ದಿನ ಭವಿಷ್ಯ
02-07-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 2
೧.ಮೇಷ:
ಸಾವಧಾನದಿಂದ ಕಾರ್ಯಕ್ಷೇತ್ರದಲ್ಲಿ ಮುಂದುವರಿಯಿರಿ. ಉದ್ಯೋಗ ಸ್ಥಾನದಲ್ಲಿ ತೋರುವ ಕಾರ್ಯ ವೈಖರಿಗೆ ಪ್ರಶಂಸೆ. ಸ್ವಂತ ಉದ್ಯಮ ದಾಖಲೆಯ ಪ್ರಗತಿಯಲ್ಲಿ. ಉದ್ಯೋಗಾಸಕ್ತರಿಗೆ ಅವಕಾಶ ಲಭ್ಯ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
೨.ವೃಷಭ:
ಮಹತ್ವಾಕಾಂಕ್ಷೆಯಲ್ಲಿ ಕಾರ್ಯಾರಂಭ. ಉದ್ಯೋಗ ಸ್ಥಾನದಲ್ಲಿ ಹೊಸ ವಿಭಾಗ ಆರಂಭ. ಸ್ವಂತ ಉದ್ಯಮ ಪ್ರಗತಿ ಪಥದಲ್ಲಿ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಬಿಡುವಿಲ್ಲದಷ್ಟು ವ್ಯಾಪಾರ. ಯಂತ್ರೋಪಕರಣ ಮಾರಾಟಗಾರರಿಗೆ ಗ್ರಾಹಕರ ಸಂಖ್ಯೆ ವೃದ್ಧಿ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಕವಚ, ಆದಿತ್ಯ ಹೃದಯ ಓದಿ.
೩. ಮಿಥುನ:
ಪ್ರಿಯವಾದುದನ್ನು ಬಿಟ್ಟು ಹಿತವಾದುದನ್ನು ಆರಿಸಿಕೊಳ್ಳಿ. ಉದ್ಯೋಗದಲ್ಲಿ ಪ್ರತಿಭೆ, ಕಾರ್ಯದಕ್ಷತೆಗೆ ಗೌರವ. ದೂರದಲ್ಲಿರುವ ಕುಟುಂಬದ ಹಿತೈಷಿಯ ಭೇಟಿ. ಸ್ವಂತ ಉದ್ಯಮದ ಪ್ರಗತಿ ಸ್ಥಿರ. ಅವಿವಾಹಿತರಿಗೋಸ್ಕರ ವರ- ವಧು ಅನ್ವೇಷಣೆ ಮುಂದುವರಿಕೆ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.
೪.ಕರ್ಕಾಟಕ:
ಉದ್ಯೋಗ ಕ್ಷೇತ್ರದ ಆತಂಕ ದೂರ. ಸರಕಾರಿ ನೌಕರರಿಗೆ ವರ್ಗಾವಣೆಯ ಸೂಚನೆ. ಹೊಸ ಉದ್ಯಮ ಆರಂಭಿಸಲು ಸಮಾಲೋಚನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೫_ಸಿಂಹ:
ಉದ್ಯೋಗದಲ್ಲಿ ಸ್ಥಾನಕ್ಕೆ ತಕ್ಕ ಪ್ರತಿಫಲ. ಉದ್ಯಮ ಸ್ಥಳದಲ್ಲಿ ದೇವತಾ ಕಾರ್ಯ. ನೆಂಟರ ಮನೆಯಲ್ಲಿ ಶುಭಕಾರ್ಯ. ಕೌಟುಂಬಿಕ ವ್ಯಾಜ್ಯ ಮಾತುಕತೆಯ ಮೂಲಕ ಪರಿಹಾರ. ಹಿರಿಯರ ಆರೋಗ್ಯ ಪ್ರಾಕೃತಿಕ ಚಿಕಿತ್ಸೆಯಿಂದ ವೃದ್ಧಿ. ಸಂಕಷ್ಟನಾಶನ ಗಣೇಶ ಸ್ತೋತ್ರ ದಾರಿದ್ರ್ಯದಹನ ಶಿವಸ್ತೋತ್ರ, ದೇವೀಸ್ತೋತ್ರ ಓದಿ.
೬.ಕನ್ಯಾ:
ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ. ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಹೊಲಿಗೆ ಕೆಲಸ ಬಲ್ಲವರಿಗೆ ಉದ್ಯೋಗಾವಕಾಶ. ಹಿರಿಯರು ದಂಪತಿಗಳ ನಡುವೆ ಅನುರಾಗ ವೃದ್ಧಿ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ಗೋತ್ರ ಓದಿ.
೭ತುಲಾ:
ಉದ್ಯೋಗದಲ್ಲಿ ಸಂತೃಪ್ತಿಯ ಅನುಭವ. ಉದ್ಯಮ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಉದ್ಯೋಗದ ನಿಮಿತ್ತ ಸಣ್ಣ ಪ್ರವಾಸ. ಮನೆಮಂದಿಯೆಲ್ಲರ ಆರೋಗ್ಯ ಉತ್ತಮ. ಗಣೇಶ ಸ್ತೋತ್ರ, ವೆಂಕಟೇಶ್ವರ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೮.ವೃಶ್ಚಿಕ:
ನಾವೇ ಭಾಗ್ಯವಂತರೆಂಬ ಭಾವನೆಯಿಂದ ಜಯ. ಉದ್ಯೋಗದಲ್ಲಿ ಗೌರವದ ಸ್ಥಾನ. ಉದ್ಯಮದಲ್ಲಿ ಹೊಸ ವಿಭಾಗ ಆರಂಭ. ಯಂತ್ರೋಕರಣ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಯ ಕಾಲ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಲಾಭದಾಯಕವಾಗಿ ಮುನ್ನಡೆ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಸ್ತೋತ್ರ, ಸೂರ್ಯಮಂಡಲ ಸ್ತೋತ್ರ ಓದಿ.
೯. ಧನು:
ಅನೇಕ ದಿನಗಳಿಂದ ಮಾಡುತ್ತಿದ್ದ ಪ್ರಯತ್ನಕ್ಕೆ ಫಲ ಲಭ್ಯ. ಉದ್ಯೋಗದಲ್ಲಿ ಹೊಸ ಬಗೆಯ ಹೊಣೆಗಾರಿಕೆ. ಆದಾಯ ವೃದ್ಧಿ ಯೋಜನೆಗಳ ಕುರಿತು ಸಹಚರರೊಡನೆ ಸಮಾಲೋಚನೆ. ಮನೆ ನವೀಕರಣಕ್ಕೆ ಸಣ್ಣಮಟ್ಟದ ಕಾರ್ಯಾರಂಭ. ತೋಟಗಾರಿಕೆಯಲ್ಲಿ ಪ್ರಗತಿ. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ಗುರುಸ್ತೋತ್ರ ಓದಿ.
೧೦. ಮಕರ:
ಹೊಸ ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ಸು ಪ್ರಾಪ್ತಿ. ಉದ್ಯಮ ಸಂಸ್ಥೆಗೆ ಗಣ್ಯರ ಭೇಟಿ. ವಧೂ ವರಾನ್ವೇಷಣೆಯಲ್ಲಿ ನಿರತರಾಗಿರುವವರಿಗೆ ಶುಭ ಸಮಾಚಾರ. ಸಣ್ಣ ಕೃಷಿಭೂಮಿ ಖರೀದಿಸುವ ಪ್ರಯತ್ನ ಯಶಸ್ವಿ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ ಹನುಮಾನ್ ಚಾಲೀಸಾ ಓದಿ.
೧೧.ಕುಂಭ:
ಅರಸಿ ಬರುವ ಹೊಸ ಜವಾಬ್ದಾರಿಗಳು. ಉದ್ಯಮ ನಿರ್ವಹಣೆ ನಿರಾತಂಕ. ಮುದ್ರಣ ಸಾಮಗ್ರಿಗಳ ಮಾರಾಟ ವೃದ್ಧಿ. ಸೇವಾಕಾರ್ಯಗಳಿಗೆ ಮನೆಮಂದಿಯ ಸಹಕಾರ. ಹಿರಿಯರ, ಗೃಹಿಣಿಯರ ಹಾಗೂ ಮಕ್ಕಳ ಆರೋಗ್ಯ ಉತ್ತಮ. ಗಣಪತಿ ಅಥರ್ವಶೀರ್ಷ, ಕನಕಧಾರಾ ಸ್ತೋತ್ರ, ಶನಿಮಹಾತ್ಮೆಓದಿ.
೧೨.ಮೀನ:
ಸಹೋದ್ಯೋಗಿಗಳ ಉತ್ತಮ ಸಹಕಾರ. ಸರಕಾರಿ ಅಧಿಕಾರಿಗಳ ಪೂರ್ಣ ಸಹಾಯ. ವಿದ್ಯಾರ್ಥಿಗಳಿಗೆ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ. ಉದ್ಯೋಗ ಅರಸುತ್ತಿರುವವರಿಗೆ ಸ್ವಾವಲಂಬಿಗಳಾಗಲು ಮಾರ್ಗದರ್ಶನ. ಗಣೇಶ ಜವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.