ದಿನ ಭವಿಷ್ಯ
27-08-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 9.
೧.ಮೇಷ:
ಭಕ್ತರ ಪ್ರಾರ್ಥನೆಗೆ ವಿನಾಯಕ ಒಲಿಯುವ ದಿನ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆ. ಉದ್ಯಮ, ವ್ಯವಹಾರದಲ್ಲಿ ಉತ್ತಮ ಲಾಭ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ವ್ಯವಹಾರಾರ್ಥ ಸಣ್ಣ ಪ್ರಯಾಣ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.
೨.ವೃಷಭ:
ಇಷ್ಟಾರ್ಥಸಿದ್ಧಿಗಾಗಿ ವಿನಾಯಕನ ಆರಾಧನೆ. ನಿರೀಕ್ಷಿತ ಪದೋನ್ನತಿ ಸಂಭವ.ಸರಕಾರಿ ಅಧಿಕಾರಿಗಳಿಗೆ ಅಪೇಕ್ಷಿತ ಸ್ಥಾನಕ್ಕೆ ವರ್ಗಾವಣೆ. ಉದ್ಯಮದ ಉತ್ಪನ್ನಗಳಿಗೆ ಒಳ್ಳೆಯ ಹೆಸರು. ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೩. ಮಿಥುನ:
ಭಗವದನುಗ್ರಹಕ್ಕಾಗಿ ಪ್ರಾರ್ಥನೆ. ಸಹೋದ್ಯೋಗಿಗಳಿಗೆ ಸಹಾಯ ಮಾಡಿ ಹರ್ಷ. ಉದ್ಯಮಕ್ಕೆ ಎದುರಾಳಿಗಳಿಂದ ಸಹಜ ಸ್ಪರ್ಧೆ. ಪಿತ್ರಾರ್ಜಿತ ಆಸ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಸಫಲ. ದೇವತಾರ್ಚನೆ, ಧ್ಯಾನ, ಸತ್ಸಂಗದಲ್ಲಿ ಆಸಕ್ತಿ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.
೪.ಕರ್ಕಾಟಕ:
ಸತತ ಸಾಧನೆಯಿಂದ ದೈವಾನುಗ್ರಹ ಪ್ರಾಪ್ತಿ. ಉದ್ಯಮಕ್ಕೆ ಕಾನೂನು ಸಮಸ್ಯೆಗಳಿಂದ ಮುಕ್ತಿ. ನೌಕರರ ಯೋಗಕ್ಷೇಮಕ್ಕೆ ವಿಶೇಷ ಯೋಜನೆ.ಖಾದಿ, ಗ್ರಾಮೋದ್ಯೋಗ ಬೆಳೆಸಲು ಆಸಕ್ತಿ. ದೇವತಾರಾಧನೆ, ಸದ್ಗ್ರಂಥ ಪಾರಾಯಣ, ಧ್ಯಾನ, ಭಜನೆ, ಸತ್ಸಂಗಗಳ ಕಡೆಗೆ ಒಲವು.
೫ ಸಿಂಹ:
ಬದುಕಿನಲ್ಲಿ ಹೊಸ ತಿರುವಿನ ಸೂಚನೆ. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಪಶ್ಚಿಮದ ಕಡೆಯಿಂದ ಶುಭ ಸಮಾಚಾರ. ವಸ್ತ್ರ, ಪಾದರಕ್ಷೆ ವ್ಯಾಪಾರಿಗಳಿಗೆ ಶುಕ್ರದೆಶೆ. ಸಾಮಾಜಿಕ ಪಿಡುಗುಗಳ ನಿವಾರಣೆಗೆ ಸಹಕಾರ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೬.ಕನ್ಯಾ:
ಸರಕಾರಿ ಉದ್ಯೋಗಿಗಳಿಗೆ ಕೊಂಚ ಆತಂಕ. ಇಲೆಕ್ಟ್ರಾನಿಕ್ಸ್ ಉದ್ಯಮಗಳಿಗೆ ಅಧಿಕ ಬೇಡಿಕೆ. ಹೋಟೆಲ್ ಉದ್ಯಮಿಗಳಿಗೆ ಒಳ್ಳೆಯ ಹೆಸರು. ವೃತ್ತಿ ಪರಿಣತಿ ವೃದ್ಧಿಗೆ ಪ್ರಯತ್ನ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂತೃಪ್ತಿ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಕವಚ, ಸೂರ್ಯಮಂಡಲ ಸ್ತೋತ್ರ ಓದಿ.
೭ತುಲಾ:
ಅದೃಷ್ಟ ಒಲಿಯುವ ಸಮಯ ಸನ್ನಿಹಿತ. ಮನೋಬಲ ವೃದ್ಧಿಗೆ ಸಾಧನೆ ಮುಂದುವರಿಕೆ. ವೃತ್ತಿ ಪರಿಣತಿ ವೃದ್ಧಿಗೆ ಹಳಬರ ಮಾರ್ಗದರ್ಶನ. ಉದ್ಯೋಗ ಸ್ಥಾನಕ್ಕೆ ಗಣ್ಯ ವ್ಯಕ್ತಿಗಳ ಭೇಟಿ. ಹತ್ತಿರದ ದೇವಾಲಯಕ್ಕೆ ಸಂದರ್ಶನ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೮.ವೃಶ್ಚಿಕ:
ವಿನಾಯಕನ ಅನುಗ್ರಹಕ್ಕಾಗಿ ವಿಶೇಷ ಸಾಧನೆ. ಉದ್ಯಮ ಸ್ಥಾನದ ಹೊಸ ವ್ಯವಸ್ಥೆಯಲ್ಲಿ ನಿಧಾನ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ. ಹಳೆಯ ನಿಕಟ ಪರಿಚಿತರ ಅಕಸ್ಮಾತ್ ಭೇಟಿ. ಉದ್ಯೋಗ ಅರಸುವ ಶಿಕ್ಷಿತರಿಗೆ ಶುಭ ಸಮಾಚಾರ. ಗಣೇಶ ಅಷ್ಟಕ, ವೇದಸಾರ ಶಿವಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೯. ಧನು:
ಶುಭಪ್ರದ ಘಟನೆಗಳು ನಡೆಯುವ ಸೂಚನೆ. ಸಣ್ಣ ಪ್ರಮಾಣದ ಗೃಹೋದ್ಯಮ ಆರಂಭ. ಸ್ವಂತ ಮನೆ ಹೊಂದುವ ಹಂಬಲ ಈಡೇರುವ ಭರವಸೆ. ಊರಿನ ದೇವಾಲಯಕ್ಕೆ ಸಂದರ್ಶನ. ಕೌಟುಂಬಿಕ ವಿವಾದ ಸಂವಾದದಿಂದ ಪರಿಹಾರ. ಗಣೇಶ ಪಂಚರತ್ನ, ವಿಷ್ಣುಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೧೦. ಮಕರ:
ಇಮ್ಮಡಿ ಉತ್ಸಾಹದೊಂದಿಗೆ ದಿನಾರಂಭ. ಉದ್ಯಮಕ್ಕೆ ಸೇರ್ಪಡೆಯಾದ ಹೊಸ ನೌಕರರಿಗೆ ಆನಂದ. ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಮನೆಯಲ್ಲಿ ಗಣೇಶನ ವಿಶೇಷ ಆರಾಧನೆ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.
೧೧.ಕುಂಭ:
ಸತ್ಕರ್ಮಗಳಿಂದ ಪುಣ್ಯಸಂಪತ್ತು ವೃದ್ಧಿ. ಉದ್ಯೋಗಸ್ಥಾನದಲ್ಲಿ ಹೊಸಬರಿಗೆ ಮಾರ್ಗದರ್ಶನ. ಗೃಹೋದ್ಯಮ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ವಸ್ತುಗಳ ವಿತರಕರಿಗೆ ಅಪಾರ ಲಾಭ. ಬಂಧುಗಳ ಮನೆಯಲ್ಲಿ ದೇವತಾರ್ಚನೆ. ಗಣೇಶ ಕವಚ, ವಿಷ್ಣು ಸಹಸ್ರನಾಮ,ಶನಿಮಹಾತ್ಮೆ ಓದಿ.
೧೨.ಮೀನ:
ಕಾರ್ಯಕ್ಷೇತ್ರದಲ್ಲಿ ವಿನಾಯಕನ ಆರಾಧನೆ. ಸರಕಾರಿ ಇಲಾಖೆಗಳವರಿಂದ ಸಕಾರಾತ್ಮಕ ಸ್ಪಂದನ. ಅಧ್ಯಾಪಕರ ಸೇವೆಗೆ ಪ್ರಶಂಸೆ. ಕೃಷ್ಯುತ್ಪನ್ನಗಳ ವ್ಯಾಪಾರದಲ್ಲಿ ಲಾಭ. ಮನೆಮಂದಿಯೆಲ್ಲರ ಆರೋಗ್ಯ ಉತ್ತಮ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಮಹಾತ್ಮೆ ಓದಿ.