ದಿನ ಭವಿಷ್ಯ

29-09-2025

Sep 29, 2025 - 16:45
Sep 27, 2025 - 17:06
ದಿನ ಭವಿಷ್ಯ

               ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 2

೧.ಮೇಷ:

ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ  ಅನುಗ್ರಹ ಖಚಿತ. ಉದ್ಯೋಗ ಸ್ಥಾನದಲ್ಲಿ  ನಿಶ್ಚಿಂತೆ. ಉದ್ಯಮ,  ವ್ಯವಹಾರದಲ್ಲಿ ಉತ್ತಮ ಲಾಭ. ದೇವಿಯ ಆಲಯಕ್ಕೆ ಭೇಟಿ.  ಸಂಗಾತಿ ಮತ್ತು ಮಕ್ಕಳ ಆರೋಗ್ಯ ಉತ್ತಮ. ಗಣೇಶ ಕವಚ ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

೨.ವೃಷಭ:

ದೇವಿಯ ಪೂರ್ಣಾನುಗ್ರಹದ ದಿನ. ಉದ್ಯೋಗ ಸ್ಥಾನದಲ್ಲಿ ಕೋರಿಕೆಗೆ ಮನ್ನಣೆ. ಸರಕಾರಿ ಅಧಿಕಾರಿಗಳಿಗೆ ಅಪೇಕ್ಷಿತ ಸ್ಥಾನಕ್ಕೆ ವರ್ಗಾವಣೆ. ಅವಿವಾಹಿತರಿಗೆ ವಿವಾಹ ಯೋಗ.  ಕುಶಲಕರ್ಮಿಗಳಿಗೆ ಅವಕಾಶಗಳು ಗೋಚರ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೩. ಮಿಥುನ:

  ಸ್ಥಿರವಾದ ಆದಾಯಕ್ಕೆ ಪ್ರಯತ್ನ. ಸಹೋದ್ಯೋಗಿಗಳಿಗೆ ಸಹಾಯ ಮಾಡಿ ಹರ್ಷ. ಸ್ವಂತ ಉದ್ಯಮಕ್ಕೆ ಎದುರಾಳಿಗಳಿಂದ ಪ್ರಬಲ ಸ್ಪರ್ಧೆ. ಭಾಷಣ, ಬರವಣಿಗೆಯಿಂದ ನೆಮ್ಮದಿ. ದೇವತಾರ್ಚನೆ, ಧ್ಯಾನ, ಸತ್ಸಂಗದಲ್ಲಿ ಆಸಕ್ತಿ.ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ಆದಿತ್ಯ ಹೃದಯ ಓದಿ.
 

೪.ಕರ್ಕಾಟಕ:

 ಸತತ ಪರಿಶ್ರಮದಿಂದ ಕೀರ್ತಿ ಸಂಪಾದನೆ. ಉದ್ಯಮಕ್ಕೆ  ಕಾನೂನು ಸಮಸ್ಯೆಗಳಿಂದ ಮುಕ್ತಿ. ನೌಕರರ ಯೋಗಕ್ಷೇಮಕ್ಕೆ ವಿಶೇಷ ಯೋಜನೆ. ಖಾದಿ, ಗ್ರಾಮೋದ್ಯೋಗ  ಅಭಿವೃದ್ಧಿಗೆ ಕೊಡುಗೆ. ಮನೆಮಂದಿಯೊಂದಿಗೆ ದೇವಿಯ ದರ್ಶನ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೫ ಸಿಂಹ:

 ಉದ್ಯೋಗ ಸ್ಥಾನದಲ್ಲಿ ಕೊಂಚ ಎಡವಟ್ಟಿನ‌ ಸಾಧ್ಯತೆ. ಉದ್ಯಮದ  ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಪಶ್ಚಿಮದ  ಕಡೆಯಿಂದ ಶುಭ ಸಮಾಚಾರ. ಮಹಿಳೆಯರ ಗೃಹೋದ್ಯಮ ಯಶಸ್ಸಿನತ್ತ ಮುನ್ನಡೆ. ಕಾರ್ಯಕ್ಷೇತ್ರದಲ್ಲಿ ದೇವಿಯ ಆರಾಧನೆ.
ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.


೬.ಕನ್ಯಾ

ಸುತ್ತಲಿನ ವಿದ್ಯಮಾನಗಳಿಂದ ಕಸಿವಿಸಿ. ದೇವತಾ‌ ಪ್ರಾರ್ಥನೆಯಿಂದ ಸಮಾಧಾನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಅಧಿಕ‌ ವ್ಯಾಪಾರ. ವೃತ್ತಿ ಪರಿಣತಿ ವೃದ್ಧಿಗೆ  ಪ್ರಯತ್ನ. ಮಕ್ಕಳ ಅಧ್ಯಯನಾಸಕ್ತಿಗೆ ಪೋಷಣೆ. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

೭ತುಲಾ:

 ಅದೃಷ್ಟ ಒಲಿಯುವ ಸಮಯ ಸನ್ನಿಹಿತ. ಮನೋಬಲ ವೃದ್ಧಿಗೆ ಸಾಧನೆ ಮುಂದುವರಿಕೆ. ಖಾದಿ, ಗ್ರಾಮೋದ್ಯೋಗ ಉತ್ಪನ್ನಗಳಿಗೆ ಅನುಕೂಲ. ಉದ್ಯೋಗ ಸ್ಥಾನಕ್ಕೆ ಗಣ್ಯ ವ್ಯಕ್ತಿಗಳ  ಭೇಟಿ. ಹತ್ತಿರದ ದೇವಾಲಯಕ್ಕೆ  ಸಂದರ್ಶನ. ಗಣೇಶ ಸ್ತೋತ್ರ, ಶಿವ ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.

೮.ವೃಶ್ಚಿಕ:

 ಕೆಲಸ, ಕಾರ್ಯಗಳ ವೇಗವೃದ್ಧಿ.  ಉದ್ಯಮ ಸ್ಥಾನದ ಹೊಸ ವ್ಯವಸ್ಥೆಯಿಂದ ಅನುಕೂಲ. ಪಾಲುದಾರಿಕೆ ವ್ಯವಹಾರದಲ್ಲಿ  ಲಾಭ ಹೆಚ್ಚಳ.  ಉದ್ಯೋಗ ಅರಸುವ ಶಿಕ್ಷಿತರಿಗೆ ಶುಭ ಸಮಾಚಾರ. ಬಂಧುಗಳ ಮನೆಯ ಪೂಜೆಯಲ್ಲಿ ಭಾಗಿ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೯. ಧನು:

   ಉದ್ಯೋಗದಲ್ಲಿ ಯೋಗ್ಯತೆಗೆ ಸರಿಯಾದ ಸ್ಥಾನ ಲಭ್ಯ. ಸಣ್ಣ ಪ್ರಮಾಣದ ಗೃಹೋದ್ಯಮ ಆರಂಭ. ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ನೆಮ್ಮದಿ. ಊರಿನ ದೇವಾಲಯಕ್ಕೆ ಸಂದರ್ಶನ. ಧಾರ್ಮಿಕ ಸಾಹಿತ್ಯ ಅಧ್ಯಯನದಿಂದ ಸಮಾಧಾನ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

 

೧೦. ಮಕರ:

 ಇಮ್ಮಡಿ ಉತ್ಸಾಹದೊಂದಿಗೆ  ದಿನಾರಂಭ. ಉದ್ಯಮ ವೈವಿಧ್ಯೀಕರಣದಲ್ಲಿ ಮುನ್ನಡೆ. ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ  ನಿರೀಕ್ಷೆ ಮೀರಿದ ಲಾಭ. ಸ್ವಂತದ ಆರೋಗ್ಯ ರಕ್ಷಣೆಗೆ ಗಮನ. ಗಣೇಶ ಕವಚ ಶಿವಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

 ಸತ್ಕರ್ಮಗಳಿಂದ  ಪುಣ್ಯಸಂಪತ್ತು ವೃದ್ಧಿ. ಉದ್ಯೋಗಸ್ಥಾನದಲ್ಲಿ ಹೊಸಬರಿಗೆ ಮಾರ್ಗದರ್ಶನ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.  ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ವಸ್ತುಗಳ ವಿತರಕರಿಗೆ ಅಪಾರ ಲಾಭ‌. ಸಂಸಾರ ಸಹಿತ ದೇವಾಲಯ ದರ್ಶನ.ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಮಹಾತ್ಮೆ ಓದಿ.


೧೨.ಮೀನ:

 
  ಸಹೋದ್ಯೋಗಿಗಳಿಂದ ಸರ್ವವಿಧ ಸಹಾಯ. ಸರಕಾರಿ ಇಲಾಖೆಗಳವರಿಂದ ಸಕಾರಾತ್ಮಕ  ಸ್ಪಂದನ. ಅಧ್ಯಾಪಕರ ಸೇವೆಗೆ ಪ್ರಶಂಸೆ. ಸರಕಾರಿ ನೌಕರರಿಗೆ ಕೆಲಸದ ಹೊರೆ ಹೆಚ್ಚಳ. ದೇವಿಯ ಆಲಯದ ಪೂಜೆಯಲ್ಲಿ ಭಾಗಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.