ದಿನ ಭವಿಷ್ಯ
21-07-2025

ಅದೃಷ್ಟ ಸಂಖ್ಯೆ 3
ಮೇಷ:
ಸರಳ ವಿಧಾನದಲ್ಲಿ ಕಠಿನ ಸಮಸ್ಯೆ ನಿವಾರಣೆ. ಹೆಚ್ಚುವರಿ ಆದಾಯದ ಮಾರ್ಗ ಗೋಚರ. ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ. ಸೇವಾಕ್ಷೇತ್ರಗಳಿಗೆ ಪ್ರವೇಶದಿಂದ ಕೀರ್ತಿ. ಗಣೇಶ ಪಂಚರತ್ನ, ಶಿವಕವಚ, ಶನಿಮಹಾತ್ಮೆ ಓದಿ.
೨.ವೃಷಭ:
ಹೆಚ್ಚು ಶ್ರಮವಿಲ್ಲದೆ ಕಾರ್ಯಸಾಧನೆ. ಸಾಮಾಜಿಕ ಕಾರ್ಯಗಳಿಗೆ ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಕೇಟರಿಂಗ್ ವ್ಯವಹಾರಸ್ಥರಿಗೆ ಲಾಭ. ವ್ಯವಹಾರಾರ್ಥ ಊರೊಳಗೆ ತಿರುಗಾಟ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೩ಮಿಥುನ:
ವಿನಯ, ವಿಧೇಯತೆಯಿಂದ ಯಶಸ್ಸು. ಉದ್ಯಮಗಳ ಪಾಲಿಗೆ ಶುಭದಿನ. ಪ್ರಾಚೀನ ವಿದ್ಯೆಗಳ ಸಾಧನೆಯಲ್ಲಿ ಮುನ್ನಡೆ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ. ಸ್ವಾವಲಂಬಿ ಜೀವನಕ್ಕೆ ಅನುಕೂಲ ವಾತಾವರಣ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣುವಿನ ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.
೪. ಕರ್ಕಾಟಕ:
ಚೆನ್ನಾಗಿ ವಿಮರ್ಶಿಸಿ ಕಾರ್ಯಕ್ಕೆ ಹೊರಡಿ. ಸಣ್ಣ ಉದ್ಯಮಗಳಿಗೆ ಕಾನೂನು ತೊಂದರೆ. ವ್ಯಾಪಾರಿಗಳಿಗೆ ಹಿತಶತ್ರುಗಳ ಬಾಧೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಸಣ್ಣ ಪ್ರಮಾಣದ ಕೃಷಿಕಾರ್ಯದಲ್ಲಿ ಸಂತೃಪ್ತಿ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
೫.ಸಿಂಹ:
ಉದ್ಯೋಗ ಸ್ಥಾನದಲ್ಲಿ ವಿಶಿಷ್ಡ ಮನ್ನಣೆಯ ಯೋಗ. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ. ಪಾಲುದಾರಿಕೆ ವ್ಯವಹಾರ ಶುಭಪ್ರದ. ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೬.ಕನ್ಯಾ:
ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ನೆನಪಿರಲಿ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ. ಸಟ್ಟಾ ವ್ಯವಹಾರದಿಂದ ದೂರವಿರಿ. ಪಾಲುದಾರಿಕೆ ಉದ್ಯಮದಲ್ಲಿ ನಿಧಾನ ಪ್ರಗತಿ. ಹಿರಿಯರ ಆರೋಗ್ಯ ಸುಧಾರಣೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೭. ತುಲಾ:
ಉದ್ಯೋಗ ಕ್ಷೇತ್ರದಲ್ಲಿ ಸಂತೃಪ್ತಿಯ ದಿನ. ಗಣೇಶ, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಭೇಟಿ. ದ್ವಿಚಕ್ರ ವಾಹನ ಚಾಲಕರು ಎಚ್ಚರ. ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಪ್ರಚಾರ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯದ ವಾತಾವರಣ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಕವಚ ಓದಿ.
೮.ವೃಶ್ಚಿಕ:
ಅಧಿಕ ಕೆಲಸ ಮಾಡಲು ಉತ್ತೇಜನ. ಸರಕಾರಿ ಉದ್ಯೋಗಿಗಳಿಗೆ ಕಿರಿಕಿರಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅದೃಷ್ಟ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ಮಕ್ಕಳ ಕಲಿಕೆ ಆಸಕ್ತಿ ಹೆಚ್ಚಿಸಲು ಪ್ರಯತ್ನ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.
೯.ಧನು:
ಸಹೋದ್ಯೋಗಿಗಳಿಂದ ಪೂರ್ಣ ಸಹಕಾರ. ಕುಟುಂಬದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಉದ್ಯೋಗಾಸಕ್ತ ಶಿಕ್ಷಿತರಿಗೆ ಸದವಕಾಶ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ. ವ್ಯವಹಾರದ ಸಂಬಂಧ ಪ್ರಮುಖ ವ್ಯಕ್ತಿಯ ಭೇಟಿ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೧೦.ಮಕರ:
ಚೆನ್ನಾಗಿ ಆಲೋಚಿಸಿ ಮುಂದಡಿಯಿಡಿ. ವಸ್ತ್ರ, ಆಭರಣ, ಪಾದರಕ್ಷೆ, ಶೋಕಿ ವಸ್ತು ವ್ಯಾಪಾರಿಗಳಿಗೆ ಹೇರಳ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ. ಹಳೆಯ ಒಡನಾಡಿಗಳ ಸಂಪರ್ಕ. ಹಿರಿಯರ ಆರೋಗ್ಯದ ಕಾಳಜಿ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:.
ಸ್ವಂತ ವ್ಯವಹಾರಸ್ಥರಿಗೆ ಸುದಿನ. ಗ್ರಾಹಕರ ಅಪೇಕ್ಷೆಗೆ ಸರಿಯಾಗಿ ಸ್ಪಂದನ. ಸಮಾಜ ಸೇವಾಕಾರ್ಯಗಳಿಗೆ ಮತ್ತಷ್ಟು ಅವಕಾಶಗಳು. ಟೈಲರಿಂಗ್, ಕರಕುಶಲ ಕೆಲಸ ಬಲ್ಲವರಿಗೆ ಉದ್ಯೋಗಾವಕಾಶ. ದೇವತಾ ಕಾರ್ಯದಲ್ಲಿ ಭಾಗಿ.
ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೧೨. ಮೀನ:
ಉದ್ಯೋಗ ಸ್ಥಾನದಲ್ಲಿ ವಿಶಿಷ್ಟ ವಾತಾವರಣ. ಸರಕಾರಿ ಕಾರ್ಯಾಲಯಗಳಲ್ಲಿ ಸಕಾರಾತ್ಮಕ ಸ್ಪಂದನ. ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ರಂಗ ಸಜ್ಜಿಕೆ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ. ವ್ಯವಹಾರ ಸಂಬಂಧ ದೂರ ಪ್ರಯಾಣ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ,ಶನಿಮಹಾತ್ಮೆ ಓದಿ.