ದಿನ ಭವಿಷ್ಯ.

24-08-2025

Aug 25, 2025 - 12:02
ದಿನ ಭವಿಷ್ಯ.

               ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 6


೧.ಮೇಷ:

    ಇಂದಿನ  ಕುರಿತು  ಮಾತ್ರ ಯೋಚಿಸಿ ಆರಾಮವಾಗಿರಿ.  ದಿನವಿಡೀ ಹಲವಾರು  ಕೆಲಸ ಕಾರ್ಯಗಳು. ಸಾಮಾಜಿಕ ವ್ಯವಹಾರಗಳ ಚಿಂತೆ.  ಬಂಧುವರ್ಗದವರಿಂದ ಶುಭ ಸಮಾಚಾರ. ಸೇವಾ ಕಾರ್ಯಕ್ರಮಗಳಲ್ಲಿ ಭಾಗಿ. ಗಣೇಶ ಕವಚ, ದೇವೀಕವಚ, ಆದಿತ್ಯ ಹೃದಯ ಓದಿ.

೨. ವೃಷಭ:

ಅನೇಕ    ಸಂತೋಷದ ಘಟನೆಗಳು ನಡೆಯುವ ದಿನ. ಸಹೋದ್ಯೋಗಿಗಳೊಡನೆ  ಕೌಟುಂಬಿಕ ಸಮ್ಮಿಲನ .ಉದ್ಯಮ ಸ್ಥಾನದಲ್ಲಿ  ಹೊಸ ವ್ಯವಸ್ಥೆಗೆ ಪ್ರಯತ್ನ. ವಿದೇಶದಲ್ಲಿರುವ ಬಂಧುಗಳೊಡನೆ ದೂರವಾಣಿ ಸಂಭಾಷಣೆ. ಸಾಮಾಜಿಕ ಕಾರ್ಯಕ್ಕೆ ಪ್ರೋತ್ಸಾಹ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.

೩.ಮಿಥುನ:

ಆಪತ್ತುಗಳಿಂದ ವಿಮೋಚನೆ. ಮನೋಬಲ ವರ್ಧನೆಗೆ ಆಪ್ತರ ಸಹಾಯ.ಧಾರ್ಮಿಕ ನಾಯಕರ ಭೇಟಿ. ಉದ್ಯೋಗಾನ್ವೇಷಿಗಳಿಗೆ ಶುಭಕಾಲ. ಊರಿನ ಶಿವಾಲಯಕ್ಕೆ ಸಂಸಾರ ಸಹಿತ ಸಂದರ್ಶನ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.

೪.ಕರ್ಕಾಟಕ:

  ಸಾಮಾಜಿಕ ರಂಗದ ಚಟುವಟಿಕೆಗಳಲ್ಲಿ ಆಸಕ್ತಿ. ಸಿವಿಲ್ ಎಂಜಿನಿಯರರಿಗೆ ಕೆಲಸದ ಒತ್ತಡ. ವಸ್ತ್ರ ಹಾಗೂ ಖಾದ್ಯವಸ್ತು ವ್ಯಾಪಾರಿಗಳಿಗೆ ಲಾಭ. ಊರಿನ ದೇವಾಲಯಕ್ಕೆ ಭೇಟಿ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ
ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ,  ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೫.ಸಿಂಹ:

ವಿರಾಮದ ದಿನವಾದರೂ ಸಹಚರರನ್ನು ಕ್ರಿಯೆಯಲ್ಲಿ ತೊಡಗಿಸುವ ಹುಮ್ಮಸ್ಸು.  ಲೇವಾದೇವಿ ವ್ಯವಹಾರದಲ್ಲಿ ಅತ್ಯಲ್ಪ ಲಾಭ. ಅವಿವಾಹಿತರಿಗೆ  ಶೀಘ್ರ ವಿವಾಹ. ಹಿರಿಯರ , ಗೃಹಿಣಿಯರ ಆರೋಗ್ಯ ಉತ್ತಮ. ಮದುವೆ ಮಾತುಕತೆಗಾಗಿ ಪ್ರಯಾಣ. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಅನ್ನಪೂರ್ಣಾ ಅಷ್ಟಕ ಓದಿ.

೬.ಕನ್ಯಾ:

  ಚಿತ್ತಚಾಂಚಲ್ಯದಿಂದ ಮುಕ್ತರಾಗಿರಿ. ಉದ್ಯೋಗ ಬದಲಾವಣೆ ಸಂಭವ. ಪಶುಪಾಲನೆ, ಹೈನುಗಾರಿಕೆಯಿಂದ ಪ್ರಯೋಜನ‌. ದಂಪತಿಗಳ ನಡುವೆ ಸಾಮರಸ್ಯ ವೃದ್ಧಿ. ಎಲ್ಲರಿಗೂ ಆನಂದ, ಆರೋಗ್ಯಗಳ ಅನುಭವ. ಗಣಪತಿ ಅಥರ್ವಶೀರ್ಷ,  ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ ಲಕ್ಷ್ಮೀಸ್ತೋತ್ರ ಓದಿ., 

೭. ತುಲಾ:
  ಹಿರಿಯರಿಂದ ಸಕಾಲದಲ್ಲಿ ಧೈರ್ಯ ವಚನ. ಆಪ್ತಮಿತ್ರರ ಭೇಟಿಯಿಂದ ಸಮಾಧಾನ. ಗೃಹೋದ್ಯಮದ ಕ್ಷೇತ್ರಕ್ಕೆ ಪದಾರ್ಪಣೆಗೈಯುವ ನಿರ್ಧಾರ.  ಭಾವನೆಗಳನ್ನು ಬರೆದಿಡುವುದರಿಂದ ಮನಸ್ಸು ಹಗುರ.
ವಿನಾಯಕನ ಕ್ಷೇತ್ರ ಸಂದರ್ಶನ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೮.ವೃಶ್ಚಿಕ:

 ಸಾರ್ಥಕ ಬದುಕಿನ ಆನಂದ‌.  ಬಂಧುವರ್ಗದವರಿಗೆ  ಸಕಾಲಿಕ‌ ಸಹಾಯ. ಪಿತ್ರಾರ್ಜಿತ ಕೃಷಿಭೂಮಿಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ.ರೋಗಿಗಳಿಗೆ ಸಾಂತ್ವನ ಹೇಳಲು ಆಸ್ಪತ್ರೆಗೆ‌ ಭೇಟಿ. ಸಂಸಾರದಲ್ಲಿ ಎಲ್ಲರಿಗೂ ಆರೋಗ್ಯ ಭಾಗ್ಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.


೯ಧನು:

  ಕ್ರಿಯಾಶೀಲತೆಯ ಮೂಲಕ ಯಶಃಪ್ರಾಪ್ತಿ. ಪರೋಪಕಾರ ಗುಣದಿಂದ  ಸಮಾಜದಲ್ಲಿ ಗೌರವದ ಸ್ಥಾನ. ಒಡೆದ ಮನಸ್ಸುಗಳನ್ನು ಬೆಸೆದ ತೃಪ್ತಿ.  ಆಸ್ಪತ್ರೆ, ಅನಾಥಾಶ್ರಮಗಳಿಗೆ ಭೇಟಿ, ನೊಂದವರಿಗೆ ಸಾಂತ್ವನ‌. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ನರಸಿಂಹ ಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.

೧೦.ಮಕರ.

    ಉದ್ಯೋಗದ ಜಂಜಾಟಗಳಿಗೆ ವಿರಾಮ. ಹೊಸ ಉದ್ಯೋಗ ಅರಸುವ ಕಾರ್ಯ ಮುಂದುವರಿಕೆ. ಪ್ರಾಚ್ಯವಿದ್ಯಾ ಕಲಿಕೆಗೆ ಪ್ರಯತ್ನ. ತಾಯಿಯ ಕಡೆಯ ಬಂಧುಗಳ  ಆಗಮನ. ವಸ್ತ್ರ, ಆಭರಣ, ಶೋಕಿವಸ್ತು ವ್ಯಾಪಾರಿಗಳಿಗೆ ಲಾಭ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

  ಉದ್ಯಮದ  ಹೊಸ ಉತ್ಪನ್ನಗಳ ಪ್ರಚಾರಕ್ಕೆ ಕ್ರಮ. ಬರಬೇಕಾದ ಬಾಕಿ ಕೈಸೇರಿದ ಸಮಾಧಾನ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ  ಲಾಭ. ವಿವಿಧ ಬಗೆಯ ಸಮಾಜ ಸೇವಾ ಕಾರ್ಯಗಳ ಮುಂದುವರಿಕೆ. ಅವಿವಾಹಿತರಿಗೆ ವಿವಾಹ ಯೋಗ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

೧೨.ಮೀನ:

ಸಂತೃಪ್ತಿಯೊಂದಿಗೆ ವಿರಾಮ ಆಚರಣೆ. ಸಮಾಜದ ಹಿರಿಯರಿಗೆ ಗೌರವ ಸಮರ್ಪಣೆ. ಕೃಷಿಭೂಮಿಯಲ್ಲಿ ಕೈಗೊಂಡ ಪ್ರಯೋಗ ಪ್ರಗತಿಯಲ್ಲಿ. ಕುಟುಂಬದ ವ್ಯವಹಾರದ ಸಂಬಂಧ ದೂರ ಪ್ರಯಾಣ ಸಾಧ್ಯ. ಅಸಹಾಯಕರ  ಸಹಾಯದ ಕರೆಗೆ ಸ್ಪಂದನ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.