ದಿನ ಭವಿಷ್ಯ:

09-07-2025

Jul 9, 2025 - 03:00
Jul 8, 2025 - 17:02
ದಿನ ಭವಿಷ್ಯ:

                 ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ  9

೧.ಮೇಷ:

  ಪರಿಶ್ರಮ ಅಧಿಕ, ಪ್ರತಿಫಲ ಸಾಮಾನ್ಯ. ಆದರೆ ನಿನ್ನೆಗಿಂತ ಇಂದು ಉತ್ತಮ ಉದ್ಯಮದಲ್ಲಿ  ಮಾಮೂಲು ಸ್ಥಿತ್ಯಂತರಗಳು. ಆಪ್ತರಿಂದ ಅಯಾಚಿತ ನೆರವು ಲಭ್ಯ. ಹಿರಿಯ ಗೃಹಿಣಿಯರ  ಆರೋಗ್ಯದ ಕಡೆಗೆ ಗಮನ ಇರಲಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

೨.ವೃಷಭ:

  ಉದ್ಯೋಗದಲ್ಲಿ ಸ್ಥಿತಿ ಸುಧಾರಣೆ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಲಸದ ಒತ್ತಡ. ಉದ್ಯಮಗಳಲ್ಲಿ ಉತ್ಪಾದನೆ ವೃದ್ಧಿ. ದೂರದಲ್ಲಿರುವ ನೆಂಟರ ಆಗಮನ ಶಾಸ್ತ್ರಾಧ್ಯಯನದಲ್ಲಿ ಒಲವು. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೩. ಮಿಥುನ:

  ಉದ್ಯೋಗ  ಕ್ಷೇತ್ರದಲ್ಲಿ  ಹಿತಶತ್ರುಗಳಿಂದ ತೊಂದರೆ. ಉದ್ಯಮದಲ್ಲಿ  ತಡೆಯಿಲ್ಲದ  ಪ್ರಗತಿ.  ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಸಂಗಾತಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ. ವೈಯಕ್ತಿಕ ಮಾರ್ಗದರ್ಶಕನ ಭೇಟಿ. ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೪.ಕರ್ಕಾಟಕ:

  ಹೊಸ ಸಹೋದ್ಯೋಗಿಗಳಿಗೆ ಶುಭದಿನ. ಉದ್ಯಮದ ಉತ್ಪಾದನೆಗಳ ಬೇಡಿಕೆಯಲ್ಲಿ  ಪ್ರಗತಿ.  ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಸಟ್ಟಾ ವ್ಯವಹಾರದಲ್ಲಿ ನಷ್ಟ. ಎಲ್ಲ ಮನೆಮಂದಿಗೂ ಉಲ್ಲಾಸದ ವಾತಾವರಣ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಶನಿಸ್ತೋತ್ರ ಓದಿ.


೫_ಸಿಂಹ:

  ಸಾಹಸಿ ಉದ್ಯಮಿಗಳಿಗೆ ಪೂರ್ಣ ಯಶಶ್ಸು. ಹೊಸ ಪಾಲುದಾರರಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ. ನೂತನ ವಾಹನ   ಖರೀದಿ. ಕುಟುಂಬ ಕ್ಷೇಮಾಭಿವೃದ್ಧಿ ಕುರಿತು ಸಮಾಲೋಚನೆ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಕಾರ್ತಿಕೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೬.ಕನ್ಯಾ:

  ದಿನವಿಡೀ ಶಾಂತಿ, ಸಮಾಧಾನದ ಅನುಭವ. ಆತ್ಮೀಯರಿಂದ ಅಯಾಚಿತ ನೆರವು. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋಗಾಸಕ್ತರಿಗೆ ಉತ್ತಮ ಅವಕಾಶಗಳು. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ಪಂಚರತ್ನ, ಶಿವಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೭ತುಲಾ:

ಪೂರ್ಣ ನಿಶ್ಚಿಂತೆಯ ಪರಿಸ್ಥಿತಿ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ. ಅಕಸ್ಮಾತ್ ಧನಾಗಮ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಸಂಭಾವನೆ. ಸಜ್ಹನರ ಸಹವಾಸದ ಅಪೂರ್ವ ಸಂದರ್ಭ. ಗಣಪತಿ ಅಥರ್ವಶೀರ್ಷ, ವಿಶ್ವನಾಥಾಷ್ಟಕ, ಲಕ್ಷ್ಮೀಸ್ತೋತ್ರ ಓದಿ.


೮.ವೃಶ್ಚಿಕ:
ಎಲ್ಲರನ್ನೂ‌ ಗೌರವಿಸುವ ಪ್ರವೃತ್ತಿಗೆ ಜನರ ಮೆಚ್ಚುಗೆ. ಉದ್ಯಮದಲ್ಲಿ   ಹೊಸ  ವಸ್ತುಗಳ ಉತ್ಪಾದನೆ. ಉತ್ಪನ್ನಗಳ ಗುಣಮಟ್ಟಕ್ಕೆ ಗ್ರಾಹಕರ  ಶ್ಲಾಘನೆ. ನೆಂಟರ ಆಗಮನದಿಂದ ಹಬ್ಬದ ವಾತಾವರಣ. ಗೃಹಿಣಿಯರ ಸ್ವಾವಲಂಬನೆ ಯೋಜನೆ  ಉನ್ನತ ಸ್ಥಿತಿಯಲ್ಲಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೯. ಧನು:

 ಉದ್ಯೋಗ ಸ್ಥಾನದಲ್ಲಿ ಸದ್ಭಾವನೆಗೆ  ಪಾತ್ರರಾಗುವಿರಿ.  ಸಣ್ಣ ಪ್ರಮಾಣದ  ಉದ್ಯಮಗಳ ಅಭಿವೃದ್ಧಿ. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ. ಸಂಸ್ಥೆಯ ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ. ಗಣಪತಿ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.


೧೦. ಮಕರ:
  ಉದ್ಯೋಗಸ್ಥರಿಗೆ ಗೌರವ ಪ್ರಾಪ್ತಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಮಾಮೂಲಿನಂತೆ ಲಾಭ. ಭೂಮಿ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಅನುಕೂಲ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ.ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಸಂಕಷ್ಡನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಗುರುಸ್ತೋತ್ರ ಓದಿ.

೧೧.ಕುಂಭ:

 ಲಾಭದಾಯಕ ಯೋಜನೆಗಳಲ್ಲಿ ಹಣ ಹೂಡಿಕೆ. ಉದ್ಯಮದಲ್ಲಿ ಕ್ರಮಾಗತ ಪ್ರಗತಿ. ದೂರದಲ್ಲಿರುವ ಬಂಧುಗಳ  ಆಗಮನ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಎಲ್ಲರ ಪೂರ್ಣ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಗಣೇಶ ಕವಚ, ಶಿವಕವಚ, ಶನಿಮಹಾತ್ಮೆ ಓದಿ.

೧೨.ಮೀನ:

ಹಲವು ಶುಭಫಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ತಾಯಿಯಕಡೆಯ ಹಿರಿಯರ ಆಗಮನ. ಪ್ರತಿಭಾವಂತ ಬಡ ಮಕ್ಕಳಿಗೆ ಸಹಾಯ ಮಾಡುವ ಅವಕಾಶ.  ಹಿರಿಯ ಸರಕಾರಿ ಅಧಿಕಾರಿಯ  ಭೇಟಿ.ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ