಿ. ಪ್ರಾಪಂಚಿಕ ಸುಖದಲ್ಲಿ ಕೊರತೆ ಇಲ್ಲ. ಉದ್ಯಮದ ನೌಕರರ ಪೂರ್ಣ ಸಹಕಾರ. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ವಿನಿಯೋಗ. ಮನೆಯಲ್ಲಿ ಸಮಾಧಾನದ ವಾತಾವರಣ. ಗಣೇಶ ಕವಚ, ರಾಮ ಭುಜಂಗಪ್ರಯಾತ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೯.ಧನು:

ದೀರ್ಘ ತಪಸ್ಸಿನ ಬಳಿಕ ಒಲಿದ ಲಕ್ಷ್ಮಿ. ಉಳಿತಾಯ ಏಜಂಟರಿಗೆ ಶುಭದಿನ.ಉದ್ಯಮ ಕ್ಷೇತ್ರದಲ್ಲಿ ಪೈಪೋಟಿ. ಸರಕಾರಿ ಕಚೇರಿಗಳಲ್ಲಿ ಸಕಾರಾತ್ಮಕ  ಸ್ಪಂದನ. ಕೃಷ್ಯುತ್ಪಾದನೆ‌ ಮಾರಾಟದಲ್ಲಿ ಲಾಭ. ಸಂಸಾರದಲ್ಲಿ ಸಾಮರಸ್ಯದ ವಾತಾವರಣ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

೧೦.ಮಕರ:

ಅನಿರೀಕ್ಷಿತ ಧನಲಾಭ.  ಹೊಸ ಉದ್ಯೋಗ ಅನ್ವೇಷಣೆ ಮುಂದುವರಿಕೆ. ಹಿರಿಯರ ಆವಶ್ಯಕತೆಗಳನ್ನು ಗಮನಿಸಿ.ವಸ್ತ್ರ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಮಹಿಳೆಯರ ಸ್ವೋದ್ಯೋಗ ಯೋಜನೆಗೆ ಮುನ್ನಡೆ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಉಉದ್ಅಗಹ

 
೧೧. ಕುಂಭ:

ಸಂತೃಪ್ತ ಮನೋಭಾವದಲ್ಲಿ ದಿನಾರಂಭ
ಉದ್ಯಮದಲ್ಲಿ ಪ್ರಚಂಡ ಮುನ್ನಡೆ. ಉದ್ಯೋಗ ಕ್ಷೇತ್ರದಲ್ಲಿ ಗುರುಸ್ಥಾನ ಭದ್ರ.ಮುದ್ರಣ ಸಾಮಗ್ರಿ, ಸ್ಟೇಶನರಿ, ವಸ್ತ್ರ, ಆಭರಣ ಇತ್ಯಾದಿಗಳಿಗೆ ಅಧಿಕ‌ ಬೇಡಿಕೆ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಗೆ ಪ್ರಾಶಸ್ತ್ಯ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.


೧೨. ಮೀನ:

 ವ್ಯವಹಾರಗಳಲ್ಲಿ ಸ್ಥಿರವಾದ ಪ್ರಗತಿ. ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಸರಕಾರಿ ಅಧಿಕಾರಿಗಳು ಮತ್ತು ನೌಕರರಿಂದ ಸಹಕಾರ.ಲೇವಾದೇವಿ ವ್ಯವಹಾರಲ್ಲಿ ತೊಂದರೆ. ಸಾಂಸಾರಿಕ ಜೀವನದಲ್ಲಿ ಹರ್ಷ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.